ವದಂತಿಗಳಿಗೆ ತೆರೆ ಎಳೆದ ಶೇರ್‌ಷಾ ಜೋಡಿ ; ಫಿಕ್ಸ್‌ ಆಯ್ತು ಮದುವೆ ದಿನಾಂಕ, ಸ್ಥಳ

New delhi : ಬಾಲಿವುಡ್‌ (Sidharth Malhotra Kiara wedding) ಅಂಗಳದಲ್ಲಿ ದ ಬೆಸ್ಟ್‌ ಜೋಡಿ ಎಂದೇ ಖ್ಯಾತರಾಗಿದ್ದ ನಟ ಸಿದ್ಧಾರ್ಥ್‌ ಮಲ್ಹೋತ್ರ ಮತ್ತು ನಟಿ ಕಿಯಾರಾ ಅಡ್ವಾಣಿ ಮದುವೆಯಾಗುತ್ತಾರೆ ಎಂಬ ವದಂತಿಗಳಿಗೆ ಇದೀಗ ಬ್ರೇಕ್‌ ಬಿದ್ದಿದೆ!

ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ನಟಿ ಕಿಯಾರಾ ಅಡ್ವಾಣಿ (Kiara Advani) ಇಬ್ಬರು ಪ್ರೀತಿಸುತ್ತಿರುವ ವಿಷಯ ಈ ಹಿಂದಿನಿಂದಲೂ ಸಾಕಷ್ಟು ಹರಿದಾಡಿತ್ತು. ಆದ್ರೆ,

ಇತ್ತೀಚಿಗೆ ಈ ಜೋಡಿ ಹೊಸ ವರ್ಷವನ್ನು ದುಬೈಗೆ (Dubai) ಹೋಗಿ ಆಚರಿಸಿಕೊಂಡಿತ್ತು. ಈ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ದೊಡ್ಡ ಸುದ್ದಿಯಾಗಿ, ಇವರಿಬ್ಬರ ಪ್ರೀತಿ ಖಚಿತ,

ಮದುವೆ ನಿಶ್ಚಿತ ಎಂದು ನೆಟ್ಟಿಗರು ಮಾತನಾಡಿಕೊಳ್ಳುವಂತೆ ಮಾಡಿತ್ತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಶೇರ್‌ಷಾ ಜೋಡಿಯ ಪ್ರೀತಿ-ಮದುವೆ ವದಂತಿಗೆ ಇದೀಗ ತೆರೆ ಎಳೆಯಲಾಗಿದೆ!

ಸಿದ್ದಾರ್ಥ್‌ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜೋಡಿಯ ವಿವಾಹದ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ವರದಿಯಾಗಿದೆ.

#SidharthKiaraWedding

ವರದಿಗಳ ಪ್ರಕಾರ, ಶೇರ್‌ ಷಾ ಜೋಡಿ ಇದೇ ಫೆಬ್ರವರಿ 6 ರಂದು ಮದುವೆಯಾಗಲು ಸಜ್ಜಾಗಿದ್ದು, ರಾಜಸ್ಥಾನದ (Rajasthan) ಜೈಸಲ್ಮೇರ್‌ನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಫೆಬ್ರವರಿ 6 ರಂದು ಈ ಜೋಡಿ ವಿವಾಹವಾಗಲಿದ್ದಾರೆ ಎಂದು ವರದಿ ಹೇಳಿದೆ.

ಸಿದ್ಧಾರ್ಥ್ ಮತ್ತು ಕಿಯಾರಾ ಫೆಬ್ರವರಿ 6 ರಂದು ಮದುವೆಯಾಗಲಿದ್ದು, ಅವರ ವಿವಾಹಪೂರ್ವ ಕಾರ್ಯಕ್ರಮಗಳು ಫೆಬ್ರವರಿ 4 ಮತ್ತು 5 ರಂದು (Sidharth Malhotra Kiara wedding) ನಡೆಯಲಿವೆ,

ಮದುವೆಗೆ ಅತಿಥಿಗಳು ಮತ್ತು ಕುಟುಂಬಗಳು ಸಾಂಪ್ರದಾಯಿಕ ಮೆಹೆಂದಿ, ಹಳದಿ ಮತ್ತು ಸಂಗೀತ ಸಮಾರಂಭಗಳನ್ನು ಆಚರಿಸಲು ಮುಂಚಿತವಾಗಿಯೇ ಯೋಜಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸುವುದು ಹೇಗೆ


ಈ ಬಗ್ಗೆ ಇಂಡಿಯಾ ಟುಡೇ(India Today) ಸುದ್ದಿವಾಹಿನಿ ಇತ್ತೀಚಿಗೆ ವರದಿ ಮಾಡಿದ್ದು, ನಟಿ ಕಿಯಾರಾ ಅಡ್ವಾಣಿ ಅವರು ಅಭಿನಯಿಸಿದ್ದ ಕಬೀರ್ ಸಿಂಗ್ (Kabir Singh) ಚಿತ್ರದ ನಟ ಶಾಹಿದ್ ಕಪೂರ್

(Shahid Kapoor) ಅವರು ಪತ್ನಿ ಮೀರಾ ರಜಪೂತ್ ಅವರೊಂದಿಗೆ ಜೈಸಲ್ಮೇರ್‌ನಲ್ಲಿ ನಡೆಯಲಿರುವ ಈ ಜೋಡಿಯ ವಿವಾಹಕ್ಕೆ ಆಗಮಿಸಿ, ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.


ಜೈಸಲ್ಮೇರ್‌ನಲ್ಲಿರುವ ಪಂಚತಾರಾ ಸೂರ್ಯಗಢ್ ಹೋಟೆಲ್‌ನಲ್ಲಿ ನಟ ಸಿದ್ದಾರ್ಥ್‌ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜೋಡಿ ಮದುವೆಯಾಗಲಿದ್ದಾರೆ ಎಂಬುದು ಖಚಿತವಾಗಿದ್ದು,
ಸದ್ಯ ಈ ಜೋಡಿಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಭಾರಿ ವದಂತಿಗಳಿಗೆ ಇದೀಗ ಬ್ರೇಕ್‌ ಬಿದ್ದಂತಾಗಿದೆ!
Exit mobile version