ತಮ್ಮ ಹಾವಭಾವಗಳಲ್ಲೇ ಜನರನ್ನು ನಗಿಸುವ ‘ಕೇಬಿ ಲೇಮ್’ ಅವರ ಆದಾಯ ನಿಮ್ಮನ್ನು ಅಚ್ಚರಿಗೊಳಿಸುತ್ತದೆ!

Kaby Lame

ಈ ಆಧುನಿಕ ಯುಗದಲ್ಲಿ ಜಾಲತಾಣಗಳ ಬಗ್ಗೆ ತಿಳಿಯದವರು ಯಾರಿದ್ದಾರೆ? ಹೆಚ್ಚಿನವರು ಸಕ್ರಿಯರಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಮೀಮ್ಸ್(Memes) ಹಾಗೂ ಶಾರ್ಟ್ ವಿಡಿಯೋಗಳು(Short Videos) ಟ್ರೆಂಡ್(Trend) ಆಗಿದೆ. ಈ ಕಿರು ವಿಡಿಯೋಗಳಿಂದ ಅದೆಷ್ಟೋ ಯುವ ಪ್ರತಿಭೆಗಳಿಗೆ ಉತ್ತಮ ಪ್ಲಾಟ್ ಫಾರ್ಮ್ ಸಿಕ್ಕಿದೆ ಎನ್ನಬಹುದು. ಟಿಕ್ ಟಾಕ್(Tik Tok) ಎಂಬ ಶಾರ್ಟ್ ವಿಡಿಯೋ ಆ್ಯಪ್ ನಿಂದ ಪ್ರಾರಂಭವಾದ ಈ ಹೊಸ ಯುಗ, ಇದೀಗ ಹಲವಾರು ಆಯಾಮಗಳನ್ನು ತೆಗೆದುಕೊಂಡಿದೆ. ಸದ್ಯ ಕೆಲವು ಕಾರಣಗಳಿಂದ ಭಾರತದಲ್ಲಿ ಟಿಕ್ ಟಾಕ್ ಅನ್ನು ಬ್ಯಾನ್ ಮಾಡಲಾಗಿದೆ.

ಆದರೆ ಇದಕ್ಕೆ ಪರ್ಯಾಯವೆಂಬಂತೆ ಇನ್ಸ್ಟಾಗ್ರಾಂ(Instagram) ಅನ್ನು ಜನ ಹೆಚ್ಚಾಗಿ ಬಳಸುತ್ತಿದ್ದಾರೆ. ಇತ್ತೀಚಿಗಂತೂ ರೀಲ್ಸ್ ಗಳು ಎಷ್ಟು ಜನಪ್ರಿಯವಾಗಿದೆಯೆಂದರೆ, ರೀಲ್ಸ್(Reels) ಮಾಡದೇ ಇರುವವರೇ ಇಲ್ಲ ಎನ್ನಬಹುದು. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಇದೀಗ ಟಿಕ್ ಟಾಕ್ ನಲ್ಲಿ ಪ್ರಪಂಚದಲ್ಲಿಯೇ ಅತೀ ಹೆಚ್ಚು ಫಾಲೋವರ್ಸ್ಗಳನ್ನು ಹೊಂದುವ ಮೂಲಕ ಹಾಲಿವುಡ್ ಸ್ಟಾರ್ ಗಳನ್ನೂ ಹಿಂದಿಕ್ಕಿದ್ದಾರೆ. ನೀವೂ ಕೂಡ ಟಿಕ್ ಟಾಕ್ ಅಥವಾ ಇನ್ಟ್ಸಾಗ್ರಾಂ ರೀಲ್ಸ್ ಗಳಲ್ಲಿ ಕೆಬಿ ಲೇಮ್(Kaby Lame) ಎಂಬ ವ್ಯಕ್ತಿಯನ್ನು ನೋಡಿರುತ್ತೀರಿ. ಕೊರೋನಾ ಲಾಕ್ ಡೌನ್ ನಂತರ ಹೆಚ್ಚು ಪ್ರಸಿದ್ದಿಗೆ ಬಂದ ಈ ವ್ಯಕ್ತಿ, ಇದೀಗ ಪ್ರಪಂಚದ ಟಾಪ್ ಸೆಲೆಬ್ರಿಟಿಗಳ ಸಾಲಿನಲ್ಲಿ ನಿಂತಿದ್ದಾರೆ.

ಹೌದು, ಕೆಬಿ ಲೇಮ್ ಅಂದು ಟಿಕ್ ಟಾಕ್ ಫಾಲೋವರ್ಸ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದರು, ಈಗ ಇನ್ಸ್ಟಾಗ್ರಾಂನಲ್ಲೂ ಮುಂದುವರಿದಿದ್ದಾರೆ.
ಕೆಬಿ ಲೇಮ್ ಹೆಸರಿನ ಈ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ‘ಕೆಬಿ ಲೇಮ್’ ಎಂದೇ ಪ್ರಸಿದ್ಧರು. 2000ದ ಮಾರ್ಚ್ 09ರಂದು ಜನಿಸಿದ ಖಾಬಿ ಮೂಲತಃ ಸೆನೆಗಲ್ ನವರು. ಆದರೆ ಸದ್ಯ ಅವರು ಇಟಲಿಯಲ್ಲಿದ್ದು, ಇಟಲಿಯ ನಾಗರೀಕತ್ವವನ್ನೂ ಪಡೆದಿದ್ದಾರೆ. ಹಾಲಿವುಡ್ ನಟ ವಿಲ್ ಸ್ಮಿತ್, ರಾಕ್ ಖ್ಯಾತಿಯ ಡ್ವೇನ್ ಜೋನ್ಸ್‌, ಪ್ರಖ್ಯಾತ ಬ್ರ್ಯಾಂಡ್ ಬಿಟಿಎಸ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಕೇಬಿ ಹೊಂದಿದ್ದಾರೆ.

ಕೇವಲ ಕಿರು ವಿಡಿಯೋಗಳನ್ನು ಮಾಡುವ ಕೇಬಿಯವರ ಆದಾಯ ಕೇಳಿದರೆ ಒಮ್ಮೆ ನೀವು ಶಾಕ್ ಆಗೋದಂತೂ ಖಂಡಿತ. ಏಕೆಂದರೆ, ಕೇಬಿ ಅವರು ಕೇವಲ ವಿಡಿಯೋಗಳ ಮೂಲಕವೇ ಸುಮಾರು 14 ಕೋಟಿ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರಂತೆ. ವಿಶೇಷವೆಂದರೆ, ಕೇಬಿ ಲೇಮ್ ತಮ್ಮ ಯಾವುದೇ ವೀಡಿಯೋದಲ್ಲಿ ಕೂಡ ಮಾತನಾಡುವುದಿಲ್ಲ. ಕೇವಲ ತಮ್ಮ ಹಾವಭಾವಗಳಿಂದಲೇ ವಿಭಿನ್ನವಾಗಿ ಕಿರು ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಯಾವುದೇ ಕೆಲಸವನ್ನು ಕಷ್ಟಪಟ್ಟು ಮಾಡುವ ಬದಲು, ಅದನ್ನೇ ಸುಲಭವಾಗಿ ಹೇಗೆ ಮಾಡಬಹುದು ಎನ್ನುವುದನ್ನು ಕೇಬಿ ತೋರಿಸುತ್ತಾರೆ.

ಇದನ್ನು ವಿಭಿನ್ನವಾಗಿ ಹಾಸ್ಯಮಯವಾಗಿ ಪ್ರಸ್ತುತ ಪಡಿಸುತ್ತಾರೆ. ಅಲ್ಲದೇ ಅವರ ಸಿಗ್ನೇಚರ್ ಸ್ಟೈಲ್ ಇಂದಿಗೂ ಟ್ರೆಂಡ್ ಆಗಿದೆ. ಹೀಗಾಗಿ ಅವರಿಗೆ ಇನ್ಸ್ಟಾಗ್ರಾಂಗಳಲ್ಲಿ ಕೊಟ್ಯಾಂತರ ಹಿಂಬಾಲಕರಿದ್ದಾರೆ. ಕೇಬಿ ಇನ್ಸ್ಟಾಗ್ರಾಂ ನಲ್ಲಿ 78.3 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

Exit mobile version