ಸಮ್ಮಿಶ್ರ ಸರ್ಕಾರದ ದಂಧೆಗೆ ಮೈಶುಗರ್ ಬಲಿಯಾಯಿತು! ; ಅದರ ಪುನರಾರಂಭ ಮಾಡಿದ್ದು ರೈತಪರ ಬೊಮ್ಮಾಯಿ ಸರ್ಕಾರ : ಬಿಜೆಪಿ

CONGRESS

ಯಾರು ರೈತಪರ, ಯಾರು ಸ್ವಹಿತಸಾಧಕರು ಅಂತ ಮಂಡ್ಯದ(Mandya) ರೈತರಿಗೆ ಆಧಾರದಂತಿದ್ದ ಮೈಶುಗರ್ ಕಾರ್ಖಾನೆಯನ್ನು ಕಾಂಗ್ರೆಸ್‌ (Congress) ಬಂದ್ ಮಾಡಿಸಿದಾಗಲೇ ತಿಳಿದಿದೆ.

ಸಮ್ಮಿಶ್ರ ಸರ್ಕಾರದ ದಂಧೆಗೆ ಮೈಶುಗರ್ ಬಲಿಯಾಯಿತು. ಅದರ ಪುನರಾರಂಭ ಮಾಡಿದ್ದು ರೈತಪರವಾದ ಬೊಮ್ಮಾಯಿ ಸರ್ಕಾರ.

ಇನ್ನೊಮ್ಮೆ “ರೈತಪರ” ಎನ್ನುವ ಮೊದಲು ಕೈಪಕ್ಷ ತಮ್ಮ ಪಾಪ ಕರ್ಮ ನೆನೆಯಬೇಕು ಎಂದು ಬಿಜೆಪಿ(BJP) ಟೀಕಿಸಿದೆ. ಈ ಕುರಿತು ಟ್ವೀಟ್‌(Tweet) ಮಾಡಿರುವ ಬಿಜೆಪಿ,

ಭ್ರಷ್ಟ ಕಾಂಗ್ರೆಸ್‌ಪಕ್ಷದ ಆಡಳಿತದಲ್ಲಿ ಬೆಂಗಳೂರು(Bengaluru) ತೀವ್ರವಾಗಿ ನರಳಿತು. ಕಾನೂನು(Law) ಮತ್ತು ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟಿತ್ತು.

ಬಿಜೆಪಿ ಆಡಳಿತದಲ್ಲಿ ಕೈಪಕ್ಷದ ಗೂಂಡಾಗಳ ಹೆಡೆಮುರಿ ಕಟ್ಟಿದ್ದರಿಂದ ಬೆಂಗಳೂರಿನ ನಿವಾಸಿಗಳು ಈಗ ನೆಮ್ಮದಿಯಿಂದಿದ್ದಾರೆ. ಇನ್ನು ಕೆಲಸಕ್ಕೆ ಅರ್ಜಿ ಹಾಕಿಲ್ಲವೇ? ಪರವಾಗಿಲ್ಲ ಬಿಡಿ, ಭ್ರಷ್ಟ ಕಾಂಗ್ರೆಸ್ ಇದ್ದಾಗ ಅಡ್ಡದಾರಿ ಇದ್ದೇ ಇದೆ.

ಸಿದ್ದರಾಮಯ್ಯನವರೇ, ನೀವು ಸಿಎಂ ಆಗಿದ್ದಾಗ ನಮ್ಮ ವಿದ್ಯಾರ್ಥಿಗಳ ಶಿಕ್ಷಣವನ್ನು ಅಸ್ತವ್ಯಸ್ತಗೊಳಿಸುವ ಎಂತೆಂಥ ಯೋಜನೆ ತಂದಿದ್ದಿರಿ? ಎಂದು ಪ್ರಶ್ನಿಸಿದೆ.

https://youtu.be/u_Avl23gwcY

ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಂದ 2000 ಕೋಟಿ ರೂಪಾಯಿ ಲೂಟಿ ಮಾಡಿ ನಕಲಿ ಗಾಂಧಿಗಳು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣವು ರಾಹುಲ್‌ ಗಾಂಧಿ(Rahul Gandhi) ಮತ್ತು ಕಾಂಗ್ರೆಸ್‌ ನಾಯಕರು(Congress Leaders) ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ದೇಶಕ್ಕೇ ತೋರಿಸಿಕೊಟ್ಟಿದೆ.

ಅದೇ ರೀತಿ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಹತ್ಯೆಗೆ ಕಾರಣವಾದ ಪಿಎಫ್‌ಐ(PFI) ಉಗ್ರರನ್ನು 2015ರಲ್ಲಿ ಹೊರಗೆ ಬಿಟ್ಟವರು ಯಾರು? ಭಯೋತ್ಪಾದಕರೊಂದಿಗಿನ ತಮ್ಮ ಅವಿನಾಭಾವ ಸಂಬಂಧದ ಬಗ್ಗೆ ಸಿದ್ದರಾಮಯ್ಯ(Siddaramaiah) ಉತ್ತರಿಸಬೇಕು.

ಇದನ್ನೂ ಓದಿ : https://vijayatimes.com/hdk-speaks-with-kcr/

ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರು, ಗಾಂಧಿ ಕುಟುಂಬದ ಬೆಂಬಲ ಮತ್ತು ಆಶೀರ್ವಾದದಿಂದ ಮೂರ್ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದಾಗಿ (State BJP Defends Bommai Government) ಒಪ್ಪಿಕೊಂಡಿದ್ದಾರೆ. ಇದು ಕಾಂಗ್ರೆಸ್‌ ಪಕ್ಷದ ಗುಲಾಮ ಮತ್ತು ಭ್ರಷ್ಟ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದೆ.

2008ರಲ್ಲಿ, ಮುಂಬೈ ಮೇಲೆ ಭಯೋತ್ಪಾದಕ ದಾಳಿಯಲ್ಲಿ 170 ಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದರು. ಆಗ ರಾಹುಲ್‌ ಗಾಂಧಿ ಏನು ಮಾಡುತ್ತಿದ್ದರೆಂದು(State BJP Defends Bommai Government) ಊಹಿಸಿ? ದೆಹಲಿಯ ಫಾರ್ಮ್ಹೌಸ್ನಲ್ಲಿ ಪಾರ್ಟಿ ಮಾಡುತ್ತಿದ್ದರು.

ಇದು ನೋಡಿ ಕಾಂಗ್ರೆಸ್‌ನ ರಾಷ್ಟ್ರೀಯತೆ ಎಂದರೆ. ಆದರೆ ಈಗ ಇವರೇ ಭಾರತ್‌ ಜೋಡೋ ನಾಟಕ ಶುರು ಮಾಡಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದೆ.

Exit mobile version