ಡಿಕೆಶಿ ಮೇಲುಗೈ ಆದ್ರೆ, ‘ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳಲಾಗುವುದಿಲ್ಲʼ ಎಂಬ ಭಯ ಸಿದ್ದರಾಮಯ್ಯನವರಿಗೆ? : ಬಿಜೆಪಿ

Siddaramaiah

Bengaluru : ಪಕ್ಷದಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ಮೇಲುಗೈ ಆದರೆ ‘ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳಲಾಗುವುದಿಲ್ಲʼ ಎಂಬ ಭಯ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೂ ಕಾಡುತ್ತಿದೆಯೇ? ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಹಿರಿಯ ಕಾಂಗ್ರೆಸ್ ನಾಯಕ(Congress Leader) ದೇಶಪಾಂಡೆ ಅವರು ರಾಹುಲ್ ಗಾಂಧಿ(Rahul Gandhi) ಅವರ “ಭಾರತ್‌ ಜೋಡೋ”(Bharat Jodo) ಯಾತ್ರೆಗೆ ಜನ ಸೇರಿಸಲು ನಿರಾಕರಿಸಿದ ಕಾರಣ ಯಾವೊಂದು ಸಮಿತಿಯಲ್ಲೂ ಅವರಿಗೆ ಡಿ.ಕೆ.ಶಿವಕುಮಾರ್‌ ಸ್ಥಾನ ನೀಡಿಲ್ಲ.

https://youtu.be/P7WBxHrhndY

ವಿಪಕ್ಷ ನಾಯಕ ಸಿದ್ದರಾಮಯ್ಯ ಬಣದ ನಾಯಕರನ್ನು ಡಿಕೆಶಿ ಕಡೆಗಣಿಸುತ್ತಿದ್ದಾರೆಯೇ? ಸಿದ್ದರಾಮೋತ್ಸವಕ್ಕೆ ಉತ್ಸಾಹದಿಂದ ದುಡಿದ ಹಿರಿಯ ನಾಯಕರು ಭಾರತ್ ಜೋಡೋ ಯಾತ್ರೆಗೆ ಶ್ರಮಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಸಹನೆ ತೋರ್ಪಡಿಸುತ್ತಿದ್ದಾರೆ.

ಡಿಕೆಶಿ ಮೇಲುಗೈ ಆದರೆ ‘ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳಲಾಗುವುದಿಲ್ಲʼ ಎಂಬ ಭಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಕಾಡುತ್ತಿದೆಯೇ? ಎಂದು ಬಿಜೆಪಿ ಲೇವಡಿ ಮಾಡಿ, ಪ್ರಶ್ನಿಸಿದೆ. ಭಾರತ್ ಜೋಡೋ ಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಆಹ್ವಾನವಿಲ್ಲ.

ಇದನ್ನೂ ಓದಿ : https://vijayatimes.com/health-tips-for-tooth-ache/

ಸಿದ್ದರಾಮೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಸ್ಥಾನವಿರಲಿಲ್ಲ, ಅದರ ಕೋಪವನ್ನು ಭಾರತ್ ಜೋಡೋ ಯಾತ್ರೆಯ ಮೂಲಕ ಡಿ.ಕೆ.ಶಿವಕುಮಾರ್‌ ತೀರಿಸಿಕೊಳ್ಳುತ್ತಿದ್ದಾರೆಯೇ? ಭಾರತ್ ಜೋಡೋ ಯಾತ್ರೆಯ ಸಿದ್ಧತೆಯ ನಡುವೆ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರ ಆಂತರಿಕ ಕಲಹ ಮುಗಿಲು ಮುಟ್ಟಿದೆ.

ಭಾರತ್ ಜೋಡೋ ಯಾತ್ರೆಯ ಬಳಿಕ ಡಿಕೆಶಿ ಮತ್ತು ಸಿದ್ದರಾಮಯ್ಯ ಬಣ ಜೋಡಿಸಲು ಕಾಂಗ್ರೆಸ್‌ ಮತ್ತೊಂದು ಯಾತ್ರೆ ಆಯೋಜಿಸಲಿದೆಯೇ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

Exit mobile version