ಬಿಜೆಪಿಗೆ ನೆಲೆಯಿಲ್ಲ, ಜೆಡಿಎಸ್‌ಗೆ ಅಭ್ಯರ್ಥಿಯಿಲ್ಲ; ಸಿದ್ದುಗೆ ಕಾಡಿತ್ತಾ ಸೋಲಿನ ಭಯ..?

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌(JDS),ಕಾಂಗ್ರೇಸ್(Siddhu haunted fear of defeat) ಈ ಮೂರು ಪಕ್ಷಗಳು ಇಗಾಗಲೇ ತಯಾರಿಯನ್ನು ಆರಂಭಿಸಿವೆ. 2023ಕ್ಕೆ ಅಧಿಕಾರದ ಸೂತ್ರ ಹಿಡಿಯಲು ಭಾರೀ ರಣತಂತ್ರಗಳು ಸಿದ್ದವಾಗುತ್ತಿವೆ.

ಗೆಲ್ಲುವುದಕ್ಕೆ ರಣತಂತ್ರ ಹೆಣೆಯುವುದರ ಜೊತೆಗೆ ಕೆಲ ನಾಯಕರನ್ನು ಗುರಿಯಾಗಿಸಿಕೊಂಡು, ಸೋಲಿಸುವ ರಣತಂತ್ರಗಳು ಕೂಡಾ ಸಿದ್ದವಾಗುತ್ತಿವೆ.

ಹೌದು, ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು(Siddaramaiah) ಸೋಲಿಸಲು ಕಳೆದ ಅನೇಕ ತಿಂಗಳಿಂದ ರಣತಂತ್ರಗಳು ಸಿದ್ದವಾಗುತ್ತಿವೆ.

ಜೆಡಿಎಸ್‌ ಮತ್ತು ಬಿಜೆಪಿ(BJP) ಪಕ್ಷಗಳು ಶತಾಯಗತಾಯ ಸಿದ್ದರಾಮಯ್ಯನವರನ್ನು ಸೋಲಿಸಲು ಸಿದ್ದತೆ ನಡೆಸಿದ್ದವು.

ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ 224 ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತಾರೆ ಎಂಬ ಪ್ರಶ್ನೆಗೆ ಇಷ್ಟು ದಿನಗಳ ಕಾಲ ಉತ್ತರವನ್ನೇ ನೀಡಿರಲಿಲ್ಲ.

ಇದೀಗ ಕೋಲಾರ(Kolar) ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಎಂದು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ, ಬಿಜೆಪಿ-ಜೆಡಿಎಸ್‌ ನಾಯಕರಿಗೆ ಶಾಕ್‌ ನೀಡಿದ್ದಾರೆ.

ಹೌದು, ಕೋಲಾರ ಕ್ಷೇತ್ರವನ್ನು ಸಿದ್ದರಾಮಯ್ಯನವರು ಆಯ್ಕೆ ಮಾಡಿಕೊಂಡಿರುವುದರ ಹಿಂದೆ, ಸಿದ್ದರಾಮ್ಯನವರಿಗೆ ಸೋಲಿನ ಭಯ ಕಾಡಿತ್ತಾ? ಎಂಬ ಪ್ರಶ್ನೆ ಮೂಡುತ್ತದೆ. ಮೇಲ್ನೋಟಕ್ಕೆ ಬೆಂಗಳೂರಿಗೆ ಹತ್ತಿರವಿರುವ ಕಾರಣಕ್ಕಾಗಿ ನಾನು ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ.

ಆದರೆ ಸಿದ್ದರಾಮಯ್ಯನವರು ತಮ್ಮ ತವರು ಜಿಲ್ಲೆಯಾದ ಮೈಸೂರಿನಲ್ಲೇ(Siddhu haunted fear of defeat) ಹಲವಾರು ಕ್ಷೇತ್ರಗಳಿದ್ದವು.

ಅದಲ್ಲದೆ ಪಕ್ಕದ ಚಾಮರಾಜನಗರದಲ್ಲೂ ಕ್ಷೇತ್ರಗಳಿದ್ದವು. ಆದರೆ ಇವೆಲ್ಲವನ್ನು ಬಿಟ್ಟು ಕೋಲಾರವನ್ನೇ ಆಯ್ಕೆ ಮಾಡಿಕೊಂಡಿದ್ದು, ಯಾಕೆ ಎಂಬುದನ್ನು ರಾಜಕೀಯ ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡಿದರೆ, ಅದಕ್ಕೆ ಸಿಗುವ ಉತ್ತರ ಸೋಲಿನ ಭಯ. ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಮತ್ತು ಹಳೇ ಮೈಸೂರಿನ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲವಾಗಿದೆ.

ಈ ಭಾಗದ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ, ನನ್ನನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಒಂದಾಗುತ್ತವೆ.

ಇದನ್ನೂ ಓದಿ: https://vijayatimes.com/people-killed-from-wild-elephants/

ಅದರಲ್ಲೂ ಕಳೆದ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಬಾದಾಮಿಯಲ್ಲಿ ಕೇವಲ 1500ಕ್ಕಿಂತ ಕಡಿಮೆ ಅಂತರದಿಂದ ಗೆದ್ದಿರುವುದು ಸಿದ್ದರಾಮಯ್ಯನವರ ಮನಸ್ಸಿನಲ್ಲಿ ಸೋಲಿನ ಭಯವನ್ನು ಮೂಡಿಸಿತ್ತು.

ಹೀಗಾಗಿಯೇ ಬಿಜೆಪಿ ಪ್ರಬಲವಾಗಿರುವ ಕ್ಷೇತ್ರಕ್ಕಿಂತ, ಬಿಜೆಪಿಗೆ ನೆಲೆಯಿಲ್ಲದಿರುವ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಉತ್ತಮ ಎಂಬುದು ಸಿದ್ದರಾಮಯ್ಯನವರ ತಂತ್ರವಾಗಿತ್ತು.
ಇದೀಗ ಅಂತಿಮವಾಗಿ ಸಿದ್ದರಾಮಯ್ಯನವರು ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕೋಲಾರದಲ್ಲಿ ಬಿಜೆಪಿ ಒಂದು ಬಾರಿಯೂ ಗೆಲುವು ಸಾಧಿಸಿಲ್ಲ. ಈ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯಿಲ್ಲ. ಇನ್ನೊಂದೆಡೆ ಜೆಡಿಎಸ್‌ಗೆ ಸೂಕ್ತ ಅಭ್ಯರ್ಥಿಯಿಲ್ಲ, ಸಂಘಟನಾತ್ಮಕವಾಗಿ ಕ್ಷೇತ್ರದಲ್ಲಿ ಜೆಡಿಎಸ್‌ತನ್ನ ಶಕ್ತಿ ಕಳೆದುಕೊಂಡಿದೆ.

2018ರಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಕೆ.ಶ್ರೀನಿವಾಸಗೌಡ(K Srinivas) ಬಹಿರಂಗವಾಗಿಯೇ ಸಿದ್ದರಾಮಯ್ಯನವರನ್ನು ಬೆಂಬಲಿಸಿದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ಕೋಲಾರ ಕ್ಷೇತ್ರ ಸಿದ್ದರಾಮಯ್ಯನವರಿಗೆ ಪುಲ್‌ಸೇಫ್‌ಎನ್ನಬಹುದು.

Exit mobile version