ಭೂಮಿಗೆ ಬೀಳಲಿದೆ ಸೌರ ಜ್ವಾಲೆಗಳು: ಡಿ.17ರಂದು ಬೀಳುವ ಶಕ್ತಿಶಾಲಿ ಸೌರ ಜ್ವಾಲೆಯಿಂದ ಭೂಮಿಗೆ ಅಪಾಯ

ಡಿ.17ರಂದು ಭೂಮಿಗೆ ಸೌರ ಜ್ವಾಲೆಗಳು ಅಪ್ಪಳಿಸುವ ಸಾಧ್ಯತೆ ಇದ್ದು, ಸೂರ್ಯನ (solar flare falling on Dec17) ಮೇಲಿನ ಬೃಹತ್ ಸ್ಫೋಟಗಳ ಪರಿಣಾಮ ಸೃಷ್ಟಿಯಾಗಿರುವ ಈವರೆಗೂ ದಾಖಲಾದ

ಅತ್ಯಂತ ದೊಡ್ಡ ಸೌರ ಜ್ವಾಲೆಗಳಲ್ಲಿ ಒಂದನ್ನು ಸೂರ್ಯ ಹೊರಹಾಕಿದೆ. ಅವು ಹೊಂದಿರುವ ತೀವ್ರತೆಯ ಆಧಾರದಲ್ಲಿ ಅತ್ಯಂತ ಪ್ರಬಲದಿಂದ ದುರ್ಬಲದ ಕ್ರಮದಲ್ಲಿ ವರ್ಗೀಕರಿಸಲಾಗಿದೆ. ಅದು ಯಾವುದೆಂದರೆ

ಎಕ್ಸ್ – ಕ್ಲಾಸ್, ಎಂ – ಕ್ಲಾಸ್, ಸಿ – ಕ್ಲಾಸ್, ಬಿ – ಕ್ಲಾಸ್ ಮತ್ತು ಎ – ಕ್ಲಾಸ್(X – Class, M – Class, C – Class, B – Class and A – Class.).

ಸೌರ ಜ್ವಾಲೆಗಳೆಂದರೆ ಸೂರ್ಯನ ಮೇಲಿನ ಬೃಹತ್ ಸ್ಫೋಟಗಳಾಗಿದ್ದು, ಇಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣಗಳ (Electromagnetic radiation) ರೂಪದಲ್ಲಿ ಅಪಾರ ಪ್ರಮಾಣದ ಶಕ್ತಿಯನ್ನು

ಬಿಡುಗಡೆಗೊಳಿಸುತ್ತವೆ. ಅಮೆರಿಕದಲ್ಲಿ ಕೆಲವು ಸಮಯ ರೇಡಿಯೋ ಫ್ರೀಕ್ವೆನ್ಸಿಗಳಲ್ಲಿ (Radio frequency) ಅಡಚಣೆ ಉಂಟಾಗಿತ್ತು. ಇದು ಅಲ್ಪ ಕಾಲಕ್ಕೆ ಅಂತ್ಯಗೊಂಡರೂ, ಮುಂದೆ ಶಕ್ತಿಶಾಲಿ ಸೌರ

ಜ್ವಾಲೆ ಅಪಾಯ ಉಂಟುಮಾಡಬಹುದು.ಸೂರ್ಯನ ವಾತಾವರಣದಲ್ಲಿ ಕಾಂತೀಯ ಶಕ್ತಿ ಸಂಗ್ರಹವಾಗಿದ್ದು, ಅದು ಇದ್ದಕ್ಕಿದ್ದಂತೆ ಬಿಡುಗಡೆ ಹೊಂದಿದಾಗ ಸೌರ ಜ್ವಾಲೆಗಳು ಉಂಟಾಗುತ್ತವೆ.

ಅವುಗಳು ಸೌರ ಸೈಕಲ್‌ಗೆ ಸಂಬಂಧಿಸಿದ ಚಟುವಟಿಕೆಗಳಾಗಿವೆ. ಸೌರ ಸೈಕಲ್ ಎನ್ನುವುದು ಸೌರ ಚಟುವಟಿಕೆಗಳ ಒಂದು ಮಾದರಿಯಾಗಿದ್ದು, ಅಂದಾಜು 11 ವರ್ಷಗಳ ಅವಧಿಯಲ್ಲಿ ಜರಗುತ್ತದೆ ಮತ್ತು

ಸೂರ್ಯನ ಕಾಂತಕ್ಷೇತ್ರದಿಂದ ಪ್ರಭಾವಿತವಾಗಿರುತ್ತದೆ. ಇದು ಅತ್ಯಂತ ಬಿಸಿಯಾದ ಪದರವಾಗಿದ್ದು, ಸೂರ್ಯನ ಮೇಲ್ಮೈಯನ್ನು ಫೋಟೋಸ್ಫಿಯರ್ ಎಂದು ಕರೆಯಲಾಗಿದೆ. ಈ ಫೋಟೋಸ್ಫಿಯರ್ ಬೆಳಕು

ಮತ್ತು ಶಾಖವನ್ನು ಬಿಡುಗಡೆ ಮಾಡುತ್ತದೆ. ಇದು ಕಣಗಳು ಮತ್ತು ಸೌರ ಕಲೆಗಳನ್ನು (Sun Spot) ಹೊಂದಿದ್ದು, ಇದರ ತಾಪಮಾನ ಅಂದಾಜು 5,500 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ.

ಫೋಟೋಸ್ಫಿಯರ್ ಮೇಲೆ ಕ್ರೋಮೋಸ್ಫಿಯರ್ ಮತ್ತು ಕೊರೋನಾ (Corona) ಎಂಬ ಪದರಗಳಿದ್ದು, ವಿಶೇಷ ಲಕ್ಷಣಗಳನ್ನು ಹೊಂದಿರುವ ಸೌರ ವಾತಾವರಣವನ್ನು ನಿರ್ಮಿಸುತ್ತವೆ.

ಈ ಅನಿಲಗಳ ಪ್ರಕ್ಷುಬ್ಧ ಗುಣಲಕ್ಷಣಗಳು ಕಾಂತೀಯ ಕ್ಷೇತ್ರವನ್ನು ಗೋಜಲಾಗಿಸುತ್ತದೆ. ಸೌರ ಚಟುವಟಿಕೆ ಎಂದು ಕರೆಯಲಾಗುವ ಈ ಕಾಂತೀಯ ವರ್ತನೆ ಸೌರ ಜ್ವಾಲೆಗಳಂತಹ ಸ್ಫೋಟಗಳಿಗೆ ದಾರಿ

ಮಾಡಿಕೊಡುತ್ತವೆ. ಸೂರ್ಯನಲ್ಲಿರುವ ವಿದ್ಯುತ್ ಚಾರ್ಜ್ ಹೊಂದಿರುವ ಅನಿಲಗಳು ಕಾಂತೀಯ ಕ್ಷೇತ್ರವನ್ನು ಉಂಟುಮಾಡಿ, ಮ್ಯಾಗ್ನೆಟಿಕ್ ಡೈನಾಮೋ (Magnetic dynamo) (ಅಥವಾ ಮ್ಯಾಗ್ನೆಟಿಕ್

ಜನರೇಟರ್) ಉಂಟುಮಾಡುತ್ತವೆ. ಈ ಸ್ಫೋಟಗಳು ರೇಡಿಯೋ ವೇವ್ಸ್, ಮೈಕ್ರೋವೇವ್ಸ್, ಕ್ಷ ಕಿರಣಗಳು, ಗಾಮಾ ಕಿರಣಗಳು (X Rays, gamma Rays) ಮತ್ತು ದೃಗ್ಗೋಚರ ಬೆಳಕು ಸೇರಿದಂತೆ,

ಭಾರೀ ಪ್ರಮಾಣದಲ್ಲಿ (solar flare falling on Dec17) ಇಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣಗಳನ್ನು ಬಿಡುಗಡೆಗೊಳಿಸುತ್ತವೆ.

ಸೌರ ಜ್ವಾಲೆಗಳ ಐದು ವರ್ಗಗಳು
ಸೌರ ಜ್ವಾಲೆಗಳನ್ನು ಅವುಗಳು ಹೊರಸೂಸುವ ಕ್ಷ ಕಿರಣಗಳ ತೀಕ್ಷ್ಣತೆಯ ಆಧಾರದಲ್ಲಿ ಐದು ವರ್ಗಗಳಾಗಿ ವಿಭಾಗಿಸಲಾಗಿದೆ. ಪ್ರತಿಯೊಂದು ವರ್ಗಕ್ಕೂ ನೀಡಲಾದ ಅಕ್ಷರ ಹತ್ತು ಪಟ್ಟು ಹೆಚ್ಚುವರಿ ಶಕ್ತಿ

ಬಿಡುಗಡೆಯನ್ನು ಸೂಚಿಸುತ್ತದೆ. ಇದು ಭೂಕಂಪದ ಶಕ್ತಿಯನ್ನು ಸೂಚಿಸುವ ರಿಕ್ಟರ್ ಮಾಪಕದ (Richter scale) ರೀತಿಯಲ್ಲಿ ಕಾರ್ಯಾಚರಿಸುತ್ತದೆ.

ಎಕ್ಸ್ ಕ್ಲಾಸ್ ಜ್ವಾಲೆಗಳು ಅತ್ಯಂತ ಶಕ್ತಿಶಾಲಿಯಾದ ಸೌರ ಜ್ವಾಲೆಗಳಾಗಿವೆ. ಇವುಗಳ ನಂತರ ಬರುವ ಎಂ ಕ್ಲಾಸ್ ಜ್ವಾಲೆಗಳು ಎಕ್ಸ್ ವರ್ಗಕ್ಕಿಂತ ಹತ್ತು ಪಟ್ಟು ಕಡಿಮೆ ತೀಕ್ಷ್ಣವಾಗಿವೆ. ಇದರ ನಂತರ ಸಿ ವರ್ಗ,

ಬಿ ವರ್ಗ ಮತ್ತು ಎ ವರ್ಗದ ಸೌರ ಜ್ವಾಲೆಗಳು ಬರುತ್ತವೆ. ಇವುಗಳಲ್ಲಿ ಎ ವರ್ಗದ ಸೌರ ಜ್ವಾಲೆಗಳು ಅತ್ಯಂತ ಕಡಿಮೆ ಶಕ್ತಿ ಹೊಂದಿದ್ದು, ಭೂಮಿಯ‌ ಮೇಲೆ ಯಾವುದೇ ಗಮನಾರ್ಹ ಪರಿಣಾಮ ಬೀರುವುದಿಲ್ಲ.

ವಿವಿಧ ರೀತಿಯ ಸೌರ ಜ್ವಾಲೆಗಳು, ಅದರಲ್ಲೂ ಎಕ್ಸ್ ವರ್ಗದ ಜ್ವಾಲೆಗಳೆಂದು ವರ್ಗೀಕರಿಸಲ್ಪಟ್ಟವು ಭೂಮಿಯ ಮೇಲೆ ಉಪಗ್ರಹಗಳ ಮೇಲೆ ಮತ್ತು ಗಗನಯಾತ್ರಿಗಳ ಮೇಲೂ ಪರಿಣಾಮ ಬೀರಬಲ್ಲವು.

ಇದನ್ನು ಓದಿ: ಮುಟ್ಟು ಅಂಗವೈಕಲ್ಯವಲ್ಲ, ಮುಟ್ಟಿನ ರಜೆ ಬೇಕಿಲ್ಲ – ಸಚಿವೆ ಸ್ಮೃತಿ ಇರಾನಿ

Exit mobile version