ರಾಜ್ಯಾದ್ಯಂತ ಚಡ್ಡಿ ಸುಡುವ ಪ್ರತಿಭಟನೆ ; ಸಿದ್ದರಾಮಯ್ಯ ಎಚ್ಚರಿಕೆ!

Siddaramaiah

ಸಂವಿಧಾನದ(Constitution) ಮೂಲಭೂತ ಹಕ್ಕಿನಂತೆ ಎನ್‍ಎಸ್‍ಯುಐ(NSIU) ಪ್ರತಿಭಟನೆ ಮಾಡಿದೆ. ಆರಗ ಜ್ಞಾನೇಂದ್ರ(Araga Jnanendra) ಅವರು ಪೊಲೀಸರ ಮೇಲೆ ಒತ್ತಡ ಹಾಕಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪ್ರಕರಣ ಹಾಕಿಸಿದ್ದು ತಪ್ಪು.

ಗೃಹ ಸಚಿವರು ಅಗತ್ಯ ಇರುವ ಕಡೆಗೆ ಕ್ರಮಕೈಗೊಳ್ಳದೇ, ಅಗತ್ಯ ಇಲ್ಲದ ಕಡೆಗೆ ಕ್ರಮ ಕೈಗೊಳ್ಳುತ್ತಾರೆ. ಎನ್‍ಎಸ್‍ಯುಐ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ಮಾಡಿದವರನ್ನು ಕೂಡಲೇ ಬಂಧಿಸದಿದ್ದರೆ, ರಾಜ್ಯಾದ್ಯಂತ ಚಡ್ಡಿ ಸುಡುವ ಪ್ರತಿಭಟನೆ ಮಾಡಲಾಗುವುದು ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತ ನಾಯಕರ ಮೇಲೆ ಹಲ್ಲೆ ನಡೆಸಿದವರಿಗೆ ಮೃದು ಧೋರಣೆ.

ಕೋಮು ಪ್ರಚೋದನೆ ನೀಡುವವರಿಗೆ ಬೆಂಬಲ. ಹಗರಣ ನಡೆಸಿದವರಿಗೆ ರಕ್ಷಣೆ. ಸಂತ್ರಸ್ತೆಯದ್ದೇ ತಪ್ಪು ಎಂದು ಅತ್ಯಾಚಾರಿಗಳಿಗೆ ಪರೋಕ್ಷ ಬೆಂಬಲ. ಆದರೆ ಪ್ರತಿಭಟಿಸಿದ ವಿದ್ಯಾರ್ಥಿಗಳಿಗೆ ಜಾಮೀನು ರಹಿತ ಸೆಕ್ಷನ್‍ಗಳು. ಇದು ಬಿಜೆಪಿ ಸರ್ಕಾರದ(BJP Government) ನೈತಿಕ ದಿವಾಳಿತನಕ್ಕೆ ಸಾಕ್ಷಿ. ಪಠ್ಯ ಪರಿಷ್ಕರಣೆ ವಿರುದ್ದ ಪ್ರತಿಭಟನೆ ನಡೆಸಲು ಎನ್‍ಎಸ್‍ಯುಐ ಕಾರ್ಯಕರ್ತರು ಸಾಂಕೇತಿಕವಾಗಿ ಚಡ್ಡಿ ಸುಟ್ಟಿದ್ದಾರೆ. ಆದರೆ ಎನ್‍ಎಸ್‍ಯುಐ ಕಾರ್ಯಕರ್ತರು ಶಿಕ್ಷಣ ಸಚಿವರ ಮನೆಗೆ ಬೆಂಕಿ ಹಚ್ಚಲು ಬಂದಿದ್ದರು ಎಂದು ಆರೋಪಿಸಿ,

ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಡಕ್ಕೆ ಮಣಿದು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಶಿಕ್ಷಣ ಸಚಿವ(Education Minister) ಬಿ.ಸಿ.ನಾಗೇಶ್(BC Nagesh) ಅವರ ನಿವಾಸದ ಎದುರು ಎನ್‍ಎಸ್‍ಯುಐ ಪ್ರತಿಭಟನೆ ಹಮ್ಮಿಕೊಂಡಿತ್ತು. ಮನೆಗೆ ಬೆಂಕಿ ಹಚ್ಚುವ ಅಥವಾ ಬೆಂಕಿಯನ್ನು ಸಮಾಜ ವಿರೋಧಿ ಕೆಲಸಕ್ಕೆ ಬಳಸುವಂತ ಕೆಲಸ ಮಾಡಿಲ್ಲ. ಪ್ರತಿಭಟನೆ ಕಾನೂನು ವಿರೋಧಿ ಕೃತ್ಯ ಹೇಗಾಗುತ್ತದೆ?

ಕಾನೂನು ಉಲ್ಲಂಘನೆಗಾಗಿ ಗುಂಪುಗೂಡಿರುವುದು ಹೇಗಾಗುತ್ತೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Exit mobile version