Solution for Migraine: ಮೈಗ್ರೇನ್ (Migraine) ಇದೊಂದು ಪೀಡಕ ಸಮಸ್ಯೆ, ಇದರ ಬಾದೆ ಅನುಭವಿಸಿದವರಿಗೆ ಗೊತ್ತು. ಜಗತ್ತಿನ ನ್ಯೂರಾಲಾಜಿಕಲ್ (Neurological) ಸಮಸ್ಯೆಗಳಲ್ಲಿ ಹೆಚ್ಚಾಗಿರುವುದೇ ಈ ಮೈಗ್ರೇನ್, ಜಗತ್ತಿನಾದ್ಯಂತ ಒಂದು ಬಿಲಿಯನ್ಗೂ ಹೆಚ್ಚು ಜನ ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹಾಗಾದರೆ ಇದಕ್ಕೆ ಪರಿಹಾರಗಳೇ ಇಲ್ಲವೆ ಇದೆ, ಸರಳ ಅಭ್ಯಾಸಗಳೂ ಮೈಗ್ರೇನ್ ನಿವಾರಿಸಬಲ್ಲದು.
ಇದೊಂಥರ ತಲೇ ನೋವು, ಅರ್ಧ ತಲೆನೋವು, ವೈಯಕ್ತಿ ಜಿವನ, ಸಾಮಾಜಿಕ ಜಿವನ ಹಾಳುಗೆಡವುವ ಕಾಯಿಲೆ, ಇದರಿಂದ ಮತ್ತಷ್ಟು ಆರೋಗ್ಯ ಸಮಸೆಯಗಳು ಬಂದು ಜೊತೆ ಸೇರಿ ದೇಹ ಪ್ರಕೃತಿ ಮೇಲೆ ಹಿಡಿತ ಸಾಧಿಸುತ್ತವೆ ಕೊನೆಗೆ ಸೋಲುವುದು ನಾವೇ ಆಗಿರುತ್ತೇವೆ. ಒತ್ತಡ, ಹಾರ್ಮೊನಲ್ ಚೇಂಜ್ (Hormonal Change), ಅನಿಯಮಿತ ನಿದ್ದೆ, ಆಹಾರ ಸೇವಿಸದಿರುವುದು. ಹೀಗೆ ನಾನಾ ಕಾರಣಗಳಿಗೆ ಮೈಗ್ರೇನ್ ಆವರಿಸಬಹುದು.
ಆದರೆ ಈ ಮೈಗ್ರೇನ್ ಕೆಲ ಸೂಕ್ಷ್ಮ ವಾರ್ನಿಂಗ್ (Warning) ನೀಡುತ್ತದೆ, ಕಣ್ಣುಗಳು ಮಂಜಾಗುವುದು, ಕಣ್ಣ ಮುಂದೆ ಕಾಮನಬಿಲ್ಲು ಕಾಣುವುದು, ಪ್ರತಿಯೊಬ್ಬರು ಬೇರೆ ಬೇರೆ ಕಾರಣಗಳಿಗೆ ಈ ಸಮಸ್ಯೆಗೆ ಒಳಗಾಗುತ್ತಾರೆ. ವೈದ್ಯರ ಸಲಹೆ ಸೂಚನೆ, ಔಷಧಗಳ ನಿಗಧಿತ ಸೇವನೆ ನಿಮ್ಮ ಮೈಗ್ರೇನ್ ಸಮಸೆಯೆಗ ಪರಿಹಾರದ ದಾರಿ ತೋರಿಸಬಹುದು ಇದು ವೈದ್ಯಕೀಯ ಪರಿಹಾರ.
ನೈಸರ್ಗಿಕವಾಗಿ ದೇಹ ಪ್ರಕೃತಿಯ ನಿಯಂತ್ರಣದಿಂದ ಅಥವಾ ಸಮತೋಲನದಿಂದ ಮೈಗ್ರೇನ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಶಾಂತ ಮನಸ್ಥಿತಿ ಸಾಧಿಸುವುದು, ಸರಳ ಉಸಿರಾಟದ ವ್ಯಾಯಾಮ ಅಭ್ಯಾಸದಿಂದ ಮೈಗ್ರೇನ್ ಭಾರ ಇಳಿಸಬಹುದು. ಮೆದುಳಿನ ಆರೊಗ್ಯಕ್ಕೆ ಬ್ರೀಥಿಂಗ್ ಪ್ರಾಕ್ಟೀಸ್ (Breathing Practice) ಸರಳ, ಸುಲಭ ವಿಧಾನವಾಗಿದೆ.
ಐದು ಸೆಕೆಂಡ್ ಉಸಿರನ್ನು ತೆಗೆದುಕೊಳ್ಳುವುದು, ಏಳು ಸೆಕೆಂಡ್ ಹಿಡಿದಿಟ್ಟುಕೊಳ್ಳುವುದು ಮತ್ತು ಐದು ಸೆಕೆಂಡ್ನಲ್ಲಿ ಉಸಿರನ್ನು ಹೊರಗೆ ಬಿಡುವುದು ಹೀಗೆ ಒಂದಷ್ಟು ಸಲ ಅಭ್ಯಾಸ ಮಾಡಿ ದೇಹದ ಉಸಿರಾಟ ಸಮತೋಲನ ಕಾಪಾಡಿಕೊಂಡರೆ ಮೈಗ್ರೇನ್ನಿಂದ ಬಿಡುಗಡೆಯಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.