ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾಗಲು ಕರ್ನಾಟಕಕ್ಕೆ ಆಗಮಿಸಿದ ಸೋನಿಯಾ ಗಾಂಧಿ

rahul gandhi

Mysuru : ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ಸಾಗುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ (Bharat Jodo Yatra) ಭಾಗಿಯಾಗಲು ಕಾಂಗ್ರೆಸ್ (Congress) ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi) ಅವರು ಇಂದು ಕರ್ನಾಟಕಕ್ಕೆ ಆಗಮಿಸಿದ್ದಾರೆ.

ಇನ್ನು ಅಕ್ಟೋಬರ್ 6 ರಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಪಾದಯಾತ್ರೆ (Sonia Gandhi joins bharat jodo yatra) ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ.

ಇಂದು ಕರ್ನಾಟಕಕ್ಕೆ ಆಗಮಿಸಲಿರುವ ಸೋನಿಯಾ ಗಾಂಧಿ ಅವರು ಮಡಿಕೇರಿಯ(Madikeri) ಖಾಸಗಿ ರೆಸಾರ್ಟ್ನಲ್ಲಿ ತಂಗಲಿದ್ದಾರೆ.

ಮೈಸೂರು ಭಾಗದ ಪಾದಯಾತ್ರೆ ಮುಗಿಸಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಮಡಿಕೇರಿಗೆ ತೆರಳಲಿದ್ದಾರೆ.

ಅಕ್ಟೋಬರ್ 6 ರಂದು ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸುವ ಮೊದಲು ರಾಹುಲ್‌ ಸೋನಿಯಾ ಇಬ್ಬರೂ ಕೊಡಗಿನಲ್ಲಿ (Sonia Gandhi joins bharat jodo yatra) ಎರಡು ದಿನಗಳನ್ನು ಕಳೆಯಲಿದ್ದಾರೆ.

https://youtu.be/7kqGas-BBZs ಅನಾರೋಗ್ಯಕ್ಕೆ ತುತ್ತಾದ ಗ್ರಾಮಸ್ಥರು.

ಇದೇ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ ಕುರಿತು ರಾಹುಲ್‌ ಮತ್ತು ಸೋನಿಯಾ ಚರ್ಚೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

‘ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ’. ಇನ್ನು ಭಾರೀ ಮಳೆಯ ನಡುವೆ ರಾಹುಲ್ ಗಾಂಧಿ ಅವರು, ಮಳೆಯಲ್ಲಿ ಮುಳುಗಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ರಾಹುಲ್‌ ಗಾಂಧಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಭಾರತವನ್ನು ಒಗ್ಗೂಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಭಾರತದ ಧ್ವನಿ ಎತ್ತುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ”

“ಬಾಪು ಸ್ವರ್ಗದಿಂದ ಕೆಳಗೆ ನೋಡುತ್ತಿರುವಂತೆ ತೋರುತ್ತಿದೆ, ವಿಭಜಿತ ರಾಷ್ಟ್ರವನ್ನು ಒಗ್ಗೂಡಿಸಲು ಚಲಿಸುವ ಈ ಧೀರನಿಗೆ ಆಶೀರ್ವಾದವನ್ನು ನೀಡುತ್ತಿದ್ದಾರೆ.

ಈ ರಾಷ್ಟ್ರದ ಸೇವೆಯಲ್ಲಿ ತುಂಬಾ ಕಳೆದುಕೊಂಡಿರುವವನು, ದಮನಕಾರಿ ಸರ್ಕಾರದ ವಿರುದ್ಧ ನಿರ್ಭಯವಾಗಿ ಹೋರಾಡುತ್ತಾನೆ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/we-are-seeing-new-rahul-gandhi/

ಇನ್ನು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆ ಈಗಾಗಲೇ 624 ಕಿ.ಮೀಗಳನ್ನು ಪೂರ್ಣಗೊಳಿಸಿದೆ.

ಪ್ರಸ್ತುತ ಕರ್ನಾಟಕದ ಮೈಸೂರಿನಲ್ಲಿ ಯಾತ್ರೆ #BharatJodoYatra ಸಾಗುತ್ತಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಯಾತ್ರೆ ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣ(Srirangapatna) ಪ್ರವೇಶಿಸಲಿದೆ. ಸಂಜೆ 2 ಗಂಟೆಗೆ ಯಾತ್ರೆ ಆರಂಭವಾಗಲಿದ್ದು, ಸಂಜೆ 4:30ಕ್ಕೆ ಪಾಂಡವಪುರ(Pandavapura) ತಲುಪಲಿದೆ.
Exit mobile version