ದೇಶ, ರಾಜ್ಯದ ಸಾಲ ಹೆಚ್ಚಳ, GDP ಕುಸಿತದ ಬಗ್ಗೆ ದೇಶದ ಪ್ರಧಾನಿಯಾದವರು ಮಾತನಾಡಬೇಕಲ್ಲವೇ? : ಸಿದ್ದರಾಮಯ್ಯ

Bengaluru : ರಾಜ್ಯಕ್ಕೆ ಆಗಮಿಸಿದಾಗ ಸಿಎಂ ಬೊಮ್ಮಾಯಿ ಅವರ ಬೆನ್ನುತಟ್ಟಿ ಹೋಗುವ ಪ್ರಧಾನಿ ಮೋದಿಯವರೇ, ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳು, ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ(Siddaramaiah Point Outs BJP) ಯಾವುದರ ಬಗ್ಗೆ ಮಾತನಾಡುತ್ತೀರಿ?

ದೇಶ, ರಾಜ್ಯದ ಸಾಲ ಹೆಚ್ಚಳ, ಜಿಡಿಪಿ ಕುಸಿಯುತದ ಬಗ್ಗೆ ದೇಶದ ಪ್ರಧಾನಿಯಾದವರು ಮಾತನಾಡಬೇಕಲ್ಲವೇ?  ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ರಾಜ್ಯ ಬಿಜೆಪಿ ಸರ್ಕಾರ(BJP Govt) ಏಕೆ ಕೆಂಪೇಗೌಡರ ದಕ್ಷ ಆಡಳಿತ ಮತ್ತು ಸಮಾಜ ಸೇವೆಯ ಮೌಲ್ಯಗಳನ್ನು ಅನುಸರಿಸುತ್ತಿಲ್ಲ?

ನಾಡಪ್ರಭು ನಿರ್ಮಿಸಿದ ಈ ಕನಸಿನ ನಗರ ಒಂದು ಕಾಲದಲ್ಲಿ ವಿಶ್ವದಾದ್ಯಂತ ಪ್ರಗತಿ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು.

ರಾಜ್ಯ ಬಿಜೆಪಿ ಸರ್ಕಾರದಿಂದ ಬೆಂಗಳೂರು 40% ಕಮಿಷನ್, ಗುಂಡಿಗಳು ಮತ್ತು ಪ್ರವಾಹಗಳಿಗೆ ಕುಖ್ಯಾತಿಯಾಗಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ : https://vijayatimes.com/siddu-strikes-bjp-govt/

ಪ್ರತಿ ವರ್ಷ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ವೈಭವೋಪೇತ ಸಂಪ್ರದಾಯಕ್ಕೆ ಚಾಲನೆ ನೀಡಿದ್ದು ಕಾಂಗ್ರೆಸ್.

ಬೆಂಗಳೂರಿನ ಸಂಸ್ಥಾಪಕರಿಗೆ ಸಂಬಂಧಿಸಿದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ನಾಡಪ್ರಭು ಕೆಂಪೇಗೌಡ ಪ್ರಾಧಿಕಾರವನ್ನು ಸ್ಥಾಪಿಸಿದ್ದೇವೆ.

ನಮ್ಮ ಕಾಂಗ್ರೆಸ್‌ ಪಕ್ಷ ನಾಡಪ್ರಭು ಕೆಂಪೇಗೌಡರ ಮೌಲ್ಯಗಳ ನೈಜ ಅನುಯಾಯಿ. ಅವರ ಗೌರವಾರ್ಥ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದೇವೆ. 

ಬೆಂಗಳೂರಿನ ಮುಖ್ಯ ಮೆಟ್ರೋ ನಿಲ್ದಾಣಕ್ಕೂ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. 

ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟಿಸಲು ಬೆಂಗಳೂರಿಗೆ ಆಗಮಿಸುತ್ತಿರುವ ಮೋದಿ ಅವರಿಗೆ ಸ್ವಾಗತ.

ಆದರೆ, ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ನಾಡಪ್ರಭು ಕೆಂಪೇಗೌಡರು(Nadaprabhu Kempegowda) ಮತ್ತು ಅವರ ಮೌಲ್ಯಗಳ ನಿಜವಾದ ಅನುಯಾಯಿಗಳೇ? ಎಂದು ಪ್ರಶ್ನಿಸಿದ್ದಾರೆ.

ಮೋದಿ ಅವರೇ, 4 ವರ್ಷಗಳ ಹಿಂದೆ ನೀವು ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಾಗ ನೀಡಿದ್ದ ಭರವಸೆಗಳೆಲ್ಲಾ ಏನಾಗಿವೆ?  ಸರ್ಕಾರದ 40% ಕಮಿಷನ್‍ ಬಗ್ಗೆ ಹಲವರು ನಿಮಗೆ ಪತ್ರಗಳನ್ನು ಬರೆದರು.

ಮತ್ತೋರ್ವ ಗುತ್ತಿಗೆದಾರ ದಯಾ ಮರಣ ಕೋರಿ ನಿಮಗೆ ಪತ್ರ ಬರೆದರು. ಈ ಎಲ್ಲ ಪತ್ರಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ?

https://youtu.be/6hqvlPjTG_0 ನೇತ್ರಾವತಿ ಕಾಪಾಡಿ!

ಪ್ರಧಾನಿಗಳಿಗೆ ನಾನು, ಡಿಕೆ ಶಿವಕುಮಾರ ಅವರು 10 ಪ್ರಶ್ನೆಗಳನ್ನು ಕೇಳಿ ಪತ್ರ ಬರೆದಿದ್ದೇವೆ, ಪ್ರಧಾನಿಗಳು ಇದಕ್ಕೆ ಉತ್ತರಿಸಲಿ. ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಪ್ರವಾಹ ಬರ ಬಂದಿತು, ಆಗ ರಾಜ್ಯಕ್ಕೆ ಬರಲಿಲ್ಲ. ಈಗ ಚುನಾವಣೆಯ ಕಾರಣಕ್ಕೆ ಪದೇ ಪದೇ ಕರೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version