ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!

Bangalore : ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡದಂತೆ ಹೈಕಮಾಂಡ್‌ ಸೂಚಿಸಿದ್ದು, ಇದೀಗ ಸಿದ್ದರಾಮಯ್ಯ (Siddaramaiah favors Vidhan Parishad) ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ.  

ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ, ಸಿದ್ದರಾಮಯ್ಯ ಅವರ ರಾಜಕೀಯ ನಡೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ.

ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರನ್ನು ಯಾವುದೇ ಕ್ಷೇತ್ರದಿಂದ ಕಣಕ್ಕಿಳಿಸದೇ, ಅವರನ್ನು ಪ್ರಚಾರದಲ್ಲೇ ಹೆಚ್ಚು ಬಳಸಿಕೊಂಡು

ತದನಂತರ ವಿಧಾನ ಪರಿಷತ್‌ ಮೂಲಕ ಅವರನ್ನು ಆಯ್ಕೆ ಮಾಡುವ ತಂತ್ರವನ್ನು ಹೈಕಮಾಂಡ್‌ (High Command) ಸಿದ್ದಪಡಿಸಿದೆ ಎನ್ನಲಾಗಿದೆ.

ಹೈಕಮಾಂಡ್‌ನ ಈ ತಂತ್ರಕ್ಕೆ ಸಿದ್ದರಾಮಯ್ಯ ಒಲವು ತೋರಿದ್ದಾರೆ ಎನ್ನಲಾಗಿದೆ. ಈಗೀರುವ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ರಾಜ್ಯದ (Siddaramaiah favors Vidhan Parishad) ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರು,

ಅವರನ್ನು ಸೋಲಿಸಲು ಅನೇಕ ಶಕ್ತಿಗಳು ಒಂದಾಗುತ್ತವೆ. ಹೀಗಾಗಿ ಅವರನ್ನು ಕಣಕ್ಕಿಳಿಸಿದ್ರೆ, ಅದು ಪಕ್ಷದ ಪ್ರಚಾರ ಕಾರ್ಯದ  ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ : https://vijayatimes.com/mamata-banerjee-statement/

ಹೀಗಾಗಿ ವಿಧಾನ ಪರಿಷತ್‌ ಮೂಲಕ ಆಯ್ಕೆಯಾಗುವುದೇ ಉತ್ತಮ ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇನ್ನೊಂದೆಡೆ ಸಿದ್ದರಾಮಯ್ಯನವರ ತವರು ಕ್ಷೇತ್ರ ವರುಣಾದಿಂದಲೇ ಅವರು  ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ ಈ ಬಾರಿ ವರುಣಾ ಕ್ಷೇತ್ರದಲ್ಲೂ ಗೆಲುವು ಸುಲಭವಲ್ಲ.

ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧೆ ಮಾಡಿದರೆ, ಯಡಿಯೂರಪ್ಪ (Yediyurappa) ಪುತ್ರ ವಿಜಯೇಂದ್ರ ಕೂಡಾ ಅಲ್ಲಿಂದಲೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲ್ಲಿಯೂ ಕೂಡಾ ಭಾರೀ ಸ್ಪರ್ಧೆ ಏರ್ಪಡುವ ಸಾಧ್ಯತೆಯೇ ಹೆಚ್ಚು. 

ಸ್ವಲ್ಪ ಹೆಚ್ಚು-ಕಡಿಮೆಯಾದ್ರು ಸೋಲುವ  ಸಾಧ್ಯತೆಯೂ ಇದೆ. ಹೀಗಾಗಿ ಮರಳಿ ವರುಣಾ ಕ್ಷೇತ್ರಕ್ಕೆ  ಹೋಗುವ ಬಗ್ಗೆಯೂ ಸಿದ್ದರಾಮಯ್ಯ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಇನ್ನು ಸಿದ್ದರಾಮಯ್ಯ ಅವರು ಕೋಲಾರದಿಂದ (Kolara) ಸ್ಪರ್ಧೆ ಮಾಡುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಕಳೆದ ಒಂದು ತಿಂಗಳಿಂದ ಅಲ್ಲಿಯ ಪರಿಸ್ಥಿತಿ ಸಿದ್ದರಾಮಯ್ಯ ಪರವಾಗಿಲ್ಲ,

ಇದನ್ನೂ ಓದಿ : https://vijayatimes.com/eshwarappa-new-controversy/

ಮುಸ್ಲಿಂ ಸಮುದಾಯ ಸೇರಿದಂತೆ ಅನೇಕ ಸಮುದಾಯಗಳು ಸಿದ್ದು ವಿರುದ್ದ ಮುನಿಸಿಕೊಂಡಿದೆ. ಅದರಲ್ಲೂ ಮುಖ್ಯವಾಗಿ ದಲಿತ ಸಮುದಾಯ ಕೋಲಾರದಲ್ಲಿ ಸಿದ್ದರಾಮಯ್ಯ ಪರವಾಗಿ  ನಿಲ್ಲುವ  ಸಾಧ್ಯತೆಗಳು ಕಡಿಮೆ,

ಕುರುಬ ಸಮುದಾಯ  ಕೂಡಾ ಶೇ.೩೦ರಷ್ಟು ವರ್ತರೂ ಪ್ರಕಾಶ್‌ಕಡೆಗೆ ಒಲವು ತೋರಿದೆ. 

ಒಕ್ಕಲಿಗ ಸಮುದಾಯ ಸಿದ್ದರಾಮಯ್ಯನವರ ಹತ್ತಿರವೂ ಸುಳಿಯುವುದಿಲ್ಲ.  ಯಾವುದೇ ಪ್ರಬಲ ಸಮುದಾಯ ಸಿದ್ದರಾಮಯ್ಯ ಪರವಾಗಿ ಕೋಲಾರದಲ್ಲಿ ಕೆಲಸ ಮಾಡುವುದಿಲ್ಲ.

ಹೀಗಾಗಿ ಅಲ್ಲಿ ಅವರು ಗೆಲ್ಲಬೇಕಾದರೆ, ಸಾಕಷ್ಟು ಶ್ರಮವಹಿಸಬೇಕು, ಇಲ್ಲದಿದ್ದರೆ ಸೋಲು ನಿಶ್ಚಿತ ಎಂಬ ಸರ್ವೇಯ ಆಧಾರದ ಮೇಲೆಯೇ ಸಿದ್ದರಾಮಯ್ಯನವರು ಕೋಲಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. 

Exit mobile version