ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ; ಆರ್ಥಿಕ ಸಂಕಷ್ಟವನ್ನು ತಾಳಲಾರದೆ ಬಸ್ಸಿಗೆ ಬೆಂಕಿಯಿಟ್ಟು ಆಕ್ರೋಶ!

srilanka

ಶ್ರೀಲಂಕಾದಲ್ಲಿ(Srilanka)ಭೀಕರ ಆರ್ಥಿಕ ಬಿಕ್ಕಟ್ಟು(Financial Crisis)ಎದುರಾಗಿದ್ದು, ಜನಸಾಮಾನ್ಯರ ಆಕ್ರೋಶ ಮುಗಿಲುಮುಟ್ಟಿದೆ! ಆರ್ಥಿಕ ಬಿಕ್ಕಟ್ಟಿನ ಹಿಂಸಾಚಾರ ಮತ್ತು ಆಕ್ರೋಶವೂ ತೀವ್ರ ಉದ್ವೀಗ್ನ ಪರಿಸ್ಥಿತಿಗೆ ತಲುಪಿದ್ದು, ರಾತ್ರಿಯಲ್ಲಿ ನೂರಾರು ಪ್ರತಿಭಟನಾಕಾರರು ಶ್ರೀಲಂಕಾದ ರಾಜಧಾನಿ(Capital) ಕೊಲೊಂಬೋ(Colombo) ಅಧ್ಯಕ್ಷರ(President) ಮನೆಯ ಮೇಲೆ ದಾಳಿ ಮಾಡಲು ಯತ್ನಿಸಿದ್ದಾರೆ.

ತಮಗೆ ತೀವ್ರ ಭೀಕರ ಪರಿಸ್ಥಿತಿ ಎದುರಾಗಿದ್ದು, ಅದನ್ನು ಸಹಿಸಲಾಗದೇ ನೂರಾರು ಜನರು ಅಧ್ಯಕ್ಷರ ನಿವಾಸದ ಮೇಲೆ ದಾಳಿ ಮಾಡಲು ಪ್ರಯತ್ನ ಮಾಡಿದ್ದಾರೆ. ಆದ್ರೆ ಪ್ರಯತ್ನಿಸಿದ ಬಳಿಕ ಶುಕ್ರವಾರ ಶ್ರೀಲಂಕಾದ ರಾಜಧಾನಿ ಭಾರೀ ಭದ್ರತೆಗೆ ಸಾಕ್ಷಿಯಾಗಿದೆ. ದಕ್ಷಿಣ ಏಷ್ಯಾದ ರಾಷ್ಟ್ರವು 1948 ರಲ್ಲಿ ಸ್ವಾತಂತ್ರ್ಯದ ನಂತರದ ಅತ್ಯಂತ ಕಷ್ಟಕರ ಕುಸಿತದಲ್ಲಿ ಅಗತ್ಯ ವಸ್ತುಗಳ ತೀವ್ರ ಕೊರತೆ, ತೀಕ್ಷ್ಣವಾದ ಬೆಲೆ ಏರಿಕೆ ಮತ್ತು ದುರ್ಬಲವಾದ ವಿದ್ಯುತ್ ಕಡಿತವನ್ನು ನೋಡುತ್ತಿದೆ.

ಗುರುವಾರ ರಾತ್ರಿ ಅಶಾಂತಿ ಕಾಡಿದ್ದು, ನೂರಾರು ಜನರು, ಅಪರಿಚಿತ ಸಾಮಾಜಿಕ ಮಾಧ್ಯಮ ಕಾರ್ಯಕರ್ತರಿಂದ ರ್ಯಾಲಿ ಮಾಡಲಾಯಿತು. ಅಧ್ಯಕ್ಷ ಗೋತಬಯ ಅವರ ರಾಜೀನಾಮೆಗೆ ಒತ್ತಾಯಿಸಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿ ಮೆರವಣಿಗೆ ಮಾಡಲಾಯಿತು. ಸ್ಥಳದಲ್ಲಿದ್ದ ಎರಡು ಮಿಲಿಟರಿ ಬಸ್‌ಗಳು ಮತ್ತು ಪೊಲೀಸ್ ಜೀಪ್ ಅನ್ನು ಸುಟ್ಟು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಮೇಲೆ ದಾಳಿ ಮಾಡಲು ಇಟ್ಟಿಗೆಗಳನ್ನು ಎಸೆದು, ಟೈರ್‌ಗಳಿಗೆ ಬೆಂಕಿ ಹಚ್ಚಿ ಕೊಲಂಬೋ ಮುಖ್ಯ ರಸ್ತೆಯನ್ನು ತಡೆದಿದ್ದಾರೆ.

ಈ ಪ್ರತಿಭಟನೆ ನಡುವೆ ಓರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಕದನದಲ್ಲಿ ಐವರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಡಿ ನಲವತ್ತೈದು ಜನರನ್ನು ಬಂಧಿಸಲಾಯಿತು. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಜನರ ಮೇಲೆ ಗುಂಡು ಹಾರಿಸಿ ಅಶ್ರುವಾಯು ಮತ್ತು ನೀರಿನ ಫಿರಂಗಿಯನ್ನು ಕೂಡ ಬಳಸಿದ್ದಾರೆ. ಲೈವ್ ರೌಂಡ್‌ಗಳನ್ನು ಬಳಸಿದ್ದಾರೆಯೇ ಅಥವಾ ರಬ್ಬರ್ ಬುಲೆಟ್‌ಗಳನ್ನು ಬಳಸಿದ್ದಾರೆಯೇ ಎಂಬುದು ಆ ಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಶುಕ್ರವಾರ ಮುಂಜಾನೆ ರಾತ್ರಿಯ ಕರ್ಫ್ಯೂ ಅನ್ನು ತೆಗೆದುಹಾಕಲಾಯಿತು. ಸದ್ಯ ನಗರದ ಸುತ್ತಲೂ ಪೊಲೀಸ್ ಮತ್ತು ಮಿಲಿಟರಿ ಉಪಸ್ಥಿತಿಯನ್ನು ಮತ್ತಷ್ಟು ಸಂಖ್ಯೆಯಲ್ಲಿ ಹೆಚ್ಚಿಸಲಾಗಿದೆ ಎಂದು ವರದಿಗಳು ತಿಳಿಸಿದೆ.

Exit mobile version