ಮೂರುಪಟ್ಟು ಸಾಲ ಮಾಡಿದ್ದೇ ಮೋದಿ ಸಾಧನೆ : ಸಿದ್ದರಾಮಯ್ಯ!

Congress

ನರೇಂದ್ರ ಮೋದಿ(Narendra Modi) ಪ್ರಧಾನಿಯಾದ(PrimeMinister) ನಂತರ ದೇಶದ ಒಟ್ಟು ಸಾಲದಲ್ಲಿ ಮೂರುಪಟ್ಟು ಏರಿಕೆಯಾಗಿದೆ. 2014ರಲ್ಲಿ 53 ಲಕ್ಷ ಕೋಟಿ ರೂ.

ಇದ್ದ ದೇಶದ ಸಾಲ, ಮೋದಿ ಅಧಿಕಾರಕ್ಕೆ ಬಂದ ನಂತರ 156 ಲಕ್ಷ ಕೋಟಿ ರೂ. ಏರಿಕೆಯಾಗಿದೆ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಹೇಳಿದರು. ಶಿರಸಿಯಲ್ಲಿ(Sirasi) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ ಎಂಟು ವರ್ಷಗಳ ಆಡಳಿತದಲ್ಲಿ ದೇಶದ ಸಾಲವನ್ನು ಮೂರುಪಟ್ಟು ಹೆಚ್ಚು ಮಾಡಿದ್ದೇ ನರೇಂದ್ರ ಮೋದಿ ಅವರ ಸಾಧನೆ. ನಮ್ಮ ದೇಶ ಈಗ ಸಾಲದ ಸುಳಿಗೆ ಸಿಲುಕಿದೆ.

156 ಲಕ್ಷ ಕೋಟಿ ರೂ. ಸಾಲವನ್ನು ತಿರಿಸುವುದು ಸುಲಭದ ಮಾತಲ್ಲ. ಇದಕ್ಕೆ ಬಡ್ಡಿ ಕಟ್ಟುವುದರಲ್ಲೇ ನಮ್ಮ ಬಹುಪಾಲು ಆದಾಯ(Income) ಕರಗಿ ಹೋಗುತ್ತದೆ. ಯಾವುದೇ ಆರ್ಥಿಕ ನೀತಿಗಳಿಲ್ಲದ ಪರಿಣಾಮ ಈ ರೀತಿಯ ಆರ್ಥಿಕ ದುಸ್ಥಿತಿ ಎದುರಾಗಿದೆ ಎಂದು ಟೀಕಿಸಿದರು. ಇನ್ನು ರಾಜ್ಯ ಬಿಜೆಪಿ(State BJP) ಸರ್ಕಾರವೂ ಕೂಡಾ ಪ್ರತಿವರ್ಷ 70 ಸಾವಿರ ಕೋಟಿ ರೂ. ಸಾಲ ಮಾಡುತ್ತಿದೆ. ರಾಜ್ಯದ ಮೇಲೂ ಸಾಲದ ತೂಗುಗತ್ತಿ ನೇತಾಡುತ್ತಿದೆ. ಪ್ರತಿವರ್ಷವೂ ರಾಜ್ಯ ಬಿಜೆಪಿ ಸರ್ಕಾರ ಕೊರತೆಯ ಬಜೆಟ್ ಮಂಡಿಸಿದೆ.

ಇನ್ನು ಆರ್ಥಿಕ ಶೃಂಗಸಭೆಯಲ್ಲಿ ಭಾಗಿಯಾದ ಮಾತ್ರಕ್ಕೆ ಬಂಡವಾಳ ಹರಿದು ಬರುವುದಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ನೆಲೆಸಬೇಕು. ಆಳುವ ಸರ್ಕಾರಗಳು ಉತ್ತಮ ಉದ್ಯಮಸ್ನೇಹಿ ನೀತಿಗಳನ್ನು ಹೊಂದಿರಬೇಕು. ಆಗ ಮಾತ್ರ ಬಂಡವಾಳ ಹೂಡಿಕೆದಾರರು ಬರುತ್ತಾರೆ. ಆದರೆ ಸದ್ಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.

ಈ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು. ದ್ವೇಷ ಹರಡುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

Exit mobile version