ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಮೂಗಿನಡಿಯಲ್ಲಿಯೇ ಶಿಕ್ಷಕ ಹುದ್ದೆಯೊಂದಕ್ಕೆ 5-10 ಲಕ್ಷ ಡೀಲ್ ನಡೆದಿದೆ : ಬಿಜೆಪಿ

Congress

Bengaluru : ಸಿದ್ದರಾಮಯ್ಯ(Siddaramaiah) ಸಿಎಂ ಆಗಿದ್ದಾಗ, ಅವರ ಮೂಗಿನಡಿಯಲ್ಲಿಯೇ ಶಿಕ್ಷಕ ಹುದ್ದೆಯೊಂದಕ್ಕೆ 5 ರಿಂದ 10 ಲಕ್ಷ ಡೀಲ್ ನಡೆದಿದೆ ಎಂದು ರಾಜ್ಯ ಬಿಜೆಪಿ(State BJP) ಆರೋಪಿಸಿದೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಅವರ ಮೂಗಿನಡಿಯಲ್ಲಿಯೇ ಶಿಕ್ಷಕ ಹುದ್ದೆಯೊಂದಕ್ಕೆ 5 ರಿಂದ 10 ಲಕ್ಷ ಡೀಲ್ ನಡೆದಿದೆ. ಕಾಂಗ್ರೆಸ್ಸಿಗರೇ, ಸರ್ಕಾರಿ ಹುದ್ದೆಗಳನ್ನು ಮಾರಾಟ ಮಾಡಿ ನೀವು ಎಷ್ಟು % ಕಮಿಷನ್ ಗಳಿಸಿದ್ದೀರಿ? ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ : https://vijayatimes.com/elephants-to-look-out-cheetahs/

ಕಾಂಗ್ರೆಸ್ ಸರ್ಕಾರದ(Congress Government) ಪ್ರಭಾವಿ ಮಂತ್ರಿಗಳ ಶ್ರೀರಕ್ಷೆ ಇಲ್ಲದೆ ಶಿಕ್ಷಕರ ಅಕ್ರಮ ನೇಮಕಾತಿ ಹಗರಣದ ಜಾಲ ರಾಜ್ಯವ್ಯಾಪಿ ಪಸರಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿತರಾಗಿದ್ದಕ್ಕಿಂತ ಹೆಚ್ಚಾಗಿ ಹೈಕಮಾಂಡ್ಗೆ ಕಪ್ಪ ಕಾಣಿಕೆ ನೀಡುವುದರಲ್ಲಿ ಮಗ್ನವಾಗಿತ್ತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಡೆದ ಅಕ್ರಮ ಶಿಕ್ಷಕರ ನೇಮಕಾತಿ ಹಗರಣ ಬಗೆದಷ್ಟು ಬಯಲಾಗುತ್ತಿದೆ. ಈ ಹಗರಣದ ಜಾಲ ರಾಜ್ಯವ್ಯಾಪಿ ವಿಸ್ತರಿಸಿದೆ ಎಂದು ಸಿಐಡಿ(CID) ತನಿಖೆಯಲ್ಲಿ ತಿಳಿದು ಬರುತ್ತಿದೆ. ಕಾಂಗ್ರೆಸ್ ಸರ್ಕಾರ 100% ಕಮಿಷನ್ ಸರ್ಕಾರವಾಗಿತ್ತು ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

https://youtu.be/BUiwTHnV8ME ಸದನದಲ್ಲಿ ಆರ್.ಅಶೋಕ್- ಸಿದ್ದರಾಮಯ್ಯ ಮಾತಿನ ಜಟಾಪಟಿ!

ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ 100% ಕಮಿಷನ್ ಸರ್ಕಾರವಾಗಿತ್ತು ಎನ್ನುವುದಕ್ಕೆ ಶಿಕ್ಷಕರ ಅಕ್ರಮ ನೇಮಕಾತಿ ಹಗರಣವೇ ಸಾಕ್ಷಿ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ(Corruption) ಎಂದರೆ ಕಾಂಗ್ರೆಸ್ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಇನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದಿದೆ ಎನ್ನಲಾಗಿದ್ದು, ಈ ಹಗರಣದ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದಿದೆ ಎಂಬುದು ಸಿಐಡಿಯ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

• ಮಹೇಶ್.ಪಿ.ಎಚ್

Exit mobile version