ಇಂದು ಟಿಪ್ಪು ಜಯಂತಿ ; ಟ್ವೀಟರ್‌ನಲ್ಲಿ ಶುಭಕೋರಿದ ಸಿದ್ದರಾಮಯ್ಯ, ಬಹುತೇಕ ಕಾಂಗ್ರೆಸ್‌ ನಾಯಕರು ಸೈಲೆಂಟ್!

ಬೆಂಗಳೂರು : ಇಂದು ನವೆಂಬರ್‌ ೧೦ ಟಿಪ್ಪು ಸುಲ್ತಾನ್‌ ಜಯಂತಿ(Siddu Wished for Tipu Jayanti) ದಿನವಾಗಿದ್ದರು ಸಿದ್ದರಾಮಯ್ಯ ಹೊರತುಪಡಿಸಿ ಬಹುತೇಕ ಕಾಂಗ್ರೆಸ್‌ ನಾಯಕರು ಸಾಮಾಜಿಕ ಮಾದ್ಯಮಗಳಲ್ಲಿ ಶುಭಕೋರುವ ಗೋಜಿಗೆ ಹೋಗಿಲ್ಲ.

ಇನ್ನು  ವಿಪಕ್ಷ ನಾಯಕ ಸಿದ್ದರಾಮಯ್ಯನವರು “ನವೆಂಬರ್‌10 ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಜಯಂತಿ. ಬ್ರಿಟಿಷ್‌ ಸಾಮ್ರಾಜ್ಯವನ್ನು ಸಿಂಹ ಸ್ವಪ್ನದಂತೆ (Siddu Wished for Tipu Jayanti) ಕಾಡಿದ ಟಿಪ್ಪು ಸುಲ್ತಾನರ ತ್ಯಾಗ ಮತ್ತು ಪರಾಕ್ರಮವನ್ನು ಹೆಮ್ಮೆಯಿಂದ ಸ್ಮರಿಸುತ್ತೇನೆ. ಅಪ್ರತಿಮ ದೇಶಪ್ರೇಮಿ, ವೀರ ಸ್ವಾತಂತ್ರ್ಯ ಹೋರಾಟಗಾರ,

ದಕ್ಷ ಆಡಳಿತಗಾರ ಮತ್ತು ಪರಧರ್ಮ ಸಹಿಷ್ಣು ಟಿಪ್ಪು ಸುಲ್ತಾನ್ ಓರ್ವ ಆದರ್ಶ ಸ್ವರೂಪಿ ಜನನಾಯಕ. ಟಿಪ್ಪು ಜಯಂತಿ ದಿನ ಅವರಿಗೆ ಗೌರವದ ನಮನಗಳು ಎಂದು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಹೊರತುಪಡಿಸಿ, ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ(Mallikarjun Kharge),

https://fb.watch/gIuubi8-0i/ ದಕ್ಷಿಣ ಕನ್ನಡ : ಅಂಗನವಾಡಿ ಮಕ್ಕಳ ಆಹಾರಕ್ಕೂ ಕಲ್ಲು!

ಕಾಂಗ್ರೆಸ್‌ ಶಾಸಕರಾದ ಪ್ರಿಯಾಂಕ್‌ಖರ್ಗೆ, ದಿನೇಶ್‌ಗುಂಡೂರಾವ್‌, ಜಿ. ಪರಮೇಶ್ವರ, ಲಕ್ಷ್ಮೀ ಹೆಬ್ಬಾಳ್ಕರ್‌, ಯು.ಟಿ,ಖಾದರ್‌, ಕೃಷ್ಣಭೈರೇಗೌಡ ಮತ್ತು ಜೆಡಿಎಸ್‌ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್‌.ಡಿ.ದೇವೇಗೌಡರು ಸೇರಿದಂತೆ ಅನೇಕ ನಾಯಕರು ಯಾವುದೇ ರೀತಿಯ ಶುಭಾಶಯ ಕೋರುವ ಪೋಸ್ಟ್‌ಹಾಕಿಲ್ಲ.

ಸಾಮಾಜಿಕ ಮಾದ್ಯಮಗಳಲ್ಲಿ ಚರ್ಚೆ ಶುರುವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೆಲ ಕಾಂಗ್ರೆಸ್‌ ನಾಯಕರು ಮಧ್ಯಾಹ್ನದ ನಂತರ ಶುಭಕೋರಿದ್ದಾರೆ.

ಬಹುತೇಕ ನಾಯಕರು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಸದಾ ಸಕ್ರಿಯರಾಗಿದ್ದರು ಕೂಡಾ ಟಿಪ್ಪು ಜಯಂತಿಗೆ ಶುಭಕೋರದಿರುವುದು ಸಾಮಾಜಿಕ ಮಾದ್ಯಮದಲ್ಲಿ ಅನೇಕ ರೀತಿಯ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಟಿಪ್ಪು ಸುಲ್ತಾನ್‌ ಕುರಿತ ವಿವಾದಗಳಿಂದ ಬಿಜೆಪಿ(BJP) ಪಕ್ಷ ಸಾಕಷ್ಟು ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ. ಹೀಗಾಗಿ ಟಿಪ್ಪು ಸುಲ್ತಾನ್‌ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳುವುದೇ ಉತ್ತಮ ಎಂಬ ನಿರ್ಧಾರಕ್ಕೆ ಕಾಂಗ್ರೆಸ್‌ ನಾಯಕರು ಬಂದಂತೆ ಕಾಣುತ್ತಿದೆ.

ಇದನ್ನೂ ಓದಿ : https://vijayatimes.com/mamata-banerjee-slams-bjp/

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಟಿಪ್ಪು  ಸುಲ್ತಾನ್‌ ಜಯಂತಿ ಆಚರಣೆಗೆ ತಂದಿತ್ತು. ಟಿಪ್ಪು ಸುಲ್ತಾನ್‌ ಜಯಂತಿಯನ್ನು ರಾಜ್ಯಾದ್ಯಂತ ಆಚರಣೆ ಮಾಡಲಾಗಿತ್ತು.

Exit mobile version