ಬೆಂಗಳೂರಿನಿಂದ (Bengaluru) 66 ಕಿ.ಮೀ ದೂರದಲ್ಲಿರುವ ಸಿದ್ದಗಂಗಾ ಮಠಕ್ಕೆ ಕಾಲಿಟ್ಟರೆ (Sri Shivakumara Swamiji Birthday) ಹೀಗನಿಸದೇ ಇರದು. ಇದು ಮಠವೋ, ಬಡಬಗ್ಗರಿಗೆ ಕಾಲೋನಿಯೋ ಅಥವಾ
ವಿದ್ಯಾ ಕೇಂದ್ರವೋ ಎಂಬ (Sri Shivakumara Swamiji Birthday) ಗೊಂದಲಗಳು ಕಾಡುತ್ತದೆ. ಆದರೆ ಎಲ್ಲವೂ ಸತ್ಯ.
ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ. ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ. ಕಾವಿಯುಡುಗೆಯನ್ನುಟ್ಟು ನಭವೇ ಕಿರಣ ಹತವೇ ಕಣ್ತೆರೆದಿದೆ ಎಂಬ
ಡಾ. ಜಿ.ಎಸ್.ಶಿವರುದ್ರಪ್ಪನವರ (G.S.Shivarudrappa) ನಾಲ್ಕು ಸಾಲುಗಳೇ ಸಾಕು ಸಿದ್ಧಗಂಗಾ ಮಠದ ಮಹಾತ್ಮೆಯನ್ನು ಹಾಡಿ ಹೊಗಳಲು. ಇದು ಹೆಸರಿಗೆ ಲಿಂಗಾಯತರ ಮಠವಾಗಿದ್ದರೂ
ಅನ್ನ ಮತ್ತು ವಿದ್ಯಾದಾನಕ್ಕೆ ಜಾತಿ ಅಥವಾ ಧರ್ಮ ಎಂದೂ ಲೆಕ್ಕಾಚಾರದ ಅಳತೆಗೋಲಾಗಿಲ್ಲ! ಹೆಳವ, ಬೆಸ್ತ, ಗಾಣಿಗ,ಅಂಬಿಗ, ಗೊಲ್ಲ,ಯಾದವ,ಕುಂಬಾರ,ಚಮ್ಮಾರ ಹಾಗೂ ಮುಸಲ್ಮಾನರೂ (Muslim)
ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಮಕ್ಕಳಿಗೆ ಊಟ, ವಸತಿ ಮತ್ತು ವಿದ್ಯೆಯನ್ನು ಮಾತ್ರ ಉಚಿತವಾಗಿ ನೀಡುತ್ತಿಲ್ಲ. ಶೇ.50 ಮಕ್ಕಳು ದಿಕ್ಕು-ದಿಸೆಯಿಲ್ಲದ, ಅಪ್ಪ-ಅಮ್ಮ ದೂರ ಮಾಡಿದ ಅನಾಥರೇ ಆಗಿದ್ದರೂ
ಪ್ರೀತಿಗೆ ಎಂದೂ ಕೊರತೆ ಮಾಡಿಲ್ಲ.
ಶ್ರೀ ಶಿವಕುಮಾರ ಸ್ವಾಮೀಜಿಗಳು (Shree Shivakumar Swamiji) ಉತ್ತರಾಧಿಕಾರಿಯಾದಾಗಿನಿಂದ ಈಗಿರುವ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಇಲ್ಲಿಯವರೆಗೂ ವಾರಕ್ಕೊಮ್ಮೆ ಸ್ವತಃ ನೂರಾರು
ಮಕ್ಕಳಿಗೆ ಬಿಸಿನೀರಿನ ಸ್ನಾನ ಮಾಡಿಸುತ್ತಾರೆ. ಅನಾಥರಾಗಿದ್ದರೂ ಅನಾಥ ಪ್ರಜ್ಞೆ ಮಕ್ಕಳನ್ನು ಕಾಡಲು ಬಿಟ್ಟಿಲ್ಲ. ಪ್ರತಿ ದಿನ ಸಾಯಂಕಾಲ ಬಿಳಿ ಪಂಚೆ, ಕೆಂಪು ಉತ್ತರೀಯ ಹಾಗೂ ಹಣೆಗೆ ವಿಭೂತಿ ಧರಿಸಿದ
ಮಕ್ಕಳು ಜಾತಿ-ಮತಗಳ ಭೇದವಿಲ್ಲದೆ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಹಾಗಂತ ಕಟ್ಟುಪಾಡುಗಳನ್ನು ಹಾಕಿಲ್ಲ. ಶಿಸ್ತಿನ ಹೆಸರಿನಲ್ಲಿ ಮಕ್ಕಳ ಉಸಿರು ಕಟ್ಟಿಸುವುದಿಲ್ಲ. ಅದಕ್ಕೇ ಹೇಳಿದ್ದು ಇದು
ಮಠವೋ ಬಡಬಗ್ಗರ ಕಾಲೊನಿಯೋ ಎಂಬ ಅನುಮಾನ ಕಾಡುತ್ತದೆ ಎಂದು.
ಪ್ರತಿ ಭಾನುವಾರ ಇಷ್ಟಬಂದ ಆಟವಾಡುವ, ಎಲ್ಲೆಂದರಲ್ಲಿ ಕುಣಿದು ಕುಪ್ಪಳಿಸುವ, ಟಿವಿ ನೋಡುವ ಮುಕ್ತ ಸ್ವಾತಂತ್ರ್ಯವನ್ನು ಮಕ್ಕಳಿಗೆ ಕಲ್ಪಿಸಲಾಗಿದೆ.ಇಲ್ಲಿನ ಮತ್ತೊಂದು ವಿಶೇಷವೆಂದರೆ, ಮೇಲುಕೀಳೆಂಬ
ಭೇದವಿಲ್ಲದೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಸಂಸ್ಕೃತ ಕಲಿಸಲಾಗುತ್ತದೆ. ಇಲ್ಲಿ ಮುಸ್ಲಿಂ ವಿದ್ಯಾರ್ಥಿಗಳೂ ವೈಯಕ್ತಿಕ ಆಸಕ್ತಿಯೊಂದಿಗೆ ಸಂಸ್ಕೃತ
ವ್ಯಾಸಂಗ ಮಾಡುತ್ತಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು. ಪ್ರಥಮಾ, ಕಾವ್ಯ, ಸಾಹಿತ್ಯ, ವಿದ್ವನ್ಮಧ್ಯಮಾ ಹಾಗೂ ವಿದ್ವದುತ್ತಮಾ ತರಗತಿಗಳಲ್ಲಿ ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿದ್ದಾರೆ.
ವೇದ-ಉಪನಿಷತ್ತುಗಳನ್ನು ಬೋಧಿಸಲಾಗುತ್ತದೆ. ಆದರೆ ವಿದ್ಯೆಯೊಂದನ್ನೇ ಇಲ್ಲಿ ಕಲಿಸುವುದಿಲ್ಲ. ಕಚೇರಿಯಲ್ಲಿ ಕುಳಿತು ಕಡತಗಳನ್ನು ತಿರುವಿ ಹಾಕುವ ಗುಮಾಸ್ತರನ್ನೋ, ಅಧಿಕಾರಿಗಳನ್ನೋ ಮಾತ್ರ ಇಲ್ಲಿ ರೂಪಿಸುತ್ತಿಲ್ಲ.
ಮಕ್ಕಳಿಗೆ ಪ್ರಾಯೋಗಿಕ ಕೃಷಿ ಪಾಠವಿದೆ. ಮಕ್ಕಳೇ ಕೃಷಿ ಮಾಡುತ್ತಾರೆ. ದವಸ-ಧಾನ್ಯ ಬೆಳೆಯುತ್ತಾರೆ.ಮುಂದೊಂದು ದಿನ ಕಚೇರಿಯಲ್ಲಿ ಕೆಲಸ ಸಿಗದಿದ್ದರೂ ದುಡಿದು ತಿನ್ನುವ ಮಾರ್ಗವನ್ನು ಮಠದಲ್ಲಿ
ತೋರಿಸುತ್ತಾರೆ. ಹಾಗಾಗಿಯೇ ಪರೀಕ್ಷೆಯಲ್ಲಿ ಫೇಲಾದರೆಂದು ಮಠದಿಂದ (Matt) ಹೊರಹಾಕುವುದಿಲ್ಲ. ಜತೆಗೆ ಮಕ್ಕಳನ್ನು ಮಠಕ್ಕೆ ಬಿಡಲು ಕರೆದುಕೊಂಡು ಬಂದು ವಾಪಸ್ ಕರೆದುಕೊಂಡುಹೋದ
ಪ್ರಸಂಗವನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ. ಜಗತ್ತೇ ದೂರ ಮಾಡಿದವರಿಗೂ ಮಠದ ಬಾಗಿಲು ಮಾತ್ರ ಸದಾ ತೆರೆದೇ ಇರುತ್ತದೆ. ಮಠದಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕದ ಬಡ ಮತ್ತು ಅನಾಥ ಮಕ್ಕಳೇ
ಕಂಡುಬರುತ್ತಾರೆ. ಅದರಲ್ಲೂ ಗುಡ್ಡಗಾಡುಗಳಿಂದ ಬಂದು ಕಲಿಯುವ ಮಕ್ಕಳದೇ ಮೇಲುಗೈ.
ಸಾಕಲು ಕಷ್ಟವಾಗುತ್ತದೆ ಎಂದು ಮಠಕ್ಕೆ ಬಿಟ್ಟು ಗುಳೆ ಹೋಗುವ ಇಲ್ಲಿನ ಜನರು ಏಳೆಂಟು ವರ್ಷಗಳಾದರೂ ಮಕ್ಕಳ ಮುಖ ನೋಡಲೂ ಬರುವುದಿಲ್ಲ. ಅಂತಹ ಮಕ್ಕಳನ್ನು ಸ್ವಂತ ಕುಡಿಗಳೆಂಬಂತೆ ಸಾಕಿ-ಸಲಹಿ,
ವಿದ್ಯೆ ನೀಡಿ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವ ಮಹತ್ಕಾರ್ಯ ಮಠದಲ್ಲಿ ನಡೆಯುತ್ತಿದೆ. ಪುಕ್ಕಟೆ ಎಂದ ಮಾತ್ರಕ್ಕೆ ಯಾವುದೂ ಇಲ್ಲಿ ಕಳಪೆಯಾಗಿಲ್ಲ.ನಮ್ಮ ಮನೆಗಳಿಗಿಂತಲೂ ಯೋಗ್ಯ ಕೊಠಡಿಗಳನ್ನು
ಮಕ್ಕಳಿಗೆ ವಸತಿ ಕಟ್ಟಿಸಲಾಗಿದೆ. ಊಟದ ಹಾಲ್ ಕೂಡ ಅಷ್ಟೇ ಸುಸಜ್ಜಿತವಾಗಿದೆ. ಅತ್ಯಾಧುನಿಕ ಗ್ರಂಥಾಲಯ, ಕಂಪ್ಯೂಟರ್ (Computer) ಕೇಂದ್ರಗಳಿವೆ. ಇಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಕ್ಕಳಿಗೆ ಮಾತ್ರವಲ್ಲ,
ನಿತ್ಯವೂ ಮಠಕ್ಕೆ ಭೇಟಿ ಕೊಡುವ ಸಾವಿರಾರು ಭಕ್ತಾದಿಗಳಿಗೂ, ಪ್ರವಾಸಿಗಳಿಗೂ ದಿನದ ಇಪ್ಪತ್ನಾಲ್ಕು ಗಂಟೆಗಳೂ ಊಟದ ಸೌಲಭ್ಯವಿದೆ! ಅಷ್ಟು ಮಾತ್ರವಲ್ಲ.
ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು (Siddaganga Engineer College), ಸಿದ್ಧಗಂಗಾ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್, ಸಿದ್ಧಗಂಗಾ ಪಾಲಿಟೆಕ್ನಿಕ್, ಸಿದ್ಧಗಂಗಾ ಕಾಲೇಜ್ ಆಫ್ ಫಾರ್ಮಸಿ,
ಸಿದ್ಧಗಂಗಾ ಸ್ಕೂಲ್ ಆಫ್ ನರ್ಸಿಂಗ್, ಐಟಿಐ, ಡಿ.ಎಡ್ ಕಾಲೇಜುಗಳು, ಪ್ರಥಮ ದರ್ಜೆ ಕಾಲೇಜುಗಳು, ಪದವಿಪೂರ್ವ ಕಾಲೇಜುಗಳು, ಸಂಸ್ಕೃತ ಕಾಲೇಜು, ಪ್ರೌಢಶಾಲೆಗಳು, ನರ್ಸರಿ ಶಾಲೆಗಳು, ಅಂಧ ಮಕ್ಕಳ
ಪಾಠಶಾಲೆ, ದೈಹಿಕ ಶಿಕ್ಷಣ ಮಹಾವಿದ್ಯಾಲಯ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾದಾನ ಮಾಡಲಾಗುತ್ತಿದೆ. ಕರ್ನಾಟಕದಲ್ಲಿರುವ (Karnataka) ಏಕೈಕ ಕನ್ನಡ ಪಂಡಿತ ತರಬೇತಿ
ಸಂಸ್ಥೆಯೂ ಸಿದ್ಧಗಂಗಾದ್ದೇ ಆಗಿದೆ. ಹೀಗೆ ಇಲ್ಲಿ ಪ್ರಸ್ತುತ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ!
ಕಾಯಕವೇ ಕೈಲಾಸ ಎಂದ ಬಸವಣ್ಣನೇನಾದರೂ ಇಂದು ಬದುಕಿದ್ದರೆ ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಬಗ್ಗೆ ಖಂಡಿತ ಹೆಮ್ಮೆ ಪಡುತ್ತಿದ್ದರು. ಮಠಕ್ಕೆ 600 ವರ್ಷಗಳ ಇತಿಹಾಸವಿದೆ.
ಶ್ರೀ ಗೋಸಲ ಸಿದ್ಧೇಶ್ವರರು ಅದರ ಸ್ಥಾಪಕರು. ಸಿದ್ಧಗಂಗಾವನ್ನು ತಮ್ಮ ಕಾರ್ಯುಕ್ಷೇತ್ರವನ್ನಾಗಿಸಿಕೊಂಡು ಧರ್ಮಪ್ರಚಾರ ಮಾಡಿದವರು. ಕರ್ನಾಟಕ, ಕೇರಳ, ತಮಿಳುನಾಡು (Karnataka, Kerala,
Tamilnadu) ಮಹಾರಾಷ್ಟ್ರಗಳಲ್ಲಿ ಸಂಚರಿಸಿದ ಇವರ ಪ್ರಭಾವದಿಂದಲೇ ಕರ್ನಾಟಕದಲ್ಲಿ ಜಂಗಮ ಪರಂಪರೆ ಬೆಳೆದಿದ್ದು.
ಇದರ ನಂತರ ಅದರಲ್ಲೂ 18ನೇ ಶತಮಾನದಿಂದೀಚೆಗೆ ಶ್ರೀ ನಂಜುಂಡಸ್ವಾಮಿ, ಶ್ರೀ ರುದ್ರಸ್ವಾಮಿ (Shree Rudraswamy), ಶ್ರೀ ಸಿದ್ಧಲಿಂಗಸ್ವಾಮಿ, ಶ್ರೀ ಉದ್ವಾನಸ್ವಾಮಿಗಳು ಬಂದುಹೋಗಿದ್ದಾರೆ.
ಆದರೆ 1930ರಲ್ಲಿ ಬ್ರಹ್ಮಚರ್ಯ ದೀಕ್ಷೆ ಪಡೆದು ಮಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿ ವಿಶಿಷ್ಟವೆನಿಸಿದರು. ಮಕ್ಕಳಲ್ಲಿ ದೇವರಿದ್ದಾನೆ ಎಂಬ ಮಾತನ್ನು ನೀವು ಒಪ್ಪುವುದಾದರೆ, ಅನ್ಯರ ಮಕ್ಕಳ ಅಭ್ಯುದಯದ
ಜೀವನದ ಸರ್ವಸ್ವ ಕಾಣುತ್ತಿದ್ದ ಡಾ||ಶಿವಕುಮಾರ ಸ್ವಾಮೀಜಿಗಳು ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಸ್ವಾಮೀಜಿ ಮಾಡಿದ್ದಾರೆ.
ಒಂದು ಸರಕಾರ ತೋರಬೇಕಾದ ಸಾಮಾಜಿಕ ಕಾಳಜಿಯನ್ನು ಸ್ವಾಮೀಜಿ ತೋರಿದ್ದಾರೆ. ಬೂದಿ, ವಾಚು, ಉಂಗುರ ಕೊಡುವ, ಮಾಂತ್ರಿಕ ಶಕ್ತಿಯ ಮೂಲಕ ರೋಗ ಗುಣ ಪಡಿಸುತ್ತೇನೆ ಎನ್ನುವ ಸೋಗಲಾಡಿಗಳು,
ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ಕಟ್ಟಿ ಕಾಲೇಜೇ ಕಾಮಧೇನು ಎಂಬಂತೆ ವರ್ತಿಸುವ ಸ್ವಾಮೀಜಿಗಳೇ ನಮ್ಮ ಸುತ್ತಲೂ ಇರುವ ಇಂತಹ ಪರಿಸ್ಥಿತಿಯಲ್ಲೂ ಶ್ರೀ ಶಿವಕುಮಾರ ಸ್ವಾಮೀಜಿಯಂತಹವರು
ಇದ್ದದ್ದು ನಮ್ಮ ಅದೃಷ್ಟ ಎನ್ನಬಹುದು. ಹಾಗಾಗಿಯೇ ನಿತ್ಯವೂ 10 ರಿಂದ 12 ಸಾವಿರ ಜನರಿಗೆ ಹಗಲು ರಾತ್ರಿಯೆನ್ನದೇ ಅನ್ನಸಂತರ್ಪಣೆ ನಡೆಯುತ್ತಿದೆ.
ಅಂತಹ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡಬೇಕೆನ್ನುವುದೇ ನಮ್ಮೆಲ್ಲರ ಆಶಯ….
ಇದನ್ನು ಓದಿ; ಈ ಪರಮಭ್ರಷ್ಟ ವಿಶ್ವಗುರುಗಳನ್ನು ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಧೈರ್ಯ ನಮಗಿಲ್ಲವೇ? ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ
ವಿಶ್ವರೂಪ
ಅಂಕಣ: ವೀರಾಜ್ ಸ್ವಾಮಿ.ಎಂ