“ಭಯೋತ್ಪಾದಕರು ಕೆನಡಾದಲ್ಲಿ ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ” ಕೆನಡಾ ವಿರುದ್ದ ವಾಗ್ದಾಳಿ ನಡೆಸಿದ ಶ್ರೀಲಂಕಾ

Colombo: ಕೆಲವು ಭಯೋತ್ಪಾದಕರು ಕೆನಡಾದಲ್ಲಿ ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ. ಕೆನಡಾದ ಪ್ರಧಾನಿಯವರು ಯಾವುದೇ (Sri Lanka slams at Canada) ಪುರಾವೆಗಳಿಲ್ಲದೆ ಭಾರತದ

ಮೇಲೆ ಕೆಲವು ಅತಿರೇಕದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ (Ali Sabri) ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau)

ವಿರುದ್ಧ ತೀವ್ರ (Sri Lanka slams at Canada) ವಾಗ್ದಾಳಿ ನಡೆಸಿದ್ದಾರೆ.

ಭಾರತ ಮತ್ತು ಕೆನಡಾ (Canada) ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯ ಕುರಿತು ಮಾತನಾಡಿರುವ ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಅವರು, ಕೆಲವು ಭಯೋತ್ಪಾದಕರು

ಕೆನಡಾದಲ್ಲಿ ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ. ಆದರೆ ಕೆನಡಾದ ಪ್ರಧಾನಿಯವರು ಯಾವುದೇ ಪುರಾವೆಗಳಿಲ್ಲದೆ ಕೆಲವು ಅತಿರೇಕದ ಆರೋಪಗಳನ್ನು ಭಾರತದ ವಿರುದ್ದ ಮಾಡುತ್ತಿದ್ದಾರೆ. ಈ ಹಿಂದೆ

ಶ್ರೀಲಂಕಾದ (Srilanka) ಮೇಲೂ ಇಂತಹದ್ದೇ ಆರೋಪಗಳನ್ನು ಮಾಡಲಾಗಿತ್ತು. ಶ್ರೀಲಂಕಾದಲ್ಲಿ ನರಮೇಧ ನಡೆದಿದೆ ಎನ್ನುವ ಭಯಾನಕ ಮತ್ತು ಸಂಪೂರ್ಣವಾದ ಸುಳ್ಳನ್ನು ಹೇಳುವ ಮೂಲಕ

ಆರೋಪ ಮಾಡಲಾಗಿತ್ತು. ಆದರೆ ನಮ್ಮ ದೇಶದಲ್ಲಿ ಯಾವುದೇ ನರಮೇಧ ನಡೆದಿಲ್ಲ ಎಂದು ಎಲ್ಲರಿಗೂ ತಿಳಿದಿದೆ ಎಂದು ಸಬ್ರಿ ಅವರು ಹೇಳಿದರು.

ಇನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು, ಅತಿರೇಕದ ಮತ್ತು ಯಾವುದೇ ರೀತಿಯಿಂದಲೂ ಸಮರ್ಥಿಸಲಾಗದ ಆರೋಪಗಳನ್ನು ಮಾಡುವುದರಲ್ಲಿ ನನಗೆ ಯಾವುದೇ ಆಶ್ಚರ್ಯವಿಲ್ಲ. ಅವರು

ಎರಡನೇ ಮಹಾಯುದ್ಧದ ಸಮಯದಲ್ಲಿ ನಾಜಿಗಳೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಗೆ ಅದ್ದೂರಿ ಸ್ವಾಗತವನ್ನು ನೀಡಿದ್ದು, ಇದು ಪ್ರಶ್ನಾರ್ಹವಾಗಿದೆ ಎಂದು ಶ್ರೀಲಂಕಾ ಕೆನಡಾ ವಿರುದ್ದ ಕಿಡಿಕಾರಿದೆ.

ಜೂನ್ನಲ್ಲಿ ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜಾರ್ (Hardeep Singh Nizza) ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಟ್ರೂಡೊ ಆರೋಪಿಸಿದ ಕಾರಣ ಭಾರತ ಮತ್ತು ಕೆನಡಾ

ನಡುವೆ ರಾಜತಾಂತ್ರಿಕ ಬಿರುಕು ಉಂಟಾಗಿದೆ. 2020 ರಲ್ಲಿ ಭಾರತದಿಂದ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿದ್ದ ನಿಜ್ಜರ್ ಅವರನ್ನು ಜೂನ್ 18 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಹತ್ಯೆ

ಮಾಡಲಾಗಿತ್ತು. ಕೆನಡಾದ ಪ್ರಧಾನಿ ಟ್ರುಡೊ ಅವರ ಆರೋಪಗಳನ್ನು ಭಾರತವು “ಅಸಂಬದ್ಧ” ಮತ್ತು “ಪ್ರಚೋದಿತ” ಎಂದು ತಿರಸ್ಕರಿಸಿದೆ. ಭಾರತವು ಕೆನಡಾದಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಮತ್ತು

ವಿದ್ಯಾರ್ಥಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಇನ್ನೊಂದೆಡೆ ಹೆಚ್ಚುತ್ತಿರುವ ರಾಜತಾಂತ್ರಿಕ ದ್ವೇಷಕ್ಕೆ ಪ್ರತಿಕ್ರಿಯೆಯಾಗಿ ಭಾರತ ತನ್ನ ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಇದನ್ನು ಓದಿ: “ಭಯೋತ್ಪಾದಕರು ಕೆನಡಾದಲ್ಲಿ ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ” ಕೆನಡಾ ವಿರುದ್ದ ವಾಗ್ದಾಳಿ ನಡೆಸಿದ ಶ್ರೀಲಂಕಾ

Exit mobile version