ಸಿದ್ದರಾಮಯ್ಯ : ಕೇಂದ್ರ ಗೃಹಸಚಿವ ಅಮಿತ್‌ ಶಾ ಆಗಮನಕ್ಕೆ ಸದನವನ್ನು ಮುಂದೂಡಿದ್ದು ಎಷ್ಟು ಸರಿ?

Bengaluru : ರಾಜ್ಯ ಬಿಜೆಪಿ(State BJP) ಸರ್ಕಾರ ಗೃಹ ಸಚಿವ ಅಮಿತ್‌ ಶಾ(Siddaramaiah Vs AmitShah) ಅವರ ಆಗಮನಕ್ಕಾಗಿ ಚಳಿಗಾಲದ ಬೆಳಗಾವಿ ಅಧಿವೇಶನವನ್ನು ಮುಂದೂಡಿರುವುದು ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ರವರ ಕೆಂಗಣ್ಣಿಗೆ ಗುರಿಯಾಗಿದೆ. ಇಂದು ಬೆಳಗಾವಿಯಲ್ಲಿ ನಡೆಯಬೇಕಿದ್ದ ಸದನವನ್ನು ರಾಜ್ಯ ಬಿಜೆಪಿ ಸರ್ಕಾರ ಮುಂದೂಡಿದ್ದು,

ಈ ಬಗ್ಗೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah Vs AmitShah) ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್‌ ಶಾ ಆಗಮನಕ್ಕೆ ಸದನವನ್ನು ಮುಂದೂಡಿದ್ದು ಎಷ್ಟು ಸರಿ? ರಾಜ್ಯದ ಅನೇಕ ಸಮಸ್ಯೆಗಳು, ಜನರ ಸಮಸ್ಯೆಗಳ ಪಟ್ಟಿಯನ್ನು ಚರ್ಚೆ ಮಾಡುವ ಅಗತ್ಯವಿದೆ.

ಆದ್ರೆ, ಬಿಜೆಪಿ ಸರ್ಕಾರ ಅಮಿತ್‌ ಶಾ ಆಗಮನದ ಹಿನ್ನಲೆ ಅವರ ಕಾರ್ಯಕ್ರಮಕ್ಕೆ ಹಾಜರಾಗಲು ಸದನವನ್ನು ರದ್ದು ಮಾಡಿದೆ ಎಂದು ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಸರಣಿ ಟ್ವೀಟ್‌ನಲ್ಲಿ ಸಿದ್ದರಾಮಯ್ಯನವರು ಹೇಳಿರುವುದೇನು? ಇಲ್ಲಿದೆ ಟ್ವೀಟ್‌(Tweet) ಓದಿ,

ಇದನ್ನೂ ಓದಿ : https://vijayatimes.com/expanded-metro-rail-service/

ಟ್ವೀಟ್‌ 1 : ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ನಾಳಿನ ಸದನವನ್ನು ರದ್ದು ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದ ನಿಲುವು ನಾಡ ವಿರೋಧಿಯಾದುದ್ದು.

ಸದನವನ್ನು ಇನ್ನು ಒಂದು ವಾರ ವಿಸ್ತರಿಸಿ, ಜನರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತೇನೆ.

https://youtu.be/gRAVtWuZck8

ಟ್ವೀಟ್‌ 2 : ಇನ್ನೂ ಹದಿನೈದು ದಿನ ಚರ್ಚಿಸಿದರೂ ಮುಗಿಯದಷ್ಟು ಜನರ ಸಮಸ್ಯೆಗಳಿವೆ, ಅವೆಲ್ಲವನ್ನೂ ಬದಿಗೊತ್ತಿ ಅಮಿತ್‌ ಶಾ ಅವರ ಎದುರು ನಡುಬಗ್ಗಿಸಿ ನಿಲ್ಲಲು ಸದನವನ್ನೇ ಮೊಟಕುಗೊಳಿಸಿರುವುದು ಜನತೆಯ ಮೇಲೆ ಬಿಜೆಪಿ ಸರ್ಕಾರಕ್ಕಿರುವ ಅಸಡ್ಡೆಯನ್ನು ತೋರುತ್ತದೆ.

ಹಳೆಯ ಪಿಂಚಣಿ ಪದ್ಧತಿ ಮರುಜಾರಿ, ಸರ್ಕಾರಿ ಉದ್ಯೋಗಗಳಿಗೆ(Govt job) ನೇಮಕಾತಿ, ಚಿಕಿತ್ಸೆ ಸಿಗದೆ ತುಮಕೂರಿನಲ್ಲಿ ಬಾಣಂತಿ, ಹಸುಗೂಸಿನ ಸಾವು ಇಂಥಾ ಹತ್ತಾರು ವಿಷಯಗಳು ಇನ್ನೂ ಚರ್ಚೆಯಾಗಬೇಕಿವೆ.

ಟ್ವೀಟ್‌ 3 : ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದ್ಯಾವುದು ಬೇಕಿಲ್ಲ, ಅವರಿಗೆ ಬೇಕಿರುವುದು ಅಮಿತ್‌ ಶಾ ಅವರ ಕೃಪಾಕಟಾಕ್ಷ ಮಾತ್ರ ಎಂದು ಸರಣಿ ಟ್ವೀಟ್‌ ಮೂಲಕ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಸದ್ಯ ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್‌ಗೆ ಬಿಜೆಪಿ ಅಥವಾ ಬಿಜೆಪಿ(BJP) ನಾಯಕರಿಂದ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೇ ದೊರಕಿಲ್ಲ!

Exit mobile version