ಫಾಜಿಲ್ ಹತ್ಯೆಯಾಗುತ್ತಿದ್ದಂತೆ ಸಿದ್ದರಾಮಯ್ಯ ಮೈಕೊಡವಿ ನಿಂತಿದ್ದಾರೆ : ಬಿಜೆಪಿ

BJP

ಪ್ರವೀಣ್ ನೆಟ್ಟಾರು(Praveen Nettaru) ಹತ್ಯೆಗೆ(Murder) ಒಂದು ಟ್ವೀಟ್(Tweet) ಮಾಡಿ ಸುಮ್ಮನಾಗಿದ್ದ ಸಿದ್ದರಾಮಯ್ಯ(Siddaramaiah) ಅವರಿಗೆ ಫಾಜಿಲ್ ಹತ್ಯೆಯಾಗುತ್ತಿದ್ದಂತೆ ಮೈಕೊಡವಿ ನಿಂತಿದ್ದಾರೆ. ನೀವೆಷ್ಟು ಪಕ್ಷಪಾತಿ ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ. ಅಮಾಯಕರ ಸಾವಿನಲ್ಲೂ ರಾಜಕೀಯ(Politics) ಬೇಳೆ ಬೇಯಿಸಿಕೊಳ್ಳುವ ನೀಚ ಮನಸ್ಥಿತಿ ಎಂದು ನಿಮ್ಮಿಂದ ತೊಲಗುವುದು? ಎಂದು ಬಿಜೆಪಿ(BJP) ಪ್ರಶ್ನಿಸಿದೆ.


ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಬಿಜೆಪಿ, ದಿವಂಗತ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ(State Government) ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೆ ವಹಿಸಿದೆ. ಇದು ನಮ್ಮ ಬದ್ಧತೆಗೆ ಸಾಕ್ಷಿ, ನಮ್ಮ ಕಾರ್ಯಕರ್ತನ ಬಲಿದಾನದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಲು ನಾವು ಬದ್ಧರಿದ್ದೇವೆ. ಆದರೆ ದನಗಳ್ಳ ಕಬೀರ್ ಹತ್ಯೆಗೆ ಸಿದ್ದರಾಮಯ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಿಸಿತ್ತು. ಆದರೆ ಹಿಂದೂ ಕಾರ್ಯಕರ್ತರ ಹತ್ಯೆಗೆ ಪರಿಹಾರ ಬಿಡಿ, ಅವರ ಮನೆಗೆ ಭೇಟಿ ನೀಡುವ ಕನಿಷ್ಠ ಸೌಜನ್ಯವನ್ನೂ ಕೂಡಾ ಕಾಂಗ್ರೆಸ್ ಪ್ರದರ್ಶಿಸಲಿಲ್ಲ ಎಂದು ಟೀಕಿಸಿದೆ.


ಇನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ 20 ಕ್ಕೂ ಅಧಿಕ ಅಮಾಯಕ ಹಿಂದೂಗಳ ಹತ್ಯೆಯಾಗಿತ್ತು. ಆಗೆಲ್ಲ ಇಲ್ಲದ ಕನಿಕರ, ಹೃದಯಗಳು, ಚುನಾವಣಾ ಸಮಯ ಹತ್ತಿರ ಬಂದಂತೆ ಹೊಡೆದುಕೊಳ್ಳುತ್ತಿದೆ. ನಿಮ್ಮ ರಾಜಕೀಯ ಲಾಭಕ್ಕಾಗಿ, ಸೂತಕದ ಮನೆಯಲ್ಲಿ ಬೇಳೆ ಬೇಯಿಸಿಕೊಳ್ಳುವವರನ್ನು ಜನತೆ ಎಂದೂ ಕ್ಷಮಿಸಲಾರರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಇಂದಿನ ಸ್ಥಿತಿಗೆ ನೇರ ಕಾರಣಕರ್ತರು. ಜೈಲಿನಲ್ಲಿ ಇರಬೇಕಿದ್ದ ರಕ್ತ ಬೀಜಾಸುರರನ್ನು ಬೀದಿಗೆ ಬಿಟ್ಟಿದ್ದು ನೀವೇ ಅಲ್ಲವೇ?

ರಾಜ್ಯದಲ್ಲಿ ಪಿಎಫ್ಐ(PFI) ಸಂಘಟನೆಯ ಕಬಂಧ ಬಾಹು ವಿಸ್ತರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್(Congress) ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದೆ.

Exit mobile version