ಸಿದ್ದರಾಮಯ್ಯನವರ ಓಲೈಕೆ ರಾಜಕಾರಣಕ್ಕೆ ಕಾಂಗ್ರೆಸ್‍ನಲ್ಲೇ ಅಪಸ್ವರ!

siddaramaiah

ಸಿದ್ದರಾಮಯ್ಯನವರು(Siddaramaiah) ಈ ಹಿಂದೆ ಪ್ರಯೋಗಿಸುತ್ತಿದ್ದ ರಾಜಕೀಯ(Political) ತಂತ್ರಗಾರಿಕೆಗಳ ಲೆಕ್ಕಾಚಾರ ಇದೀಗ ಫಲ ನೀಡುತ್ತಿಲ್ಲ. ಬಿಜೆಪಿ ಪ್ರಯೋಗಿಸುತ್ತಿರುವ ‘ಹಿಂದುತ್ವ’ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ವಿಫಲವಾಗುತ್ತಿದೆ.

ಹಿಜಾಬ್(Hijab) ವಿವಾದದಲ್ಲಿ ಕಾಂಗ್ರೆಸ್(Congress) ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳುವಲ್ಲಿ ವಿಫಲವಾಗಿತ್ತು. ಹೀಗಾಗಿಯೇ ಕಾಂಗ್ರೆಸ್ ಪಕ್ಷದ ‘ಜಾತ್ಯಾತೀತ’ ನಿಲುವಿನಿಂದ ಹಿಂದೆ ಸರಿಯಬೇಡಿ ಎಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದರೂ, ಜಾತ್ಯಾತೀತ ನಿಲುವಿನಿಂದ ಮತಗಳಿಸಲು ಸಾಧ್ಯವಿಲ್ಲ ಎಂಬುದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಅರ್ಥವಾಗಿದೆ. ಇನ್ನು ‘ಜಾತ್ಯಾತೀತ ನಿಲುವು’ ಎಂಬುದು ಅಲ್ಪಸಂಖ್ಯಾತರ ಓಲೈಕೆಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಅಲ್ಪಸಂಖ್ಯಾತರ ಓಲೈಕೆಯಿಂದ ಹಿಂದೂಗಳು ಒಗ್ಗೂಡುತ್ತಾರೆ.

ಜಾತಿಗಳಿಂದ ಹೊರಬಂದು ಹಿಂದೂ ಮತಬ್ಯಾಂಕ್ ಒಗ್ಗೂಡಿದರೆ ಅದರ ನೇರ ಲಾಭ ಬಿಜೆಪಿ ಪಡೆಯಲಿದೆ. ಈ ಎಲ್ಲ ಕಾರಣದಿಂದ ಜಾತ್ಯಾತೀತ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಕೆಲ ನಾಯಕರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಸಲಹೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಓಲೈಕೆ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತ್ರ ಅಲ್ಪಸಂಖ್ಯಾತರ ಪರ ಗಟ್ಟಿಯಾಗಿ ನಿಂತಿದ್ದು, ಕಾಂಗ್ರೆಸ್ ನಾಯಕರನ್ನು ನಿದ್ದೆಗೆಡಿಸಿದೆ.

ಅಲ್‍ಖೈದಾ ನಾಯಕ ಮಾತನಾಡಿರುವ ವಿಡಿಯೋ ಹಿಂದೆ ಆರ್‍ಎಸ್‍ಎಸ್ ಇದೆ ಎನ್ನುವ ಮೂಲಕ ಸಿದ್ದರಾಮಯ್ಯನವರ ಜಾತ್ಯಾತೀತ ನಿಲುವು ಅತಿಯಾದ ಓಲೈಕೆಯಾಗಿ ಮಾರ್ಪಟ್ಟಿರುವುದಕ್ಕೆ ಸಣ್ಣ ಉದಾರಣೆಯಾಗಿದೆ. ಜಮೀರ್ ಅಹಮದ್‍ನನ್ನು ಜೊತೆಗಿಟ್ಟುಕೊಂಡು ಸಿದ್ದರಾಮಯ್ಯ ನೀಡುತ್ತಿರುವ ಅನೇಕ ಹೇಳಿಕೆಗಳಿಂದ ಕಾಂಗ್ರೆಸ್‍ಗೆ ನಷ್ಟವಾಗುತ್ತಿದೆ. ಈಗಾಗಲೇ ಅಲ್ಪಸಂಖ್ಯಾತರ ಅತಿಯಾದ ಓಲೈಕೆಯ ಪರಿಣಾಮದಿಂದಲೇ ದೇಶಾದ್ಯಂತ ಕಾಂಗ್ರೆಸ್ ನೆಲಕಚ್ಚಿದೆ ಎಂದು ಈ ಹಿಂದೆಯೇ ಕಾಂಗ್ರೆಸ್‍ನ ಆಂತರಿಕ ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು.

ಈಗ ಸಿದ್ದರಾಮಯ್ಯ ಮಾಡುತ್ತಿರುವ ಓಲೈಕೆ ರಾಜಕಾರಣದಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷದ ಸ್ಥಿತಿ ಹೀನಾಯವಾಗಲಿದೆ ಎಂದು ಕೆಲ ನಾಯಕರು ಸಿದ್ದರಾಮಯ್ಯ ವಿರುದ್ದ ಕಿಡಿಕಾರುತ್ತಿದ್ದಾರೆ. ಸಿದ್ದರಾಮಯ್ಯನವರ ಓಲೈಕೆ ರಾಜಕಾರಣಕ್ಕೆ ಕಾಂಗ್ರೆಸ್‍ನಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಓಲೈಕೆ ರಾಜಕಾರಣದಿಂದ ಯಾವುದೇ ಪ್ರಯೋಜನವಿಲ್ಲ. ಎಲ್ಲರನ್ನೂ ಒಗ್ಗೂಡುವ ಜಾತ್ಯಾತೀತ ಸಿದ್ದಾಂತ ಬೇಕಿದೆ. ಇನ್ನು ಹಿಂದೂಗಳ ಬೆಂಬಲವಿಲ್ಲದೇ ರಾಜಕೀಯ ಅಸಾಧ್ಯ. ಹೀಗಾಗಿ ಹಿಂದೂ ಧಾರ್ಮಿಕ ಭಾವನೆಗಳನ್ನು ಬೆಂಬಲಿಸುತ್ತಲೇ ಜಾತ್ಯಾತೀಯ ನಿಲುವು ತಳೆಯಬೇಕಿರುವುದು ತುರ್ತು ಅಗತ್ಯವಾಗಿದೆ ಎಂದು ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ.

Exit mobile version