ಈ ಬ್ಯೂಟಿ ಟಿಪ್ಸ್ ಪಾಲಿಸಿದರೆ, ಬ್ಯೂಟಿ ಪಾರ್ಲರ್ಗೆ ಹೋಗುವ ಅವಶ್ಯಕತೆಯೇ ಇಲ್ಲ!

beauty

ಮನೆ, ಮಕ್ಕಳು, ಅಡಿಗೆ ಅಂತ ಹೆಣ್ಣುಮಕ್ಕಳಿಗೆ ತಮ್ಮ ಆರೈಕೆ ಮಾಡ್ಕೊಳ್ಳೋಕೆ ಸಮಯವೇ ಸಿಗೋದಿಲ್ಲ. ಕೆಲಸಕ್ಕೆ ಹೋಗುವ ಮಹಿಳೆಯರ ಪಾಡಂತೂ ಹೇಳತೀರದು. ಸಿಗುವ ಸ್ವಲ್ಪ ಸಮಯದಲ್ಲಿ ತ್ವಚೆಯ ಆರೈಕೆ ಮಾಡ್ಕೊಳ್ಳೋದು ಹೇಗೆ ಅಂತ ನಾವು ಹೇಳ್ತಿವಿ. ಈ ಸರಳ ಟಿಪ್ಸ್ಗಳನ್ನು ಪಾಲಿಸಿ.

ಮೊದಲನೆಯದಾಗಿ, ರಾತ್ರಿ ಮಲಗುವ ಮುನ್ನ ಚರ್ಮದ ಆರೈಕೆಯನ್ನು ಮಾಡಿ. ಮಲಗುವ ಮುನ್ನ, ಮುಖವನ್ನು ಫೇಸ್ ವಾಶ್‌ನಿಂದ ತೊಳೆಯಿರಿ. ಮುಖವನ್ನು ತೊಳೆದ ನಂತರ ರೋಸ್ ವಾಟರ್ ಅಥವಾ ನೈಟ್ ಕ್ರೀಮ್ ಮುಖಕ್ಕೆ ಹಚ್ಚಿ ನಿದ್ರಿಸಿ. ನೈಟ್ ಕ್ರೀಮ್ ಹಚ್ಚುವುದರಿಂದ, ಬೆಳಿಗ್ಗೆ ನಿಮ್ಮ ಮುಖವು ಹೊಳೆಯುವ ಮತ್ತು ಫ್ರೆಶ್ ಆಗಿ ಕಾಣುತ್ತದೆ. ಹೀಗೆ ಮಾಡುವುದರಿಂದ ಬೆಳಗ್ಗೆ ಸಮಯದ ಕೊರತೆಯಿದ್ದರೆ, ಕಾಜಲ್ ಮತ್ತು ಲಿಪ್ ಗ್ಲಾಸ್ ಮಾತ್ರ ಹಚ್ಚಿಕೊಂಡು ಸಹ ನೀವು ಸುಂದರವಾಗಿ ಕಾಣಿಸಬಹುದು.


ತಿಂಗಳಿಗೊಮ್ಮೆ ತಲೆ ಕೂದಲಿಗೆ ಮೊಸರು ಹಾಗೂ ಮೆಂತ್ಯದ ಪುಡಿ ಸೇರಿಸಿ ಪ್ಯಾಕ್‌ ಹಾಕುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ ಹಾಗೂ ಕೂದಲು ಹೊಳಪನ್ನು ಪಡೆಯುತ್ತದೆ.
ಅರ್ಧ ಚಮಚ ನಿಂಬೆರಸಕ್ಕೆ ಚಿಟಿಕೆ ಅರಿಶಿನ ಸೇರಿಸಿ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮುಖದಲ್ಲಿ ಗ್ಲೋ ಹೆಚ್ಚುತ್ತದೆ.
ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಒಂದೆರಡು ಹನಿ ಜೇನುತುಪ್ಪದೊಡನೆ ಸೇರಿಸಿ ಮುಖಕ್ಕೆ ಹಚ್ಚಿ, ಹತ್ತು ನಿಮಿಷದ ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ. ಇದರಿಂದ ಮುಖದ ಚರ್ಮ ಬಿಗಿಯಾಗುತ್ತದೆ. ವಯಸ್ಸಾಗುತ್ತಾ ಬಂದಂತೆ ಮುಖದ ಚರ್ಮ ಜೋತುಬೀಳುವ ಸಮಸ್ಯೆಯನ್ನು ತಡೆದು ನಿಲ್ಲಿಸಲು ಈ ಪ್ಯಾಕ್ ಸಹಾಯಕಾರಿ.


ಹೊರಗಡೆ ಹೋಗಿ ಬಿಸಿಲಿನಿಂದ ಮನೆಗೆ ಬಂದಾಗ ತಕ್ಷಣ ಐಸ್ ಕ್ಯೂಬಿನಿಂದ ಮುಖ ಹಾಗೂ ಕತ್ತನ್ನು ಉಜ್ಜಿಕೊಳ್ಳುವುದು ಸಾಮಾನ್ಯವಾಗಿ ಬಹುತೇಕ ಮಹಿಳೆಯರ ದಿನಚರಿ. ಆದರೆ, ನೆನಪಿಡಿ ಐಸ್ ಕ್ಯೂಬ್ ಹಿಡಿದು ನೇರವಾಗಿ ಮುಖಕ್ಕೆ ಉಜ್ಜಬೇಡಿ. ಹತ್ತಿಯ ಉಂಡೆ ಇಲ್ಲವೆ ಕಾಟನ್ ಬಟ್ಟೆಯ ಸಹಾಯದಿಂದ ರಬ್ ಮಾಡಿ. ಈ ರೀತಿ ಮಾಡುವುದರಿಂದ ಚರ್ಮದ ಕಾಂತಿ ಧೀರ್ಘವಾಗಿ ಉಳಿಯುತ್ತದೆ. ಪ್ರತಿದಿನ ರಾತ್ರಿ ನೀರಲ್ಲಿ ಒಂದೆರಡು ಬಾದಾಮಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಚರ್ಮ ತನ್ನ ಹೊಳಪನ್ನು ಧೀರ್ಘಕಾಲ ಉಳಿಸಿಕೊಳ್ಳಲು ಸಹಾಯಕವಾಗುತ್ತದೆ.


ಆಲೂಗಡ್ಡೆಯ ಸ್ಲೈಸ್ ತೆಗೆದುಕೊಂಡು ಮುಖದ ಮೇಲೆ ನಿಧಾನವಾಗಿ ಉಜ್ಜಿಕೊಳ್ಳುವುದರಿಂದ ಮುಖದಲ್ಲಿನ ಕಲೆ ಚುಕ್ಕೆಗಳು ಮಾಯವಾಗುತ್ತದೆ. ಪ್ರತಿ ಮೂರು ದಿನಗಳಿಗೊಮ್ಮೆ ಈ ರೀತಿ ಮಾಡುವುದರಿಂದ ಬೇಗನೆ ರಿಸಲ್ಟ್ ಪಡೆಯಬಹುದು
ಮೊಸರನ್ನು ಆಹಾರವಾಗಿ ಬಳಸುವುದರಿಂದ ತ್ವಚೆ ಹಾಗೂ ಕೂದಲು ಇವೆರೆಡರ ಸೌಂದರ್ಯವನ್ನು ದ್ವಿಗುಣಗೊಳಿಸಬಹುದು. ಮೊಸರನ್ನು ನೈಸರ್ಗಿಕ ಬ್ಲೀಚ್ ಆಗಿ ಬಳಸಬಹುದು. ನಿಯಮಿತವಾಗಿ ಮೊಸರಿನ ಫೇಸ್ ಫ್ಯಾಕ್ ಹಾಕುವುದರಿಂದ ಚರ್ಮದ ಸುಕ್ಕನ್ನು ತೆಗೆಯಬಹುದು.

Exit mobile version