ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ ನೀಡಿದ್ದನ್ನು ನಾನು ಹಲವು ಬಾರಿ ಪ್ರಶ್ನಿಸಿದ್ದೇನೆ : ವಿವಾದಾತ್ಮಕ ಹೇಳಿಕೆ ನೀಡಿದ ಸಿದ್ದರಾಮಯ್ಯ

Karnataka: ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ ನೀಡಿದ್ದನ್ನು ಎಷ್ಟು ಜನ ವಿರೋಧ ಮಾಡಿದ್ದರು? ನಾನು ಇದನ್ನು ಹಲವು ಬಾರಿ ಪ್ರಶ್ನಿಸಿದ್ದೇನೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ (Siddaramaiah makes controversial statement) ಮಾತ್ರ ಮೀಸಲಾತಿ ನೀಡಬಹುದು ಎಂದು ಸಂವಿಧಾನ ಹೇಳಿದೆ.

ಇದರ ವಿರುದ್ಧ ಹಿಂದುಳಿದ ಜಾತಿಗಳ ಸ್ವಾಮೀಜಿಗಳು ಧ್ವನಿಯೆತ್ತಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು(Siddaramaiah) ಟ್ವೀಟ್‌(Tweet) ಮೂಲಕ ಆಗ್ರಹಿಸಿದ್ದು, ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಎಸ್,ಸಿ(SC) ಮೀಸಲಾತಿಯನ್ನು 15 ರಿಂದ 17% ಮತ್ತು ಎಸ್,ಟಿ(ST) ಮೀಸಲಾತಿಯನ್ನು 3 ರಿಂದ 7% ಗೆ ಏರಿಕೆ ಮಾಡಿದ್ದಾರೆ,

ಆದರೆ ಇದಕ್ಕೆ ಸಂವಿಧಾನ ತಿದ್ದುಪಡಿಯನ್ನೇ ಮಾಡಿಲ್ಲ. ನಾನು ಮೂಗಿಗೆ ತುಪ್ಪ ಹಚ್ಚುವವರನ್ನು ನೋಡಿದ್ದೆ, ಹಣೆಗೆ ತುಪ್ಪ ಹಚ್ಚುವವರನ್ನು ನೋಡಿದ್ದು ಇದೇ ಮೊದಲು.

ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಯಾದಗಿರಿ, ಕಲಬುರಗಿ, ಬೀದರ್ ಹಾಗೂ ಕೊಡಗಿನ ಕುರುಬರು, ಗೊಂಡ, ರಾಜಗೊಂಡ ಸಮಾಜವನ್ನು ಎಸ್,ಟಿ ಗೆ ಸೇರಿಸುವಂತೆ ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೇನೆ.

ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಕರ್ನಾಟಕದಲ್ಲಿ ತೆಲಂಗಾಣದಂತಹ ಯೋಜನೆಗಳನ್ನು ತರುತ್ತೇವೆ : ಹೆಚ್‌ಡಿಕೆ ಭರವಸೆ

ಇಲ್ಲಿಯ ವರೆಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ಬೊಮ್ಮಾಯಿ(Basavaraj Bommai) ಅವರು ಈ ಕೆಲಸ ಮೊದಲು ಮಾಡಿಸಲಿ.

ಕುರುಬರನ್ನು ಎಸ್.ಟಿ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿರುವುದನ್ನು ಸ್ವಾಗತಿಸುತ್ತೇನೆ.

ಇದನ್ನು ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಇಲ್ಲಿ ನಿಂತು ಮೀಸೆ ತಿರುವಿ ಭಾಷಣ ಮಾಡಿದಾಕ್ಷಣ ಆಗೋದಿಲ್ಲ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಮಾಡಿಸಬೇಕಾಗುತ್ತದೆ ಎಂದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, ನಾನೆಂದೂ ರಾಜಕೀಯ ಅಧಿಕಾರಕ್ಕೆ ಅಂಟಿಕೊಂಡು ಕೂತನವಲ್ಲ, ಸೋಲು- ಗೆಲುವು ಎಲ್ಲವನ್ನು ಕಂಡಿದ್ದೇನೆ,

ಸೋತಾಗ ಹೆದರಿ ಮನೆ ಸೇರಲಿಲ್ಲ, ಸೋತಾಗಲೂ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಿದ್ದೆ, ಗೆದ್ದಾಗಲೂ ಮಾಡಿದ್ದೆ, ಮುಂದೆಯೂ ಸಾಮಾಜಿಕ (Siddaramaiah makes controversial statement) ನ್ಯಾಯದ ಪರವಾಗಿಯೇ ಇರುತ್ತೇನೆ.

ಸಂಗೊಳ್ಳಿ ರಾಯಣ್ಣನ(Sangolli Rayanna) ಸ್ಮರಣಾರ್ಥ ಸಂಗೊಳ್ಳಿ ಮತ್ತು ನಂದಗಡದ ಅಭಿವೃದ್ಧಿ ಮಾಡಿದ್ದು ನಾವು.

100 ಎಕರೆ ಸರ್ಕಾರಿ ಜಮೀನನ್ನು ನೀಡಿ, ರಾಯಣ್ಣನ ಹೆಸರಲ್ಲಿ ಸೈನಿಕ ಶಾಲೆ ಮಾಡಿ, 262 ಕೋಟಿ ಹಣವನ್ನು ಕೂಡ ನೀಡಿದ್ದು ನಾನು.

ಇದನ್ನೂ ಓದಿ: ಅದಾನಿ ಅದ್ವಾನ ; ಭಾರತದ ಮಾರುಕಟ್ಟೆ ಉತ್ತಮವಾಗಿದೆ, ಉತ್ತಮವಾಗಿ ನಿಯಂತ್ರಿಸಲಾಗಿದೆ : ನಿರ್ಮಲಾ ಸೀತಾರಾಮನ್

ಇಷ್ಟಾದರೂ ಕೆಲವರು ಸಿದ್ದರಾಮಯ್ಯ ಏನು ಮಾಡಿದ್ದಾರೆ? ಎಂದು ಕೇಳುತ್ತಾರೆ. ಬೆಳ್ಳೋಡಿಯಲ್ಲಿ ಐಎಎಸ್(IAS) ಮತ್ತು ಐಪಿಎಸ್(IPS) ಕೋಚಿಂಗ್ ಸೆಂಟರ್ ಮಾಡಲು 4 ಎಕರೆ ಜಾಗ ಕೊಟ್ಟಿದ್ದೆ,

ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನು ಕೂಡ ನೀಡಿದ್ದೆ. ಮೈಲಾರಲಿಂಗ ಪ್ರಾಧಿಕಾರ ರಚನೆ ಮಾಡಿದ್ದು ಕೂಡ ನಾವು.

ಯಾವ ಧರ್ಮವೂ ಹಿಂಸೆ, ಕೊಲೆ ಮಾಡಿ, ಇನ್ನೊಬ್ಬರನ್ನು ನೋಯಿಸಿ ಎಂದು ಹೇಳುವುದಿಲ್ಲ. ಧರ್ಮಗಳು ಇರುವುದು ಜನರ ಕಲ್ಯಾಣಕ್ಕೆ. ಧರ್ಮ ಬದುಕಿಗೆ ಸನ್ಮಾರ್ಗವನ್ನು ತೋರಿಸುವಂತಿರಬೇಕು.

ಹಾಗಾಗಿಯೇ ಧರ್ಮವನ್ನು “ವೇ ಆಫ್ ಲೈಫ್” ಎಂದು ಹೇಳುತ್ತಾರೆ. ಇದು ನಾನು ಧರ್ಮವನ್ನು ನೋಡುವ ದೃಷ್ಟಿ. ನಾನು ಜಾತಿ ನೋಡಿ ಕಾರ್ಯಕ್ರಮಗಳನ್ನು ಮಾಡಿರಲಿಲ್ಲ.

ಅನ್ಯಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್(Indira Canteen), ಶೂಭಾಗ್ಯ ಸೇರಿದಂತೆ ನಮ್ಮ ಯಾವ ಯೋಜನೆಗಳೂ ಯಾವುದೇ ಒಂದು ಜಾತಿಗೆ ಸೀಮಿತವಾದುದ್ದಲ್ಲ.

ನಾಡಿನಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವವರೆಲ್ಲರೂ ಈ ಯೋಜನೆಗಳ ಫಲಾನುಭವಿಗಳಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ(Devanahalli Airport) ನಾಡಪ್ರಭು ಕೇಂಪೇಗೌಡರ(Nadaprabhu Kempe Gowda) ಹೆಸರನ್ನು ಮರುನಾಮಕರಣ ಮಾಡಿದ್ದು, ಕೆಂಪೇಗೌಡ ಪ್ರಾಧಿಕಾರ ರಚನೆ ಮಾಡಿದ್ದು ನಾನು.

ಈಗ ನನ್ನನ್ನೇ ಬಿಟ್ಟು ಜಯಂತಿ ಆಚರಣೆ ಮಾಡುತ್ತಾರೆ, ಸಂತೋಷ ಮಾಡಿಕೊಳ್ಳಲಿ. ನಾನು ಈ ನಿರ್ಧಾರ ಕೈಗೊಂಡಿದ್ದು ಕೆಂಪೇಗೌಡರ ಮೇಲಿನ ಅಭಿಮಾನ ಮತ್ತು ಗೌರವದಿಂದ ಹೊರತು ಜನಪ್ರಿಯತೆಗೆ ಅಲ್ಲ.

ನಾನು ಮುಖ್ಯಮಂತ್ರಿಯಾಗಿದ್ದಾಗಲೇ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ(Basavanna) ಪೋಟೊಗಳನ್ನು ಇಡುವುದನ್ನು ಕಡ್ಡಾಯಗೊಳಿಸಿದ್ದು,

ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ(Akkamahadevi) ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದ್ದು ನಾನು.

ಇದನ್ನೂ ಓದಿ: ಒಂದೇ ಕ್ಷೇತ್ರದ ಮೇಲೆ ಕಣ್ಣಿಟ್ಟ ಅಪ್ಪ-ಮಗ ; ಇಕ್ಕಟ್ಟಿಗೆ ಸಿಲುಕಿ ತಲೆಕೆಡಿಸಿಕೊಂಡ ಕಾಂಗ್ರೆಸ್‌ ನಾಯಕರು

ನಮ್ಮದು ಎಲ್ಲ ಜಾತಿಗಳನ್ನು ಗೌರವದಿಂದ ಕಾಣುವ ಪಕ್ಷ. ನಾನು ಮುಖ್ಯಮಂತ್ರಿಯಾಗಿರುವಾಗ ಕನಕ, ಭಗೀರಥ, ಕಿತ್ತೂರು ಚೆನ್ನಮ್ಮ ದೇವರದಾಸಿಮ್ಮಯ್ಯ, ಕೆಂಪೇಗೌಡ, ಟಿಪ್ಪು, ಅಂಬಿಗರ ಚೌಡಯ್ಯ ಮತ್ತು ಸೇವಾಲಾಲ್ ಜಯಂತಿಗಳನ್ನು ಸರ್ಕಾರದಿಂದಲೇ ಆಚರಿಸುವ ನಿರ್ಧಾರ ಕೈಗೊಂಡಿದ್ದೆ.

ಒಂದು ದಿನದ ಅವಧಿಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರ ಪಡೆದು ಮೇಲ್ಜಾತಿಯಲ್ಲಿನ ಬಡವರಿಗೆ 10% ಮೀಸಲಾತಿ ಜಾರಿ ಮಾಡಿದ್ದಾರೆ.

ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬಹುದು ಎಂದು ಸಂವಿಧಾನ ಹೇಳಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

Exit mobile version