ಅತ್ಯಾಧುನಿಕ ಮಾದರಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ

ಬೆಂಗಳೂರು, ಫೆ. 08: ಇಂದು ಭಾರತದಲ್ಲಿ ಲಾಂಚ್​ ಆದ MG ZS EV ಕಾರು ಹೊಸ ಹೆಚ್​ಟಿ ಬ್ಯಾಟರಿ, 17 ಇಂಚು ಟೈರ್ ಸೇರಿದಂತೆ ವಿವಿಧ ಅತ್ಯಾಧುನಿಕ ಸೌಲಭ್ಯಗಳನ್ನ ಹೊಂದಿದೆ. ಚೀನಾ ಮಾಲೀಕತ್ವದ ಬ್ರಿಟಿಷ್​ ಕಾರು ತಯಾರಕ ಸಂಸ್ಥೆ ಎಂಜಿ ಮೋಟರ್ಸ್​ ಭಾರತದಲ್ಲಿ ಹೊಸ ಎಲೆಕ್ಟ್ರಿಕ್​ ಕಾರನ್ನ ಇಂದು ಲೋಕಾರ್ಪಣೆ ಮಾಡಿದೆ. ಎಂಜಿ ಮೋಟಾರ್ಸ್​ ಕಂಪನಿಯ ಎಸ್​​ಯುವಿ ಎಲೆಕ್ಟ್ರಿಕ್​ ಕಾರು ಮಾದರಿಯ ಸುಧಾರಿತ ಮಾಡೆಲ್​ MG ZS EV ಆಗಿದೆ. ‌ಲಾಂಚ್​ ಆದ MG ZS EV ಕಾರಿಗೆ ಕಂಪನಿ 20.99 ಲಕ್ಷ ರೂಪಾಯಿಯನ್ನು ನಿಗದಿ ಮಾಡಿದೆ. ಹಾಗೂ ಎಕ್ಸ್​ಕ್ಲೂಸಿವ್​ ಟ್ರಿಮ್​ ಬೆಲೆ 24.18 ಲಕ್ಷ ರೂಪಾಯಿ ಇರಲಿದೆ ಎಂದು ಕಂಪನಿ ತಿಳಿಸಿದೆ.

ಹೆಕ್ಟರ್​ ಫೇಸ್​ಲಿಫ್ಟ್​ ಬಳಿಕ 2021ರಲ್ಲಿ ಲಾಂಚ್​ ಆದ ಎಂಜಿ ಮೋಟರ್ಸ್‌​ನ ಎರಡನೇ ಉತ್ಪನ್ನ ಇದಾಗಿದೆ. ಗುಜರಾತ್​​ನ ಉತ್ಪಾದನಾ ಘಟಕದಲ್ಲಿ ಈ ಕಾರನ್ನ ತಯಾರಿಸಲಾಗುತ್ತಿದೆ. ಬಾಹ್ಯ ವಿನ್ಯಾಸದಲ್ಲಿ ಕಂಪನಿಯು ಅಂತಹ ಯಾವುದೇ ಬದಲಾವಣೆ ತಂದಿಲ್ಲ. ಆದರೆ ಆಳವಾದ ಕಾನ್​ಕೇವ್​ ಗ್ರಿಲ್​, ಎಲ್​ಇಡಿ ಎಇಆರ್​ರಲ್​​ಗಳೊಂದಿಗೆ ಲಂಡನ್​ ಐ ಪ್ರಾಜೆಕ್ಟರ್​ ಹೆಡ್​ಲ್ಯಾಂಪ್​ಗಳು, ಎಲ್​ಇಡಿ ಟೈಲ್​​ ಲೈಟ್ಸ್, ವಿಂಡ್​ಮಿಲ್​ ಪ್ರೇರಿತ 17 ಇಂಚಿನ ಡೈಮಂಡ್​ ಕಟ್​ ಮಷಿನ್​ ಅಲಾಯ್​ ವೀಲ್ಸ್  ಹಾಗೂ ಇನ್ನೂ ವಿವಿಧ ಅತ್ಯಾಧುನಿಕ ಸಾಧನಗಳನ್ನ ಒಳಗೊಂಡಿದೆ.

ಈ ಹೆಚ್​ಟಿ ಬ್ಯಾಟರಿಯ ಸಹಾಯದಿಂದ ಈ ಕಾರು 417 ಕಿಲೋಮೀಟರ್​ವರೆಗೆ ಕ್ರಮಿಸಲಿದೆ ಎಂದು ಕಂಪನಿ ಹೇಳಿದೆ. ಎಂಜಿ ಮೋಟಾರ್ಸ್​ ಈ ಬ್ಯಾಟರಿಗಳಿಗೆ 8 ವರ್ಷದ ಅಥವಾ 1.5 ಲಕ್ಷ ಕಿಲೋಮೀಟರ್​ವರೆಗಿನ ಪ್ರಯಾಣಕ್ಕೆ ವ್ಯಾರಂಟಿಯನ್ನೂ ನೀಡಿದೆ. ದೇಶದ 31 ನಗರಗಳಲ್ಲಿ ಈ ಕಾರು ಲಭ್ಯವಿದೆ.

Exit mobile version