ಈ ಸರ್ಕಾರದ ವರ್ಷದ ಸಂಭ್ರಮವನ್ನು `ಭ್ರಷ್ಟೋತ್ಸವ’ ಎಂದು ಕರೆದರೆ ಅರ್ಥಪೂರ್ಣವಾಗುತ್ತದೆ : ಸಿದ್ದರಾಮಯ್ಯ

Bommai

ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮುಖ್ಯಮಂತ್ರಿಯಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 28 ರಂದು ಚಿಕ್ಕಬಳ್ಳಾಪುರದಲ್ಲಿ(Chikkaballapur) ವರ್ಷಾಚರಣೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಭ್ರಷ್ಟ(Corruption) ಹಣದಿಂದಲೇ ಅಧಿಕಾರಕ್ಕೆ ಬಂದು, ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಈ ಸರ್ಕಾರದ ವರ್ಷದ ಸಂಭ್ರಮವನ್ನು “ಭ್ರಷ್ಟೋತ್ಸವ” ಎಂದು ಕರೆದರೆ ಅರ್ಥಪೂರ್ಣವಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಲೇವಡಿ ಮಾಡಿದ್ದಾರೆ.


ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಅವರು, 2018ರ ಚುನಾವಣೆ(Election) ಪ್ರಣಾಳಿಕೆಯಲ್ಲಿ ಬಿಜೆಪಿ(BJP) ಜನತೆಗೆ ನೀಡಿದ್ದ ಭರವಸೆಗಳಲ್ಲಿ ಶೇ. ಹತ್ತನ್ನೂ ಈಡೇರಿಸುವ ಪ್ರಯತ್ನವನ್ನು ಮುಖ್ಯಮಂತ್ರಿಯಾಗಿ ಬಿಎಸ್ವೈ(BSY) ಅವರು ಮಾಡಿಲ್ಲ, ಬೊಮ್ಮಾಯಿ ಅವರೂ ಮಾಡಿಲ್ಲ. ಈ ವಚನ ಭ್ರಷ್ಟತೆಯನ್ನು ಸಂಭ್ರಮಿಸಲು ಬಿಜೆಪಿಗೆ ಯಾಕಿಷ್ಟು ಉಮೇದು? ಎಂದು ಪ್ರಶ್ನಿಸಿದ್ದಾರೆ. ಮೊಸರು, ಹಾಲು, ಮಂಡಕ್ಕಿ ಮುಂತಾದ ಬಡಜನರ ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿ(GST) ವಿಧಿಸಿದರೂ ಜಿಎಸ್ಟಿ ಕೌನ್ಸಿಲ್ ನಲ್ಲಿ ಈ ಬಗ್ಗೆ ಉಸಿರೆತ್ತದ ಬೊಮ್ಮಾಯಿ,

ಬಡವರ ಅನ್ನ ಕಸಿದದ್ದನ್ನೇ ತಮ್ಮ ಸಾಧನೆಯೆಂದು ಸಂಭ್ರಮಿಸಲು ಹೊರಟಿದ್ದಾರೆಯೇ? 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ವಿಶೇಷ ಅನುದಾನ ತರಲಾಗದೆ ಕೇಂದ್ರದ ನಾಯಕರ ಎದುರು ಮಂಡಿಯೂರಿ ಶರಣಾದ ಬೊಮ್ಮಾಯಿ ಅವರ ಸರ್ಕಾರ, ರಾಜ್ಯದ ಜನರಿಗೆ ಎಸಗಿದ ದ್ರೋಹವನ್ನೇ ಸಂಭ್ರಮಾಚರಣೆ ಮಾಡಲು ಹೊರಟಿದೆಯೇ? ಎಂದು ಪ್ರಶ್ನಿಸಿದ್ದಾರೆ. ಆಪರೇಷನ್ ಕಮಲದ ಮೂಲಕ ಬಿಎಸ್ವೈ ಅವರು ಮುಖ್ಯಮಂತ್ರಿಯಾಗಿದ್ದು. ಜುಲೈ 26, ಬೊಮ್ಮಾಯಿ ಅವರು ಆರ್.ಎಸ್.ಎಸ್ ನಿಂದ(RSS) ನೇಮಕಗೊಂಡದ್ದು ಜುಲೈ 28.

ದಿನಾಂಕ ಬದಲಿಸಿ ಸಂಭ್ರಮಾಚರಣೆ ಮಾಡಿದ ಮಾತ್ರಕ್ಕೆ ಇಬ್ಬರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಬದಲಾವಣೆ ಆಗುತ್ತದಾ? 40% ಕಮಿಷನ್, ಗುತ್ತಿಗೆದಾರ ಆತ್ಮಹತ್ಯೆ, ಪಿಎಸ್ಐ ನೇಮಕಾತಿ ಮತ್ತು ಉಪನ್ಯಾಸಕರ ನೇಮಕಾತಿ ಹಗರಣಗಳು ಸರ್ಕಾರದ ವರ್ಷದ ಸಾಧನೆಯಾಗಿದೆ. ಇಷ್ಟೆಲ್ಲಾ ಆರೋಪಗಳಿದ್ದರೂ ಒಮ್ಮೆಯೂ ತಮ್ಮನ್ನು ತಾವು ನ್ಯಾಯಯುತ ತನಿಖೆಗೆ ಒಳಪಡಿಸಿಕೊಳ್ಳದೆ ಸರ್ಕಾರ ಭಂಡತನ ಮೆರೆದಿದೆ ಎಂದು ಟೀಕಿಸಿದ್ದಾರೆ.

Exit mobile version