ವಿವಾಹದ(Marriage) ಬಗ್ಗೆ ಪ್ರತಿಯೊಬ್ಬ ಯುವಕ ಯುವತಿಯರೂ ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ತಮ್ಮ ವಿಶೇಷ ದಿನ ಹೀಗಿರಬೇಕು ಹಾಗಿರಬೇಕೆಂಬ ಕಲ್ಪನೆಗಳು ಪ್ರತಿಯೊಬ್ಬರಿಗೂ ಇರುವುದು ಸಹಜ.
ಮದುವೆ ಎಂದ ಮೇಲೆ ಹಲವಾರು ಶಾಸ್ತ್ರಗಳಿರುವುದು ಸರ್ವೇ ಸಾಮಾನ್ಯ.

ಜಗತ್ತಿನಲ್ಲಿ ಸಾವಿರಾರು ಸಮುದಾಯಗಳಿದ್ದು, ಪ್ರತಿ ಸಮುದಾಯವೂ ತನ್ನದೇ ಆದ ಶಾಸ್ತ್ರ-ಸಂಪ್ರದಾಯ, ಸಂಸ್ಕೃತಿಗಳನ್ನು ಹೊಂದಿವೆ. ಇವುಗಳಲ್ಲಿ ಕೆಲವು ಸಂಪ್ರದಾಯಗಳು ನಮಗೆ ಅತ್ಯಂತ ವಿಚಿತ್ರ(Weird) ಹಾಗೂ ಅಸಹ್ಯವಾಗಿ ಕಾಣಿಸಬಹುದು.
ಹೀಗೆ, ಪ್ರಪಂಚದಾದ್ಯಂತ ಅನುಸರಿಸುವ ಕೆಲವು ವಿಲಕ್ಷಣ ವಿವಾಹ ಸಂಪ್ರದಾಯಗಳ ಮಾಹಿತಿ ಇಲ್ಲಿದೆ.
ಚಾರಿವರಿ : ಇದು ಫ್ರಾನ್ಸ್‌ನ(France) ಅತ್ಯಂತ ಹಳೆಯ ಸಂಪ್ರದಾಯವಾಗಿದೆ. ಮದುವೆಯ ರಾತ್ರಿ, ಸ್ನೇಹಿತರು ಮತ್ತು ಸಂಬಂಧಿಕರು ಪಾತ್ರೆಗಳನ್ನು ಜೋರಾಗಿ ಬಡಿಯುತ್ತಾ ದಂಪತಿಗಳು ಮಲಗಿರುವ ಕೋಣೆಯ ಬಾಗಿಲನ್ನು ಬಡಿಯುತ್ತಾರೆ. ಆಗ ಅವರು ಬಂದು ಪಾನೀಯಗಳು ಮತ್ತು ತಿಂಡಿಗಳನ್ನು ನೀಡಬೇಕು.
ಇದನ್ನೂ ಓದಿ : https://vijayatimes.com/hdk-speaks-with-kcr/
ಸ್ಕಾಟ್ ಲ್ಯಾಂಡ್ನಲ್ಲಿ ಎಲ್ಲಾ ರೀತಿಯ ಕಸ ಮತ್ತು ಎಲ್ಲಾ ರೀತಿಯ ಕೆಟ್ಟ ವಸ್ತುಗಳನ್ನು ದಂಪತಿಗಳ ಮೇಲೆ ಸುರಿಯಲಾಗುತ್ತದೆ. ದಂಪತಿಗಳು ಜೀವನದಲ್ಲಿ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಲು ಈ ಆಚರಣೆಯನ್ನು ಮಾಡಲಾಗುತ್ತದೆ.
ಚೀನಾದಲ್ಲಿ, ಮದುವೆಗೆ ಒಂದು ತಿಂಗಳ ಮೊದಲು, ವಧು ಪ್ರತಿದಿನ ಒಂದು ಗಂಟೆ ಅಳಬೇಕು. ಹುಡುಗಿಯ ಜೊತೆ ಮನೆಯ ಉಳಿದ ಸದಸ್ಯರೂ ಸೇರಿ ಅಳುತ್ತಾರೆ.
ವೇಲ್ಸ್‌ನಲ್ಲಿ (Wales) ನಡೆಯುವ ವಿಚಿತ್ರ ಸಂಪ್ರದಾಯ ಹೀಗಿದೆ. ಮದುವೆಯ ದಿನ (Followed Weird Marriage Traditions) ವರನು ತನ್ನ ವಧುವಿಗೆ ಪ್ರೀತಿಯಿಂದ ಚಮಚವೊಂದನ್ನು ನೀಡುತ್ತಾನೆ,
ಈ ಮೂಲಕ ಆಕೆಯನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಮಲಗಲು ಬಿಡುವುದಿಲ್ಲ ಮತ್ತು ಅವಳ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತೇನೆ ಎಂದು ಹುಡುಗಿಗೆ ಭರವಸೆ ನೀಡುತ್ತಾನೆ.

ಸ್ಕಾಟ್ಲೆಂಡ್‌ನ ವಧು-ವರರನ್ನು ಕಪ್ಪುಗೊಳಿಸುವುದು : ಈ ಸಂಪ್ರದಾಯದಲ್ಲಿ ಕುಟುಂಬದವರು (Followed Weird Marriage Traditions) ಮತ್ತು ಸ್ನೇಹಿತರು ಸೇರಿಕೊಂಡು ವಧು ಮತ್ತು ವರನನ್ನು ಅಸಹ್ಯಕರವಾದ ವಸ್ತುಗಳಿಂದ ಅಂದರೆ ಟ್ರೆಕಲ್, ಮಸಿ, ಗರಿಗಳು ಮತ್ತು ಹಿಟ್ಟಿನಿಂದ ಸ್ನಾನ ಮಾಡಿಸಿ ಅವರನ್ನು ಕಪ್ಪಾಗಿಸುತ್ತಾರೆ.
ಬಳಿಕ ಅವರನ್ನು ರಸ್ತೆಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಈ ಮೂಲಕ ವಧು ಮತ್ತು ವರರಿಂದ ದುಷ್ಟಶಕ್ತಿಗಳನ್ನು ದೂರವಿಡುವ ಉದ್ದೇಶದಿಂದ ಈ ರೀತಿಯ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ : https://vijayatimes.com/beauty-tips-for-men/
ಕೀನ್ಯಾದ(Kenya) ಮಸ್ಸಾಯಿ ಜನರಲ್ಲಿ, ವಧುವಿನ ತಂದೆ ಸಾಮಾನ್ಯವಾಗಿ ಅವಳ ತಲೆ ಮತ್ತು ಸ್ತನಗಳ ಮೇಲೆ ಉಗುಳುವುದು ಒಂದು ಸಂಪ್ರದಾಯವಾಗಿದೆ.
ಇದರರ್ಥ ಏನೆಂದರೆ, ತನ್ನ ಮಗಳ ವಿಶೇಷ ದಿನವನ್ನು ತಾನೇ ಹೆಚ್ಚು ಬೆಂಬಲಿಸುವ ಮೂಲಕ ಅದೃಷ್ಟವನ್ನು ಹಾಳುಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದಂತೆ.
- ಪವಿತ್ರ