ಹಾಸಿಗೆ, ದಿಂಬು, ಬಚ್ಚಲು ಮನೆ ಚೊಂಬಿನಲ್ಲೂ ಭಷ್ಟಾಚಾರ ನಡೆಯುತ್ತಿದ್ದಾಗ ಸಿಎಂ ಆಗಿದ್ದು ಭ್ರಷ್ಟ ಸಿದ್ದರಾಮಯ್ಯ : ಬಿಜೆಪಿ ಆರೋಪ

bjp

ಕಾಂಗ್ರೆಸ್(Congress) ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರಗಳು(Corruption) ಒಂದೆರಡಲ್ಲ. ಹಾಸಿಗೆ ದಿಂಬಿನಲ್ಲಿ ಲಂಚ, ಬಚ್ಚಲ ಮನೆಯ ಚೊಂಬಿನಲ್ಲೂ ಲಂಚ. ಇಷ್ಟೆಲ್ಲ ನಡೆಯುತ್ತಿರುವಾಗ ಮುಖ್ಯಮಂತ್ರಿಯಾಗಿದ್ದಿದ್ದು ಭ್ರಷ್ಟ ಸಿದ್ದರಾಮಯ್ಯ(Siddaramaiah). ಭ್ರಷ್ಟ ಸಿದ್ದರಾಮಯ್ಯ ಅವರಿಗೆ ಕಲೆಕ್ಷನ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದದ್ದು ಆಂಜನೇಯ ಎಂದು ಬಿಜೆಪಿ(BJP) ಆರೋಪಿಸಿದೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರ ಪತ್ನಿಯರೂ ಪರ್ಸಂಟೇಜ್ ವ್ಯವಹಾರ ನಡೆಸುತ್ತಿದ್ದರು. ಅಂದಿನ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಸರ್ಕಾರಿ ನಿವಾಸದಲ್ಲೇ ಸಚಿವರ ಪತ್ನಿ ಗುತ್ತಿಗೆ ನೀಡಲು 7 ಲಕ್ಷ ಲಂಚದ ವ್ಯವಹಾರ ಕುದುರಿಸಿದ್ದರು. ಇದರಲ್ಲಿ ಎಷ್ಟು ಪಾಲು ಕೆಪಿಸಿಸಿ ಕಚೇರಿ ತಲುಪಿದೆ? ಸರ್ಕಾರದ ವಸತಿ ನಿಲಯಗಳಲ್ಲಿ ದಿಂಬು, ಹಾಸಿಗೆ, ಜಮಾಖಾನೆ, ಸೊಳ್ಳೆ ಪರದೆ ಖರೀದಿಯಲ್ಲೂ ಆಂಜನೇಯ ಪರ್ಸಂಟೇಜ್ ವ್ಯವಹಾರ ನಡೆಸಿದ್ದರು.

ಆಂಜನೇಯ ಮಾಡುತ್ತಿದ್ದ ಅಕ್ರಮಗಳಿಗೆ ಸಿದ್ದರಾಮಯ್ಯ ಬೆಂಗಾವಲಾಗಿದ್ದಿದ್ದು ಸುಳ್ಳೇ? ಎಂದು ಪ್ರಶ್ನಿಸಿದೆ. ಆಂಜನೇಯ ಕಾಲಾವಧಿಯಲ್ಲಿ ನಡೆದ ಹಾಸಿಗೆ – ದಿಂಬು ಹಗರಣದ ಬಗ್ಗೆ ಕೊನೆಗೂ ಅಂದಿನ ಕಾಂಗ್ರೆಸ್ ಸರ್ಕಾರ(Congress Govt) ಕ್ರಮಕೈಗೊಳ್ಳಲೇ ಇಲ್ಲ. ದಲಿತರು ಹಾಗೂ ಹಿಂದುಳಿದ ವರ್ಗಗಳ ಆಶಯಕ್ಕೆ ಸಿದ್ದರಾಮಯ್ಯ ಸರ್ಕಾರ ಕೊಳ್ಳಿ ಇಟ್ಟಿದ್ದನ್ನು ಮರೆಯಲು ಸಾಧ್ಯವೇ? ಆಂಜನೇಯ ಅವರ ವಿಜಯ ಬ್ಯಾಂಕ್ ಠೇವಣಿ ವ್ಯವಹಾರದಿಂದ ಖುದ್ದು ಕಾಂಗ್ರೆಸ್ ಶಾಸಕರೇ ಕಂಗಾಲಾಗಿದ್ದರು.

ಈ ಬಗ್ಗೆ ಎಸಿಬಿಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಅವರು ಇಂದಿಗೂ ಮೌನವಾಗಿರುವುದೇಕೆ? ಆಂಜನೇಯ ಅಕ್ರಮವಾಗಿ ಕೂಡಿಟ್ಟಿದ್ದ ಅಕ್ರಮ ಸಂಪಾದನೆಯಲ್ಲಿ ಸಿದ್ದರಾಮಯ್ಯ ಶೇರು ಎಷ್ಟು? ಎಂದು ಪ್ರಶ್ನಿಸಿದೆ. ಆಂಜನೇಯ ಅವರು ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ “ವಿಜಯ ಬ್ಯಾಂಕ್” ಎಂಬ ಕೋಡ್ ವರ್ಡ್ ಕಾಂಗ್ರೆಸ್ ಪಕ್ಷದಲ್ಲಿ ಚಲಾವಣೆಯಲ್ಲಿತ್ತು. ಸಿದ್ದರಾಮಯ್ಯ ಅವರೇ ಆಂಜನೇಯ ಅವರ ವಿಜಯ ಬ್ಯಾಂಕ್ನಲ್ಲಿ ಠೇವಣಿಯಿಟ್ಟ ಮೊತ್ತವೆಷ್ಟು? ಸಮಾಜ ಕಲ್ಯಾಣ ಇಲಾಖೆ ಎಂದರೆ ದಲಿತರು, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದವರ ಬದುಕಿನ ಜೀವನಾಡಿ.

ಆದರೆ ಆಂಜನೇಯ ಅವರು ಸಮಾಜ ಕಲ್ಯಾಣ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಇಲಾಖೆ ಭ್ರಷ್ಟಾಚಾರದ ಕೂಪದಂತಿತ್ತು. ಸಿದ್ದರಾಮಯ್ಯ ಸರ್ಕಾರದ 40% ಕಮಿಷನ್ ರೂವಾರಿಯೇ ಎಚ್.‌ಆಂಜನೇಯ ಎಂದು ಆರೋಪಿಸಿದೆ.

Exit mobile version