ಈ ವಿಚಿತ್ರ ಹೂವುಗಳ ಬಗ್ಗೆ ನೀವು ಕೇಳಿರೋಕೆ ಸಾಧ್ಯವಿಲ್ಲ!

Flowers

ಸ್ವಾಡೆಲ್ಡ್ ಬೇಬೀಸ್ : ಸ್ವಾಡೆಲ್ಡ್ ಬೇಬೀಸ್(Swaddled Babies) ಹೂವು(Flower) ಹೆಸರೇ ಸೂಚಿಸುವಂತೆ ಬಟ್ಟೆಯಲ್ಲಿ ಸುತ್ತಿದ ಮಗುವಿನಂತೆ ಕಾಣುವುದು ಅದರ ವಿಶೇಷವಾಗಿದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ದಿ ಆಂಗ್ಲೋವಾ ಯುನಿಫ್ಲೋರಾ ಎಂದು ಕರೆಯಲಾಗುತ್ತದೆ. ಇದೂ ಕೂಡಾ ಒಂದು ಆರ್ಕಿಡ್(Orchid) ಆಗಿದ್ದು, ಸಾಮಾನ್ಯವಾಗಿ ಈ ಹೂವು ಕೊಲಂಬಿಯಾದ ಆಂಡಿಸ್ ನಲ್ಲಿ ಹುಟ್ಟಿ ಬೆಳೆಯುತ್ತದೆ. ಈ ಹೂವನ್ನು ನೋಡಿದರೆ ಮಗುವೊಂದು ಬಟ್ಟೆಯೊಳಗೆ ಸುತ್ತಿದ್ದು, ಅದು ನಗುತ್ತಿರುವಂತೆ ಕಾಣುತ್ತದೆ.

ಯುಲಾನ್ ಮ್ಯಾಗ್ನೋಲಿಯಾ : ಈ ಹೂವು ನೋಡಲು ಥೇಟ್ ಪಕ್ಷಿಯ ಹಾಗೆ ಕಾಣುವ ವಿಶಿಷ್ಟವಾದ ಹೂವು. ಈ ಪ್ರಭೇದಕ್ಕೆ ಸೇರಿರುವ ಹೂವುಗಳನ್ನು ನಾವು ಹೆಚ್ಚಾಗಿ ಚೀನಾ ದೇಶದ ರಾಜಧಾನಿ ಬೀಜಿಂಗ್ ನ ಬೀದಿಯ ಉದ್ಯಾನವನಗಳಲ್ಲಿ ಹಾಗು ರಸ್ತೆಯ ಗ್ರೀನ್‌ಬೆಲ್ಟ್‌ಗಳಲ್ಲಿ ಕಾಣಬಹುದು. ಮಾರ್ಚ್ ತಿಂಗಳಿನಲ್ಲಿ ಈ ಹೂವುಗಳು ಹೆಚ್ಚಾಗಿ ಬಿಡುವುದರಿಂದ ಚೀನಾದಲ್ಲಿ ಮಾರ್ಚ್ ತಿಂಗಳನ್ನು ಯುಲಾನ್ ಅಥವಾ ಮ್ಯಾಗ್ನೋಲಿಯಾ ಹೂವುಗಳ ತಿಂಗಳು ಎಂದು ಕರೆಯುತ್ತಾರೆ.
ಚೀನಾದ ಬುದ್ಧ ದೇವಾಲಯಗಳ ಉದ್ಯಾನವನಗಳಲ್ಲಿ ಕ್ರಿ.ಶ 600 ರಿಂದ ಈ ಯುಲಾನ್ ಮ್ಯಾಗ್ನೋಲಿಯಾ ಗಿಡಗಳನ್ನು ಬೆಳಸಲಾಗುತ್ತಿದೆ.

ಪವಿತ್ರತೆಯ ಸಂಕೇತವಾದ ಈ ಹೂವಿನ ಮರಗಳನ್ನು ಟ್ಯಾಂಗ್ ರಾಜವಂಶಸ್ತರು ತಮ್ಮ ಅರಮನೆಯಲ್ಲಿ ಬೆಳೆಸುತ್ತಿದ್ದರು ಎಂದು ಹೇಳಲಾಗುತ್ತದೆ. ಮ್ಯಾಗ್ನೋಲಿಯಾ ಹೂವಿನ ವಿಶೇಷತೆ ಏನೆಂದರೆ, ಎಲೆಗಳು ಕೊಂಬೆಗಳಿಂದ ಚಾಚುವ ಮೊದಲೇ ಹೂವುಗಳು ಪೂರ್ಣವಾಗಿ ಅರಳುತ್ತವೆ. ಈ ಯುಲಾನ್ ಮ್ಯಾಗ್ನೋಲಿಯಾ ಗಿಡಗಳನ್ನು ಲಿಲ್ಲಿ ಟ್ರೀ ಎಂದು ಸಹ ಕರೆಯಲಾಗುತ್ತದೆ.

Exit mobile version