ಸುಳ್ಳು ಹೇಳುವ ಕಲೆಯನ್ನು ಮೋದಿ ಸಿಟಿ ರವಿಯಿಂದ ಕಲಿತಿದ್ದಾ? ಸಿಟಿ ರವಿಯಿಂದ ಮೋದಿ ಕಲಿತಿದ್ದಾ? ; ರಾಜ್ಯ ಕಾಂಗ್ರೆಸ್

Bengaluru : ಮಾಂಸ ತಿಂದು ದೇವಾಲಯ ಪ್ರವೇಶಿಸಿರುವ ವಿವಾದ ಈಗ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (C.T.Ravi)ಅವರನ್ನು ಸುತ್ತಿಕೊಂಡಿದೆ. ಇಷ್ಟು ದಿನ ಬಿಜೆಪಿ ಸಿದ್ದರಾಮಯ್ಯ (Siddaramaiah)ಅವರನ್ನು ಈ ವಿವಾದದಲ್ಲಿ (Siddaramaiah vs C.T.Ravi) ಸಿಲುಕಿಸಿದ್ದ ಬಿಜೆಪಿ ಈಗ ಸ್ವತ:

ತಮ್ಮ ಪಕ್ಷದ ನಾಯಕರೇ ಈ ವಿವಾದದಲ್ಲಿ ಸಿಲುಕಿಕೊಂಡಿರುವುದನ್ನು ಸಮರ್ಥಿಸಿಕೊಳ್ಳಲು ಭಾರೀ ಕಸರತ್ತು ಮಾಡುತ್ತಿದೆ.

ಇದೇ ಅವಕಾಶವನ್ನು ಈಗ ಕಾಂಗ್ರೆಸ್ ಬಳಸಿಕೊಂಡು ಭಾರತೀಯ ಜನತಾ ಪಕ್ಷ ನಾನಾ ಪ್ರಶ್ನೆಗಳನ್ನು ಕೇಳುತ್ತಿದೆ.

ಮಾಂಸ ತಿಂದು ದೇವಸ್ಥಾನವನ್ನು ಹೇಗೆ ಪ್ರವೇಶಿಸಿದ್ದೀರಿ? ಸುಳ್ಳು ಹೇಳುವ ಕಲೆಯನ್ನು ಮೋದಿ ಸಿಟಿ ರವಿಯಿಂದ ಕಲಿತಿದ್ದಾ? ಸಿಟಿ ರವಿಯಿಂದ ಮೋದಿ ಕಲಿತಿದ್ದಾ? ಎಂದು ರಾಜ್ಯ ಕಾಂಗ್ರೆಸ್ ಸಿ.ಟಿ ರವಿ ವಿರುದ್ಧ ತೀವ್ರ ವ್ಯಂಗ್ಯವಾಡಿ ಪ್ರಶ್ನಿಸಿದೆ.

C.T.Ravi,

ರಾಜ್ಯ ಬಿಜೆಪಿ (Bjp)ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ ರವಿ ಅವರು, ಔತಣಕೂಟದಲ್ಲಿ ಪಾಲ್ಗೊಂಡು, ಮಾಂಸದ ಊಟವನ್ನು ಸೇವಿಸಿ, ದೇವಾಲಯವನ್ನು ಪ್ರವೇಶಿಸಿದ್ದಾರೆ ಎಂಬ ಆರೋಪ ಇದೀಗ ತೀವ್ರವಾಗುತ್ತಿದ್ದಂತೆ,

ಉತ್ತರಿಸಿರುವ ಸಿ.ಟಿ ರವಿ. ನೋಡ್ರಿ ನಾನು ಹುಟ್ಟಿರೋದೇ ಮಾಂಸ ತಿನ್ನುವ ಜಾತಿಯಲ್ಲಿ. ಮಾಂಸ (Meat)ಸೇವನೆ ಮಾಡಿದ್ದು ನಿಜ,

ಆದ್ರೆ, ನಾನು ದೇವಸ್ಥಾನಕ್ಕೆ ಪ್ರವೇಶ ಮಾಡಿಲ್ಲ. ದೇವಸ್ಥಾನಕ್ಕೆ ಹೋಗಿಲ್ಲ, ಬದಲಿಗೆ ರಸ್ತೆಯ ಬದಿ ನಿಂತು ಕೈಮುಗಿದಿದ್ದೇನೆ. ನಾನು ದೇವಸ್ಥಾನದ (Siddaramaiah vs C.T.Ravi) ಆವರಣವನ್ನು ಕೂಡ ಪ್ರವೇಶ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಕಾಂಗ್ರೆಸ್ ಮಾಡಿರುವ ಆರೋಪವನ್ನು ಪ್ರಶ್ನಿಸಿದಕ್ಕೆ ಉತ್ತರಿಸಿದ ಸಿ.ಟಿ ರವಿ, ನಾನು ಸಿದ್ದರಾಮಯ್ಯ (Siddaramaiah)ಅವರ ರೀತಿ ನಾನು ತಿಂತೀನಿ,

ತಿಂದು ಹೋಗ್ತೀನಿ ಎಂದು ಹೇಳುವ ದಾಟಿ ನನ್ನದಲ್ಲ. ನಾನು ಧಾರ್ಮಿಕ ಭಾವನೆಗಳನ್ನು ಗೌರವಿಸುವವನು.

ಇಂದಿಗೂ ಕೂಡ ಅದನ್ನು ಗೌರವಿಸಿಕೊಂಡು, ಪಾಲಿಸಿಕೊಂಡು ಬಂದಿದ್ದೀನಿ ಎಂದು ಹೇಳಿದರು. ಮತ್ತೊಬ್ಬರು. ಸರ್ ನೀವು ದೇವಾಲಯದ(Temple) ಆವರಣವನ್ನು ಪ್ರವೇಶಿಸಿದ್ದೀರಲ್ಲಾ?

ಎಂಬ ಪ್ರಶ್ನೆಗೆ ವಾದಿಸಿದ ಸಿ.ಟಿ ರವಿ, ನಾನು ರಸ್ತೆಯಲ್ಲೇ ನಿಂತು ಕೈಮುಗಿದಿದ್ದೇನೆ. ದೇವಸ್ಥಾನದ ಆವರಣಕ್ಕೂ ಕಾಲಿಟ್ಟಿಲ್ಲ ಎಂದು ಹೇಳಿದ್ದಾರೆ.

ಸಿ.ಟಿ ರವಿ ಅವರ ಹೇಳಿಕೆಯ ತುಣಕನ್ನು ಮುಂದಿಟ್ಟು ವ್ಯಂಗ್ಯವಾಡಿದೆ. ರಾಜ್ಯ ಬಿಜೆಪಿ ನಾಯಕರು ಹೇಳುವ ಸುಳ್ಳಿಗೆ ಸತ್ಯ ಅನ್ನೋದು ಸೂಸೈಡ್ ಮಾಡಿಕೊಂಡು ಸಮಾಧಿಯಾಗುತ್ತದೆ!

ಮಾಂಸ ತಿಂದಿದ್ದು ನಿಜ, ಆದರೆ ದೇವಸ್ಥಾನಕ್ಕೆ ಹೋಗಿಲ್ಲ, ರೊಡಲ್ಲೇ ನಿಂತಿದ್ದೇನೆ ಎನ್ನುವ ಸುಳ್ಳು ಏಕೆ ಸಿ.ಟಿ ರವಿ? ರೋಡಲ್ಲಿ ಘಂಟೆಗಳು ನೇತಾಡುತ್ತಿರುತ್ತವೆಯೇ? ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿರುವುದು ಸುಳ್ಳೇ? ಎಂದು ಪ್ರಶ್ನಿಸಿದೆ.

Exit mobile version