ಬೆಂಗಳೂರು : ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಅವರನ್ನು ಅಪಹರಿಸಿ, ಅತ್ಯಾಚಾರ ಮಾಡಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು (Sowjanya case CBI judgment)
ಸಿಬಿಐ ಕೋರ್ಟ್ (CBI Court) ಶುಕ್ರವಾರ ತೀರ್ಪು ನೀಡಿದೆ. ಆರೋಪಿ ಸಂತೋಷ್ ರಾವ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಆತ ತಪ್ಪಿತಸ್ಥನಲ್ಲ ಎಂದು ನಿರ್ಣಯಿಸಲಾಯಿತು. 2012ರ ಅಕ್ಟೋಬರ್ನಲ್ಲಿ
ಧರ್ಮಸ್ಥಳ ಬಳಿ ಸೌಜನ್ಯ ಸಾವನ್ನಪ್ಪಿದ 11 ವರ್ಷಗಳ ನಂತರ ಇದೀಗ ಈ (Sowjanya case CBI judgment) ತೀರ್ಪು ಬಂದಿದೆ.

ಸೌಜನ್ಯ ಉಜಿರೆ (Ujire) ಎಸ್.ಡಿ.ಎಂ ಕಾಲೇಜು (SDM College) ವಿದ್ಯಾರ್ಥಿನಿ ಆಗಿದ್ದರು. ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಧರ್ಮಸ್ಥಳದ
(Dharmasthala) ಬಳಿ ಸೌಜನ್ಯ ಮೃತದೇಹ 2012ರ ಅಕ್ಟೋಬರ್ 10 ರಂದು ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು.
ಬೆಳ್ತಂಗಡಿ (Belthangadi)ಪೊಲೀಸರು ಆರಂಭದಲ್ಲಿ ರಾವ್ ಅವರನ್ನು ಬಂಧಿಸಿದ್ದರು, ಆದರೆ ನಂತರ ಅವರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಲಿಲ್ಲ ಎಂದು ಹೇಳಲಾಗಿದೆ. ಹಲವಾರು ಹೋರಾಟಗಳ ನಂತರ ಸಿಬಿಐ
ತನಿಖೆಯನ್ನು ವಹಿಸಿಕೊಂಡಿತು. ಅಂತಿಮವಾಗಿ, ಸುದೀರ್ಘ 11 ವರ್ಷಗಳ ವಿಚಾರಣೆಯ ನಂತರ, ಸಿಬಿಐ ನ್ಯಾಯಾಲಯವು ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತನ್ನ ಅಂತಿಮ ನಿರ್ಧಾರವನ್ನು ನೀಡಿದೆ.

ಧರ್ಮಸ್ಥಳ ಗ್ರಾಮದ ಪಾಂಗಾಳ(Paangala) ನಿವಾಸಿಗಳಾದ ಕುಸುಮಾವತಿ ಮತ್ತು ಚಂದಪ್ಪ ಗೌಡ ಪುತ್ರಿ ಸೌಜನ್ಯ ರವರ ಈ ಭೀಕರ ಕೊಲೆ ಪ್ರಕರಣದಲ್ಲಿ ಆರೋಪಿಗಳು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ
ಉಳಿದುಕೊಂಡಂತಾಗಿದೆ. 2012ರ ಅಕ್ಟೋಬರ್ 9ರಂದು ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಜನ್ಯ ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು.
ಇದನ್ನು ಓದಿ: ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಗಡುವು ವಿಸ್ತರಣೆ : ಆನ್ಲೈನ್ನಲ್ಲಿ ಹೇಗೆ ಅಪ್ಡೇಟ್ ಮಾಡಬಹುದು ?
ಮಣ್ಣಸಂಕ ಬಳಿ ಮರುದಿನ ರಾತ್ರಿ ಆಕೆಯ ಮೃತದೇಹ ಪತ್ತೆಯಾಗಿತ್ತು.ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿತ್ತು.

ಕಾರ್ಕಳ (Karkala) ತಾಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿ ಸಂತೋಷ್ ರಾವ್ (Santhosh Rao) ಎಂಬಾತನನ್ನು ಶಂಕಿತ ಆರೋಪಿಯಾಗಿದ್ದ.ಈತನನ್ನು ಬಾಹುಬಲಿ ಬೆಟ್ಟದ ಬಳಿ ಸಾರ್ವಜನಿಕರು ಹಿಡಿದು
ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಸಿಐಡಿಗೆ ಈ ಪ್ರಕರಣವನ್ನು ನೀಡಲಾಗಿತ್ತು.ಆರು ಬಾರಿ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗದೆ ಸಂತೋಷ್ ರಾವ್ ತಲೆಮರೆಸಿಕೊಂಡಿದ್ದ.
ರಶ್ಮಿತಾ ಅನೀಶ್