ಮೇ 19ರಂದು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ : ಬಿ.ಸಿ. ನಾಗೇಶ್!

SSLC

ಮೇ 19ರಂದು ಎಸ್‍ಎಸ್‍ಎಲ್‍ಸಿ(SSLC) ಪರೀಕ್ಷೆ ಫಲಿತಾಂಶ(Exam Result) ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ(Education Minister) ಬಿ.ಸಿ. ನಾಗೇಶ್(BC Nagesh) ತಿಳಿಸಿದ್ದಾರೆ.

ಕೊಡಗಿನಲ್ಲಿ(Kodagu) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶವನ್ನು ಮೇ 19 ರಂದು ಪ್ರಕಟಿಸಲಾಗುತ್ತದೆ. ಆದರೆ ಈ ಹಿಂದೆ ಮೇ 15ರಂದು ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುತ್ತೇವೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿತ್ತು. ಆದರೆ ಮೌಲ್ಯಮಾಪನ ವಿಳಂಭವಾದ ಕಾರಣ ಫಲಿತಾಂಶ ಕೊಂಚ ವಿಳಂಬವಾಗಿದೆ. ಇನ್ನು ಸಾಲು ಸಾಲು ರಜೆಗಳು ಬಂದ ಕಾರಣದಿಂದ ಮೌಲ್ಯಮಾಪನ ನಿರೀಕ್ಷಿತ ದಿನಾಂಕದಂದು ಪೂರ್ಣಗೊಳ್ಳಲಿಲ್ಲ.

ಆದರೆ ಇದೀಗ ಮೌಲ್ಯ ಮಾಪನ ಪ್ರಕ್ರಿಯೆ ಮುಗಿದಿದ್ದು, ಕೊನೆಯ ಹಂತದ ತಯಾರಿ ನಡೆಯುತ್ತಿದ್ದು, ಅಂಕಗಳ ದಾಖಲೀಕರಣ ಪೂರ್ಣಗೊಳಿಸಿ ಮೇ 19 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.
ಇನ್ನು ಮಾರ್ಚ್ 28 ರಿಂದ ಏಪ್ರಿಲ್ 11 ರವರಗೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ನಡೆದಿತ್ತು. ರಾಜ್ಯದಲ್ಲಿ ಒಟ್ಟು 15,378 ಶಾಲೆಗಳಿಂದ 8,73,886 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 4,52,875 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು ಮತ್ತು 4 ತೃತೀಯ ಲಿಂಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಅಲ್ಲದೆ ವಿಭಿನ್ನ ಸಾಮಥ್ರ್ಯವುಳ್ಳ 5,389 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟಾರೆಯಾಗಿ ಮೇ. 19ರಂದು 8,73,886 ವಿದ್ಯಾರ್ಥಿಗಳ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಇಲಾಖೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಬೆಳಿಗ್ಗೆ 10:30 ನಂತರ ಪಡೆದುಕೊಳ್ಳಬಹುದು.

Exit mobile version