ಪಕ್ಷವೊಂದು ಸುದ್ದಿ ಮಾಧ್ಯಮಕ್ಕೆ ಬರುವುದಿಲ್ಲ ಎಂಬುದು ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಅಲ್ಲ – ಸಿಎಂ ಸಿದ್ದರಾಮಯ್ಯ

ಪಕ್ಷವೊಂದು ಸುದ್ದಿ ಮಾಧ್ಯಮಕ್ಕೆ ಬರುವುದಿಲ್ಲ, ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಅಲ್ಲ.ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತಾದ ಬಿಬಿಸಿ(BBC) ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದು ನಿಜವಾದ ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ @CMSiddaramaiah ಹೇಳಿದ್ದಾರೆ.

14 ಟಿವಿ (TV) ನಿರೂಪಕರಿಗೆ ಇಂಡಿಯಾ ಮೈತ್ರಿಕೂಟ ನಿಷೇಧ ಹೇರಿರುವ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಮಾಧ್ಯಮಗಳ ಮೇಲಿನ ನೈಜ ದಾಳಿಗಳ ಪಟ್ಟಿ ನಾವು ಕೊಡುತ್ತೇವೆ. ಇದನ್ನೆಲ್ಲ ನೀವು ಮರೆತಿರಬಹುದು, ಆದರೆ “ಇಂಡಿಯಾ” ಮರೆತಿಲ್ಲ. ಸತ್ಯದ ವರದಿ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದ ಪತ್ರಕರ್ತರು: ಸಿದ್ದಿಕ್ ಕಪ್ಪನ್, ಮೊಹಮ್ಮದ್ ಝುಬೇರ್, ಅಜಿತ್ ಓಝಾ (Ajit Ojha), ಜಸ್ಪಾಲ್ ಸಿಂಘ್, ಸಜದ್ ಗುಲ್.

ಇನ್ನು ಸತ್ಯದ ದನಿಯಾಗಿ ನಿಂತಿದ್ದಕ್ಕೆ ಮೋದಿ ಆಡಳಿತದಲ್ಲಿ ಕೊಲೆಯಾದ ಪತ್ರಕರ್ತರು: ರಾಕೇಶ್ ಸಿಂಗ್ (Rakesh Singh) ಉತ್ತರ ಪ್ರದೇಶ, ಸರ್ಕಾರಿ ನಿಧಿ ಅವ್ಯವಹಾರ ಕುರಿತು ವರದಿ ಶುಭಂ ಮಣಿ ತ್ರಿಪಾಠಿ, ಉತ್ತರ ಪ್ರದೇಶ (Uttara Pradesh) , ಮರಳು ದಂಧೆ ಕುರಿತು ವರದಿ. ಜಿ ಮೋಸೆಸ್, ತಮಿಳುನಾಡು, ಗೋಮಾಳ ಅಕ್ರಮ ಮಾರಾಟ ಕುರಿತು ವರದಿ. ಪರಾಗ್ ಭುಯಾನ್, ಅಸ್ಸಾಮ್, ಎಸ್ಐನೇಮಕಾತಿ ಹಗರಣ ಕುರಿತು ವರದಿ.

ಗೌರಿ ಲಂಕೇಶ್(Gouri Lankesh ಕೋಮುವಾದ ವಿರೋಧಿಸಿದ್ದಕ್ಕೆ. ಇನ್ನು ಪತ್ರಿಕಾ ಸ್ವಾತಂತ್ಯ್ರ: ಜಗತ್ತಿನಲ್ಲಿ ಭಾರತದ ಸ್ಥಾನ, ಅವಸಾನ – 2015 – 136ನೇ ಸ್ಥಾನ, 2019 – 140ನೇ ಸ್ಥಾನ, 2022 – 150ನೇ ಸ್ಥಾನ, 2023 – 161ನೇ ಸ್ಥಾನ ಪಡೆದಿದೆ ಎಂದು ಟೀಕಿಸಿದ್ದಾರೆ.

ಇನ್ನು ಇಂಡಿಯಾ ಮೈತ್ರಿಕೂಟವು ಅರ್ನಬ್ ಗೋಸ್ವಾಮಿ #Arnab Goswami, ನವಿಕಾ ಕುಮಾರ್, ಸುಧೀರ್ ಚೌಧರಿ, ಅದಿತಿ ತ್ಯಾಗಿ ಸೇರಿದಂತೆ 14 ಮಂದಿ ಸುದ್ದಿ ನಿರೂಪಕರು ಹಾಗೂ ಅವರ ಟಿವಿ ಶೋಗಳನ್ನು (TV Show) ಬಹಿಷ್ಕರಿಸುವುದಾಗಿ ಪಟ್ಟಿ ಬಿಡುಗಡೆ ಮಾಡಿದೆ. ಇವರೆಲ್ಲರೂ ಹಿಂದಿ ಹಾಗೂ ಇಂಗ್ಲಿಷ್ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇವರಲ್ಲಿ ಕೆಲವು ಮಹಿಳಾ ನಿರೂಪಕರೂ ಇದ್ದಾರೆ ಎನ್ನುವುದು ಗಮನಾರ್ಹವಾಗಿದೆ. ಕರ್ನಾಟಕದ (Karnataka) ಯಾವುದೇ ಸುದ್ದಿ ವಾಹಿನಿ ಕಾರ್ಯಕ್ರಮ ಅಥವಾ ನಿರೂಪಕರನ್ನು ಇದರಲ್ಲಿ ಹೆಸರಿಸಿಲ್ಲ.

Exit mobile version