ಗುಟ್ಕಾ ಉಗುಳಲು ಇಂಡಿಗೋ ವಿಮಾನದ ಕಿಟಕಿ ತೆರೆಯಿರಿ ಎಂದ ವ್ಯಕ್ತಿ..

New Delhi : ಇಂಡಿಗೋ ಏರ್‌ಲೈನ್(Indigo Airline) ವಿಮಾನದಲ್ಲಿ ಪ್ರಯಾಣಿಕನೊಬ್ಬ ಗುಟ್ಕಾವನ್ನು ಉಗುಳಲು ವಿಮಾನದ ಕಿಟಕಿಯನ್ನು ಪ್ರಯಾಣದ ಮಧ್ಯದಲ್ಲಿ ತೆರೆಯುವಂತೆ ಗಗನಸಖಿಯನ್ನು ಕೇಳಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ(spit gutka viral video) ಭಾರಿ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ವಿಮಾನಗಳಲ್ಲಿ ವಿಚಿತ್ರ ಘಟನೆಗಳು ಸಂಭವಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಇಂಥಾ ಸುದ್ದಿಗಳೇ ಹೆಚ್ಚೆಚ್ಚು ಹರಿದಾಡುತ್ತಿವೆ.

ಸದ್ಯ ಈ ಘಟನೆಯು ಇದೇ ಸಾಲಿಗೆ ಸೇರಿದ್ದು, ಈ ಘಟನೆಯು ಮೊದ ಮೊದಲು ನೆಟ್ಟಿಗರನ್ನು ಕೆರಳಿಸಿತ್ತು, ತದನಂತರ ಹಾಸ್ಯದ ಹೊನಲನ್ನೇ ಹರಿಸುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ, ಇಂಡಿಗೋ ಏರ್‌ಲೈನ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಗುಟ್ಕಾವನ್ನು (spit gutka viral video) ಉಗುಳಲು ವಿಮಾನದ ಕಿಟಕಿಯನ್ನು ಪ್ರಯಾಣದ ಮಧ್ಯೆ ತೆರೆಯುವಂತೆ ಗಗನಸಖಿಯನ್ನು(Air hostess) ಕೇಳಿದ್ದಾನೆ!

ಸದ್ಯ ಈ ವೀಡಿಯೋ ಹಾಸ್ಯಮಯವಾಗಿದ್ದು, ಈ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಂ(Instagram) ಖಾತೆಯಲ್ಲಿ ಅಪ್‌ಲೋಡ್ ಮಾಡಲಾದ ಗೋವಿಂದ್ ಶರ್ಮಾ,

“ತಮ್ಮ ಗುಟ್ಕಾ ಪ್ರೇಮಿ ಸ್ನೇಹಿತನನ್ನು ಟ್ಯಾಗ್ ಮಾಡಲು” ನೆಟ್ಟಿಗರನ್ನು ಕೇಳಿದ್ದಾರೆ. ವೀಡಿಯೊದಲ್ಲಿ ಪ್ರಯಾಣಿಕರ ಪ್ರಶ್ನೆಯನ್ನು ಆಲಿಸಿದ ಗಗನಸಖಿ ಕೂಡ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಗಗನಸಖಿಯ ನಗುವಿಗೆ ಸುತ್ತಮುತ್ತಲಿನ ಪ್ರಯಾಣಿಕರು ಕೂಡ ಜೊತೆಗೂಡಿದ್ದು, ಆ ವ್ಯಕ್ತಿ ಗಗನಸಖಿಯನ್ನು ಕೇಳಿದ ಪರಿಗೆ ಫಿದಾ ಆಗಿದ್ದಾರೆ.

ವಿಮಾನದ ಪ್ರಯಾಣದ ನಡುವೆ ಆತ ಗುಟ್ಕಾ ಉಗುಳಲು ಕಿಟಕಿ ತೆರೆಯಲು ಹೇಳಿ ಮೋಜಿನ ಕ್ಷಣವನ್ನು ಸೃಷ್ಟಿಸಿದ್ದಾನೆ ಎಂದು ಕಾನ್ಪುರ್(Kanpur) ವಿಮಾನ ಪುಟ ಈ ವೀಡಿಯೋ ಪೋಸ್ಟ್ ಮಾಡಿ, ಶೀರ್ಷಿಕೆ ನೀಡಿದೆ.

ಇನ್ನು ಆ ವ್ಯಕ್ತಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವೀಡಿಯೊಗೆ ಅನೇಕರು ವಿಭಿನ್ನವಾಗಿ ಕಮೆಂಟ್ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಕೆ.ಎಲ್ ರಾಹುಲ್ ಬಾಳ ಸಂಗಾತಿಯಾದ ಅಥಿಯಾ ಶೆಟ್ಟಿ..

ಸದ್ಯ ಈ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುವ ಮೂಲಕ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.

ಇನ್ನು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ(Tejaswi surya)

ಅವರು ವಿಮಾನದಲ್ಲಿ ಪ್ರಯಾಣಿಸುವಾಗ ವಿಮಾನ ಹೊರಡುವ ಮುನ್ನ ತುರ್ತು ಬಾಗಿಲನ್ನು ತೆರಯಲು ಮುಂದಾಗಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಗದ್ದಲವನ್ನು ಸೃಷ್ಟಿಸಿತ್ತು!

Exit mobile version