‘ಸ್ಪರ್ಶ’ ಚಿತ್ರಕ್ಕೆ ಮಾಂತ್ರಿಕ ಸ್ಪರ್ಶ ನೀಡಿದ ಗಾಯಕ ಪಂಕಜ್​ ಉಧಾಸ್​ ಇನ್ನಿಲ್ಲ; ತೀವ್ರ ಅನಾರೋಗ್ಯದಿಂದ ನಿಧನ

ಜನಪ್ರಿಯ ಗಾಯಕ ಪಂಕಜ್​ ಉಧಾಸ್​ (Singer Pankaj Udhas No More) ಅವರು ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.

73ರ ಪ್ರಾಯದ ಅವರು ಇಂದು ಕೊನೆಯುಸಿರು ಎಳೆದಿದ್ದಾರೆ .ಅವರ ನಿಧನದ (Pankaj Udhas Death) ಸುದ್ದಿಯನ್ನು ಪುತ್ರಿ ನಯಾಬ್​ ಉಧಾಸ್​ ಖಚಿತಪಡಿಸಿದ್ದಾರೆ.

1980ರ ದಶಕದಲ್ಲಿ ಪಂಕಜ್​ ಉಧಾಸ್​ ಅವರು ಗಝಲ್​ ಗಾಯನದ ಮೂಲಕ ಫೇಮಸ್​ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್​ನ ಅನೇಕ ಸೂಪರ್​

ಹಿಟ್​ ಹಾಡುಗಳಿಗೆ (Pankaj Udhas Songs) ಅವರು ಧ್ವನಿ ನೀಡಿದ್ದರು. ಕಿಚ್ಚ ಸುದೀಪ್​ ಅಭಿನಯದ ‘ಸ್ಪರ್ಶ’ ಸಿನಿಮಾದ ಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರನ್ನು

ಅವರು (Singer Pankaj Udhas No More) ರಂಜಿಸಿದ್ದರು.

ಕಿಚ್ಚ ಸುದೀಪ್‌ (Sudeep) ಅಭಿನಯದ ಮೊದಲ ಸಿನಿಮಾ ಸ್ಪರ್ಶ (Sparsha) ಸೂಪರ್‌ ಡೂಪರ್‌ ಹಿಟ್ ಎನಿಸಿಕೊಂಡಿತ್ತು. ಈ ಸಿನಿಮಾದಲ್ಲಿ ಎಲ್ಲ ಹಾಡುಗಳೂ ಕೂಡ ಹಿಟ್

ಆಗಿತ್ತು. ಅದರಲ್ಲೂ ಚೆಂದಕಿಂತ ಚೆಂದ ಹಾಡಂತೂ ಈಗಲೂ ಫೇಮಸ್‌ ಅಂದ್ರೆ ತಪ್ಪಾಗಲ್ಲ.ಈಗಲೂ ಅದೆಷ್ಟೋ ಮಂದಿ ಈ ಹಾಡನ್ನು ಗುನುಗುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಈ

ಹಾಡು ಫೇಮಸ್‌ ಆಗಿತ್ತು. ಇದೀಗ ಇಂಥ ಒಂದು ಸೂಪರ್‌ ಹಿಟ್‌ ಗೀತೆ ಹಾಡಿದ್ದ ಪಂಕಜ್‌ ಉದಾಸ್ ಕೊನೆಯುಸಿರೆಳೆದಿದ್ದಾರೆ.

ಕನ್ನಡದಲ್ಲಿ ಕೇವಲ ಎರಡು ಹಾಡುಗಳನ್ನು ಮಾತ್ರ ಈ ಪಂಕಜ್‌ ಉದಾಸ್‌ ಹಾಡಿದ್ದಾರೆ. ಮಹೇಶ್ ಭಟ್ ಅವರ 1986 ರ ಕ್ರೈಮ್ ಥ್ರಿಲ್ಲರ್ ‘ನಾಮ್’ ಚಿತ್ರದ ‘ಚಿತ್ತಿ ಆಯಿ ಹೈ’

ಹಾಡು ಪಂಕಜ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು.


1990ರಲ್ಲಿ ಘಾಯಲ್‌ ಚಿತ್ರಕ್ಕಾಗಿ ಲತಾ ಮಂಗೇಶ್ಕರ್‌ ಜೊತೆಗಿನ ಅವರ ಯುಗಳ ಗೀತೆ “ಮಹಿಯಾ ತೇರಿ ಕಸಂ,” 1994ರಲ್ಲಿ ಮೊಹ್ರಾ ಸಿನಿಮಾಕ್ಕಾಗಿ ಸಾಧನಾ ಸರ್ಗಂ

ಜೊತೆಗೆ ಅವರು ಹಾಡಿದ “ನ ಕಜ್ರೇ ಕಿ ಧರ್”‌ ಜನಪ್ರಿಯವಾಗಿದ್ದವು.

ಸಾಜನ್‌, ಯೇ ದಿಲ್ಲಗಿ, ಫಿರ್‌ ತೇರಿ ಕಹಾನಿ ಯಾದ್‌ ಆಯೀ ಮುಂತಾದ ಸಿನಿಮಾಗಳಿಗೂ ಅವರು ಹಿನ್ನೆಲೆ ಗಾಯಕರಾಗಿದ್ದರು.ಭಾರತ ಸರ್ಕಾರ ಅವರಿಗೆ 2006ರಲ್ಲಿ ಪದ್ಮ ಶ್ರೀ

ನೀಡಿ ಗೌರವಿಸಿತ್ತು.ಪಂಕಜ್ ಉದಾಸ್ ನಿಧನಕ್ಕೆ ಬಾಲಿವುಡ್, ಗಝಲ್ ಪ್ರೇಮಿಗಳ ಕಂಬನಿ ಮಿಡಿದಿದ್ದಾರೆ. ಅವರು ಹಾಡಿದ ಗೀತೆಗಳನ್ನು ಹಾಡಿ ಶೋಕ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ರಾಹುಲ್ ಗಾಂಧಿಗೆ ಶಾಕ್: ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

Exit mobile version