ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ : ಸಿದ್ದರಾಮಯ್ಯ!

siddaramaiah

ನಾನು ಸಕ್ರಿಯ ರಾಜಕೀಯದಲ್ಲಿ ಯಾವಾಗಲೂ ಇರುತ್ತೇನೆ, ಆದರೆ ಚುನಾವಣಾ ರಾಜಕೀಯದಿಂದ(Political) ನಿವೃತ್ತಿ(Retirement) ಪಡೆಯುತ್ತೇನೆ ಎಂದು ಮಾಜಿ ಸಿಎಂ(Former CM) ಸಿದ್ದರಾಮಯ್ಯ(Siddaramaiah) ಅಚ್ಚರಿ ಹೇಳಿಕೆ ನೀಡಿದ್ದಾರೆ. ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಚುನಾವಣಾ ರಾಜಕೀಯ ಮಾಡುವಷ್ಟು ದೈಹಿಕ ಶಕ್ತಿ ಉಳಿದಿಲ್ಲ.

ಮುಂಬರುವ 2024ರ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆಯಾಗಲಿದೆ. ಅದಾದ ನಂತರ ನಾನು ರಾಜಕೀಯದಲ್ಲಿ ಇರುತ್ತೇನೆ. ಆದರೆ ಚುನಾವಣಾ ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ತಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ರಾಜ್ಯದ ಅನೇಕ ನಾಯಕರು ಈಗಾಗಲೇ ನನಗೆ ಆಹ್ವಾನ ನೀಡಿದ್ದಾರೆ. ಆದರೆ ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಹೀಗಾಗಿ ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ತೀರ್ಮಾನ ಮಾಡಿಲ್ಲ.

ವರುಣಾ, ಚಾಮುಂಡೇಶ್ವರಿ ಮತ್ತು ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಲ್ಲಿಯ ಜನತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ನಿರ್ಧಾರ ತೆಗೆದುಕೊಂಡಿಲ್ಲ. ಕಳೆದ ಚುನಾವಣೆಯಲ್ಲಿ ನನಗೆ ರಾಜಕೀಯ ಪುನರ್‍ಜನ್ಮ ನೀಡಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಾನು ಸೋತಿದ್ದೆ, ಆದರೆ ಈ ಬಾರಿ ಅಲ್ಲಿಯೇ ಸ್ಪರ್ಧಿಸುವಂತೆ ಜನರು ಕೇಳಿಕೊಳ್ಳುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಚುನಾವಣೆ ಎಂದರೆ ಸೋಲು-ಗೆಲುವು ಅನಿವಾರ್ಯ. ಆದರೆ ಆ ಕ್ಷೇತ್ರದ ಮತದಾರರು ಸಾಕಷ್ಟು ಪ್ರೀತಿ ನೀಡಿದ್ದಾರೆ ಎಂದರು.

ಇನ್ನು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಆಡಿದ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸ್ಪೀಕರ್ ಸ್ಥಾನದಲ್ಲಿ ಕುಳಿತು, ನಮ್ಮ ಆರ್‍ಎಸ್‍ಎಸ್ ಎನ್ನುವುದು ಸರಿಯಲ್ಲ. ಸಭಾಪತಿಯಾದವರು ಪಕ್ಷಾತೀತರಾಗಿರಬೇಕು. ಯಾವುದೇ ಪಕ್ಷದ ನಿಲುವುಗಳನ್ನು ಪ್ರತಿಪಾದಿಸಬಾರದು. ನಾವು ಎಂದಿಗೂ ಆರ್‍ಎಸ್‍ಎಸ್ ವಿರೋಧಿಗಳು, ಆರ್‍ಎಸ್‍ಎಸ್ ಮನುವಾದವನ್ನು ಪ್ರತಿಪಾದಿಸುತ್ತದೆ. ಅದರ ಸಂಸ್ಕೃತಿ ಮನುವಾದಿ ಸಂಸ್ಕೃತಿ. ಇನ್ನು ಆರ್‍ಎಸ್‍ಎಸ್ ಎಂದಿಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಹಿಂದುತ್ವದ ಹೆಸರಿನಲ್ಲಿ ಸಮಾಜ ಒಡೆಯುವುದೇ ಆರ್‍ಎಸ್‍ಎಸ್ ಕೆಲಸ ಎಂದು ಟೀಕಿಸಿದರು.

Exit mobile version