ಯೋಗ ದಿನಾಚರಣೆ ಮತ್ತು ಸಿದ್ದರಾಮಯ್ಯನವರ ಟೀಕೆ!

Narendra Modi

ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರು ಯೋಗ ದಿನಾಚರಣೆ(Yoga Day) ಅಂಗವಾಗಿ ಈ ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಯೋಗ ದಿನಾಚರಣೆಗಾಗಿ ರಾಜ್ಯಕ್ಕೆ ಬಂದಿರುವುದನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ(Congress Leader) ಸಿದ್ದರಾಮಯ್ಯ(Siddaramaiah) ಮಾಡಿರುವ ಟ್ವೀಟ್ ಅವರ ಅರ್ಥಹೀನ ಮನಸ್ಥಿತಿಯನ್ನು ತೋರಿಸುತ್ತದೆ.


ಮೋದಿಯನ್ನು ಟೀಕಿಸುವ ಉದ್ದೇಶದಿಂದ ‘ಯೋಗ ಪ್ರಚಾರಕ್ಕಲ್ಲ, ಆರೋಗ್ಯಕ್ಕಾಗಿ’ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ ಟೀಕೆಗೂ ಒಂದು ತೂಕವಿರಬೇಕು. ಟೀಕಿಸಲೇಬೇಕು ಎಂಬ ಉದ್ದೇಶದಿಂದ ಟೀಕಿಸಿದರೆ ಮಾತುಗಳು ಅರ್ಥಹೀನವಾಗುತ್ತವೆ. ಈಗ ಸಿದ್ದರಾಮಯ್ಯ ಅವರು ಕೂಡಾ ಟೀಕಿಸಲೇಬೇಕೆಂದು ಟೀಕಿಸಿದ್ದರ ಪರಿಣಾಮ ಅವರ ಟೀಕೆ ಅರ್ಥಹೀನವಾಗಿದೆ. ಒಳ್ಳೆಯ ಸಂಗತಿಗಳನ್ನು ಜನರಿಗೆ ತಲುಪಿಸಲು ಪ್ರಚಾರ ಅಗತ್ಯ. ಈ ನಿಟ್ಟಿನಲ್ಲಿ ಯೋಗವನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಲು ಮೋದಿ ಶ್ರಮಿಸುತ್ತಿದ್ದಾರೆ.

ಪ್ರತಿವರ್ಷ ದೇಶದ ಬೇರೆ ಬೇರೆ ನಗರಗಳಲ್ಲಿ ಯೋಗ ದಿನಾಚರಣೆ ಮಾಡುವ ಮೂಲಕ ಯೋಗವನ್ನು ಪ್ರಚಾರ ಮಾಡುವುದು ಮೋದಿ ಉದ್ದೇಶ. ಈ ಉದ್ದೇಶದ ಹಿಂದೆ ರಾಜಕೀಯ ಆಯಾಮ ಇರಬಹುದೇನೋ..? ಆದರೆ ಒಳ್ಳೆಯ ಉದ್ದೇಶದೊಂದಿಗೆ ರಾಜಕೀಯ ಲಾಭ ಪಡೆದರೆ ತಪ್ಪಾಗುತ್ತದೆಯೇ..? ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಯೋಜನೆ ಮೂಲಕ ಹಸಿದವರಿಗೆ ಅನ್ನ ನೀಡಿದರು. “ಹಸಿದವನಿಗೆ ಅನ್ನ ನೀಡಬೇಕು, ಪ್ರಚಾರಕ್ಕಾಗಿ ಅಲ್ಲ’ ಎಂದು ವಿಪಕ್ಷಗಳು ಟೀಕಿಸಿದ್ದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ..?

ಹಸಿದವರಿಗೆ ಅನ್ನ ನೀಡುವ ಒಳ್ಳೆಯ ಕಾರ್ಯದ ಮೂಲಕ ನೀವು ಪ್ರಚಾರ ಪಡೆದುಕೊಂಡಿದ್ದೀರಿ. ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ಹೀಗಾಗಿ ಯೋಗ ದಿನಾಚರಣೆಯನ್ನು ಮೋದಿ ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯನವರ ಮಾತು ಅರ್ಥಹೀನ.

Exit mobile version