ಹೊಸ ವರ್ಷಕ್ಕೆ ಜನವರಿಯಲ್ಲಿ ಬಿಡುಗಡೆಯಾಗಲಿರುವ ಭರ್ಜರಿ ಸ್ಮಾರ್ಟ್ ಫೋನ್‌ಗಳು

ಹೊಸ ವರ್ಷ 2024ಅನ್ನು ವಿಶ್ವ ಭರ್ಜರಿಯಾಗಿ ಸ್ವಾಗತಿಸಿದ್ದು, ಹೊಸ ವರ್ಷದಲ್ಲಿ ಏನಾದರು ಹೊಸದನ್ನು ಖರೀದಿಸಲು ಪ್ರತಿಯೊಬ್ಬರೂ ಬಯಸುತ್ತಾರೆ. ಅದರಂತೆ ನೀವು 2024 ಹೊಸ ವರ್ಷದಲ್ಲಿ ಸ್ಮಾರ್ಟ್‌ಫೋನ್ (Smartphones) ಖರೀದಿಸಲು ಯೋಚಿಸುತ್ತಿದ್ದರೆ ಒಳ್ಳೆಯ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ತಿಂಗಳು ಬಿಡುಗಡೆ ಆಗುತ್ತಿವೆ. ಅವುಗಳು ಯಾವುವು ಎನ್ನುವುದನ್ನು ತಿಳಿಯೋಣ…

ಹೊಸವರ್ಷಕ್ಕೆ ಅಂದರೆ ಜನವರಿ (January) 2024 ರಲ್ಲಿ ಬಿಡುಗಡೆಯಾಗಲಿರುವ ಈ ಫೋನ್ 6.78 ಇಂಚಿನ ಡಿಸ್​ಪ್ಲೇಯನ್ನು ಹೊಂದಿದ್ದು 512GB/1TB ರೂಪಾಂತರದಲ್ಲಿ ಬಿಡುಗಡೆ ಆಗಲಿದೆ.ಎಂಬ ಮಾತಿದೆ.ಏಸಸ್ ರಾಗ್ ಫೋನ್ 8 ಏಸಸ್ ರಾಗ್ ಫೋನ್ 8 ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾಗೆ ಸಂಬಂಧಿಸಿದಂತೆ, ಇದು 50 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು (Camera) ನೀಡುತ್ತದೆ.

ಈ ಸ್ಮಾರ್ಟ್‌ಫೋನ್ ಜನವರಿ 23 ರಂದು ಬಿಡುಗಡೆ ಆಗುವುದು ಬಹುತೇಕ ಖಚಿತವಾಗಿದೆ. ಒನ್​ಪ್ಲಸ್ 12 ಸರಣಿ ಬಹುನಿರೀಕ್ಷಿತ ಒನ್​ಪ್ಲಸ್ 12 ಸರಣಿಯು 2024ರಲ್ಲಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ.ಈ ಫೋನ್ 6.82-ಇಂಚಿನ HD+ LTPEO OLED ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 3 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತಿದೆ. ಇದರಲ್ಲಿ 64 MP ಹಿಂಬದಿಯ ಕ್ಯಾಮೆರಾ ಮತ್ತು 32 MP ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಚೀನೀ ಸ್ಮಾರ್ಟ್‌ಫೋನ್ ರೆಡ್ಮಿ ನೋಟ್ (Redmi Note) 13 ಸರಣಿ ದೈತ್ಯ ರೆಡ್ಮಿ ಮುಂದಿನ ವರ್ಷ ನೋಟ್ 13 ಸರಣಿಯನ್ನು ಬಿಡುಗಡೆ ಮಾಡಲಿದ್ದು ಈ ಸರಣಿ ಅಡಿಯಲ್ಲಿ ನೋಟ್ 13, ನೋಟ್ 13 ಪ್ರೊ ಮತ್ತು ನೋಟ್ 13 ಪ್ರೊ ಪ್ಲಸ್ ಮಾದರಿಗಳು ಇವೆ. ಈ ಫೋನ್‌ಗಳು 6.67-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ನೋಟ್ 13 ರಲ್ಲಿ 100 ಮೆಗಾ ಪಿಕ್ಸೆಲ್ ಕ್ಯಾಮೆರಾ ಮತ್ತು ನೋಟ್ 13 ಪ್ರೊ ಮಾದರಿಗಳಲ್ಲಿ 200 ಎಂಪಿ ಕ್ಯಾಮೆರಾವನ್ನು ನೀಡಲಾಗುವುದು. ಈ ಫೋನ್ 5000 mAh ಬ್ಯಾಟರಿಯನ್ನು ಹೊಂದಿದೆ.

ವಿವೋ X100 ಸರಣಿಯು ಮುಂದಿನ ವರ್ಷ ಜನವರಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಸರಣಿಯ ಭಾಗವಾಗಿ, ವಿವೋ X100 ಮತ್ತು ವಿವೋ X100 ಪ್ರೊ ಹೆಸರಿನ ಎರಡು ಫೋನ್‌ಗಳನ್ನು ಬಿಡುಗಡೆಯಾಗಲಿವೆ,ಇದು 6.78 ಇಂಚಿನ 8 LTPO AMOLED ಡಿಸ್ಪ್ಲೇಯನ್ನು ಹೊಂದಿರಲಿದೆ ಕ್ಯಾಮೆರಾಗೆ ಸಂಬಂಧಿಸಿದಂತೆ, ಇದು 50-ಹಿಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ

ಮಾರುಕಟ್ಟೆಯಲ್ಲಿ ಬರುತ್ತಿರುವ ಮತ್ತೊಂದು ಹೊಸ ಫೋನ್ ಸ್ಯಾಮ್​ಸಂಗ್ ಗ್ಯಾಲಕ್ಸಿ (Samsung Galaxy) S24 ಈ ಸರಣಿಯ ಭಾಗವಾಗಿ ಗ್ಯಾಲಕ್ಸಿ S24, ಗ್ಯಾಲಕ್ಸಿ S24+ ಮತ್ತು ಗ್ಯಾಲಕ್ಸಿ S24 ಅಲ್ಟ್ರಾ ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು ಕ್ವಾಲ್ಕಣ ಸ್ನಾಪ್​ಡ್ರಾಗನ್ 8 Gen 3 SoC ಪ್ರೊಸೆಸರ್​ನೊಂದಿಗೆ ಬರಲಿದೆ IP68 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳು ನಿರೋಧಕ, 8K ಒಳ್ಳೆ ಗುಣಮಟ್ಟದ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು.

ಮೇಘಾ ಮನೋಹರ ಕಂಪು

Exit mobile version