ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಹಿಗ್ಗಾಮುಗ್ಗಾ ವಾಗ್ಧಾಳಿ

ಬೆಂಗಳೂರು, ಡಿ. 05: ಪತ್ರಿಕಾಗೊಷ್ಠಿಯಲ್ಲಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಹಿಗ್ಗಾಮುಗ್ಗಾ ವಾಗ್ಧಾಳಿಯನ್ನು ನಡೆಸಿದ್ದಾರೆ. ಕಾಂಗ್ರೆಸ್‌ ವಿರುದ್ಧ ಇದ್ದ ಆಕ್ರೋಶವನ್ನು ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಮಿತ್ರರೊಂದಿಗೆ ಮಾತನಾಡಿದ ಅವರು “ದೇವೆಗೌಡರ ಮಾತನ್ನು ಮೀರಬಾರದೆನ್ನುವ ಕಾರಣಕ್ಕೆ ನಾನು ಕಾಂಗ್ರೆಸ್‌ ಜೊತೆ ಮೈತ್ರಿ ಸರ್ಕಾರ ಮಾಡಿಕೊಂಡಿದ್ದೆ. ಆದರೆ, ಸಿದ್ಧರಾಮಯ್ಯನವರ ಗುಂಪು 12 ವರ್ಷದಿಂದ ನಾನು ಪಡೆದುಕೊಂಡು ಬಂದಿರುವ ಗುಡ್‌ ವಿಲ್‌ನ್ನು ಸರ್ವನಾಶ ಮಾಡಿದ್ದಾರೆ. ಮುಂಖ್ಯಮಂತ್ರಿಯಾಗಿ ಒಂದೇ ತಿಂಗಳಿಗೆ ಕಣ್ಣೀರು ಹಾಕಿದ್ದೆ ಆದರೆ ಅದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್‌ನ ಕುತಂತ್ರಗಳು. ಇನ್ನೊಂದು ರೀತಿಯಲ್ಲಿ ಹೇಳಲು ಹೋದರೆ ನಾನು ಕಾಂಗ್ರೆಸ್‌ನಿಂದ ಕಾಂಗ್ರೆಸ್‌ ರೀತಿಯ ಮಟ್ಟದಲ್ಲಿ ನನಗೆ ದ್ರೋಹ ಮಾಡಿರಲಿಲ್ಲ” ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.

ವಾಗ್ದಾಳಿಯನ್ನು ಮುಂದುವರೆಸಿದ ಅವರು, “ನಾನು ಮುಖ್ಯಮಂತ್ರಿ ಅವಧಿಯಲ್ಲಿ ಕಾಂಗ್ರೆಸ್‌ನವರನ್ನು ಒಳ್ಳೆಯ ರೀತಿಯಲ್ಲಿಯೇ ನಡೆಸಿಕೊಂಡಿದ್ದೇನೆ. ೧೪ ತಿಂಗಳ ಮುಂಖ್ಯಂತ್ರಿ ಅವಧಿಯಲ್ಲಿ 19 ಸಾವಿರ ಕೋಟಿ ರೂಪಾಯಿಯನ್ನು ಕಾಂಗ್ರೆಸ್‌ ಎಂಎಲ್‌ಎಗಳ ಕ್ಷೇತ್ರಾಭಿವೃದ್ಧಿಗಾಗಿ ವ್ಯಯಿಸಿದ್ದೇನೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನನಗೇನು ಲಭಿಸುತ್ತದೆ. ಅದೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ಆರು ತಿಂಗಳುಗಳ ಕಾಲ ಮುಖ್ಯಮಂತ್ರಿಯಾಗಿ ಕೆಟ್ಟ ಹೆಸರು ತೆಗೆದುಕೊಂಡು ಮನೆಗೆ ನಡೆಯುತ್ತಾರೆ ಎಂಬ ಸಿದ್ಧರಾಮಯ್ಯನವರು ಮಾತನಾಡಿದ್ದು ನನಗೆ ತಿಳಿದು ಬಂದಿದೆ. ಸಿದ್ಧರಾಮಯ್ಯನವರು ಪುನಃ ಮುಖ್ಯಮಂತ್ರಿಯಾಗುತ್ತೇನೆಂದು ಕನಸು ಕಾಣುತ್ತಿದ್ದಾರೆ. ಹೀಗೆ ಏನೇನು ಚರ್ಚೆ ನಡೆದಿದೆ. ಪೂರ್ವ ನಿಯೋಜನೆ ಮಾಡಿದ್ದಾರೆನ್ನುವುದು ನನಗೆ ತಿಳಿದಿದೆ. ಕಾಂಗ್ರೆಸ್‌ನವರ ಸಹವಾಸ ಮಾಡಿ ಸರ್ವನಾಶವಾದೆ. ಇನ್ನು ಯಾವತ್ತೂ ಕೂಡ ಕಾಂಗ್ರೆಸ್‌ ಸಹವಾಸ ಮಾಡಲ್ಲ ಎಂಬ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ ಮಾಜಿ ಮುಖ್ಯಮಂತ್ರಿ ಹೆಚ್‌ . ಡಿ. ಕುಮಾರಸ್ವಾಮಿ.

ಈ ಹೇಳಿಕೆಯಿಂದಾಗಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು.

Exit mobile version