ಅಳಿಸುತಲಿ ಅಳಿಸುವುದು ಅತಿಶಯದ ಕುಮಾರಸ್ವಾಮಿ ಧರ್ಮ : ಬಿಜೆಪಿ ಲೇವಡಿ

bjp

ಮುಂದಿನ ಚುನಾವಣೆಯಲ್ಲಿ(Election) ಕಣ್ಣೀರಿನ ಮೂಲಕವಾದರೂ ಇರುವ 30 ಉಳಿಸಿಕೊಳ್ಳಲು ಜೆಡಿಎಸ್(JDS) ಹೆಣಗಾಡುತ್ತಿದೆ. ಹವಾಮಾನ ಇಲಾಖೆ ನೀಡುವ ಮಳೆಯ ಲೆಕ್ಕವಾದರೂ ತಪ್ಪಬಹುದು ಆದರೆ, ಚುನಾವಣೆ ಹತ್ತಿರದಲ್ಲಿರುವಾಗ ಜೆಡಿಎಸ್ ನಾಯಕರ ಕಣ್ಣೀರಿನ ಮಳೆಯ ಲೆಕ್ಕ ಎಂದಿಗೂ ತಪ್ಪದು. ಇಲ್ಲದ ಕಣ್ಣೀರು ಒತ್ತರಿಸಿ ಬರುವುದು ಇಲ್ಲಿ ಸಾಮಾನ್ಯ. ಒಂದೆಡೆ ಜನತಾ ಜಲಧಾರೆ, ಮತ್ತೊಂದೆಡೆ ಕಣ್ಣೀರಧಾರೆ. ಒಟ್ಟಿನಲ್ಲಿ ನೀರೋ, ನೀರು. ಮುಂದಿನ ಚುನಾವಣೆಯ ನಂತರ ಜೆಡಿಎಸ್ ಪಕ್ಷ(JDS Party) ಮುಳುಗಲಿದೆ ಎಂಬುದರ ಸೂಚನೆಯಿದು ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.


“ಜೆಡಿಎಸ್ ಕಣ್ಣೀರೋತ್ಸವ” ಎಂಬ ಹ್ಯಾಷ್‌ಟ್ಯಾಗ್‌(Hashtag) ಬಳಸಿ, ಸರಣಿ ಟ್ವೀಟ್‌(Tweet) ಮಾಡಿರುವ ಬಿಜೆಪಿ, ಒಂದೆಡೆ ಜನತಾ ಜಲಧಾರೆ, ಮತ್ತೊಂದೆಡೆ ಕಣ್ಣೀರಧಾರೆ. ಒಟ್ಟಿನಲ್ಲಿ ನೀರೋ, ನೀರು. ಮುಂದಿನ ಚುನಾವಣೆಯ ನಂತರ ಜೆಡಿಎಸ್ ಪಕ್ಷ ಮುಳುಗಲಿದೆ ಎಂಬುದರ ಸೂಚನೆಯಿದು. ಜೆಡಿಎಸ್ ದೋಣಿಯಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳಷ್ಟೇ ದಡ ಸೇರಬಹುದು, ಮಿಕ್ಕವರು ಮುಳುಗುವುದು ಪಕ್ಕಾ. ಅಳು ಸಹಜ ಧರ್ಮ, ಅಳಿಸುವುದು ಪರಧರ್ಮ. ಅಳಿಸುತಲಿ ಅಳಿಸುವುದು ಅತಿಶಯದ ಕುಮಾರಸ್ವಾಮಿ ಧರ್ಮ ಎಂದು ವ್ಯಂಗ್ಯವಾಡಿದೆ.


ಈ ಬಾರಿ ಪೂರ್ಣ ಬಹುಮತ ನೀಡದಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಕಣ್ಣೀರು ಸುರಿಸುತ್ತಿರುವ ಕುಮಾರಸ್ವಾಮಿ ಅವರು ಸಿದ್ದರಾಮೋತ್ಸವಕ್ಕೆ ಪೈಪೋಟಿ ನೀಡುತ್ತಿದ್ದಾರೆಯೇ? ಮಾಜಿ ಸಿಎಂ ಕುಮಾರಸ್ವಾಮಿ(HD Kumarswamy) ಅವರಿಗೆ ಶುಭಾಶಯಗಳು. ನಿಮ್ಮ ಜನತಾ ಜಲಧಾರೆ ಕಾರ್ಯಕ್ರಮವನ್ನು ಮೀರಿಸುವ ರೀತಿ ಇನ್ನೊಂದು ಯೋಜನೆ ರೂಪಿಸಿದ್ದೀರಿ. ಜೆಡಿಎಸ್ ಕಣ್ಣೀರಧಾರೆ ಯಶಸ್ವಿಯಾಗಲಿ ಎಂದು ಲೇವಡಿ ಮಾಡಿದೆ. ಇನ್ನು ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಜೆಡಿಎಸ್‌ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ, ದೇವೇಗೌಡರನ್ನು ನೆನೆದು ಕಣ್ಣೀರು ಹಾಕಿದ್ದರು.

Exit mobile version