Mandya : ಗುರುವಾರ ಕರ್ನಾಟಕದ (Karnataka) ಮಂಡ್ಯ (Mandya) ಜಿಲ್ಲೆಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಸಂದರ್ಭದಲ್ಲಿ ಭಾರೀ ಜನಜಂಗುಳಿಯಿಂದಾಗಿ ಕೆಳಗೆ ಬಿದ್ದ ಬಾಲಕಿಯನ್ನು,
ಕಾಂಗ್ರೆಸ್(Congress) ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi) ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಬಾಲಕಿಯನ್ನು ಹಿಡಿದು ಮೇಲಕ್ಕೆತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ.

ಗುರುವಾರ ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಭಾರೀ ನೂಕು ನುಗ್ಗಲಿನ ಮಧ್ಯೆ ಕುಸಿದು ಬಿದ್ದ ಬಾಲಕಿಯನ್ನು (Sonia Gandhi Helped fallen girl)ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಜನರನ್ನು ಪಕ್ಕಕ್ಕೆ ಸರಿಸಿ, ಬಾಲಕಿಯ ಕೈಹಿಡಿದು ಮೇಲಕ್ಕೆತ್ತುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸದ್ಯ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸೋನಿಯಾ ಗಾಂಧಿ ಕೆಳೆಗೆ ಬಿದ್ದ ಬಾಲಕಿಯ ಕೈಯನ್ನು ಹಿಡಿದು ಮೇಲಕ್ಕೆ ನಿಲ್ಲಿಸಿ,
ಆಕೆಯ ಬೆನ್ನಿನ ಭಾಗವನ್ನು ಉಜ್ಜಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಈ ನಡೆ ಜನರ ಮನ ಗೆದ್ದಿದೆ.
ಇದನ್ನೂ ಓದಿ : https://vijayatimes.com/state-bjp-defends-bommai-government/
ಗುರುವಾರ (ಅಕ್ಟೋಬರ್ 6) ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಪುನರಾರಂಭಗೊಂಡಾಗ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಅವರ ಜೊತೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಮಂಡ್ಯ ಜಿಲ್ಲೆಯ ಜಕನಹಳ್ಳಿ ತಲುಪಿ, ಪಾಂಡವಪುರ ತಾಲೂಕಿನಿಂದ ಬೆಳಗ್ಗೆ 6.30ಕ್ಕೆ ಪುನರಾರಂಭಗೊಂಡ ಪಾದಯಾತ್ರೆ ಸಂಜೆ 7ಕ್ಕೆ ನಾಗಮಂಗಲ (Sonia Gandhi Helped fallen girl) ತಾಲೂಕಿನಲ್ಲಿ ಕೊನೆಗೊಳ್ಳಲಿದೆ.

ಸೋನಿಯಾ ಗಾಂಧಿ ಅವರೊಂದಿಗೆ ಸ್ಥಳೀಯ ಮಹಿಳಾ ಶಾಸಕರಾದ ಅಂಜಲಿ ನಿಂಬಾಳ್ಕರ್, ರೂಪಕಲಾ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು. ಪಾದಯಾತ್ರೆ ಬಳಿಕ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಸಭೆ ನಡೆಯಲಿದೆ.
ನಾಗಮಂಗಲ ತಾಲೂಕಿನ ಸರಕಾರಿ ಆಯುರ್ವೇದಿಕ್ ಆಸ್ಪತ್ರೆ ಎದುರಿನ ಮಡಕೆ ಹೊಸೂರು ಗೇಟ್ ಬಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.
ಇದನ್ನೂ ಓದಿ : https://vijayatimes.com/followed-weird-marriage-traditions/