Karnataka : ಮಾನ್ಯ ಸಿದ್ದರಾಮಯ್ಯ(Siddaramaiah) ಅವರೇ, ಮೊದಲು ಕಾಂಗ್ರೆಸ್(Congress) ಪಕ್ಷದೊಳಗಿರುವ ಭೀತಿಯನ್ನು ನಿವಾರಿಸಿಕೊಳ್ಳಿ. ಡಿಕೆಶಿ, ಖರ್ಗೆ, ಪರಮೇಶ್ವರ್ ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ರಾಜ್ಯ ಬಿಜೆಪಿ(State BJP), ಜನ ಸ್ಪಂದನ ಕಾರ್ಯಕ್ರಮದ ಯಶಸ್ಸಿಗೆ ಕಾಂಗ್ರೆಸ್ ದಿಕ್ಕೆಟ್ಟಿದೆ. ಬಿಜೆಪಿಯ ಜನಸ್ಪಂದನ ಕಾರ್ಯಕ್ರಮ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.
ಇದನ್ನೂ ಓದಿ : https://vijayatimes.com/variety-of-fruits-list-are-here/
ಜನರು ಬಿಜೆಪಿ ಪಕ್ಷದ ಜೊತೆಗೆ ಇದ್ದಾರೆ ಎನ್ನುವುದು ರಾಜ್ಯದಲ್ಲಿ ನಡೆದ ಮೋದಿ ಕಾರ್ಯಕ್ರಮ ಮತ್ತು ಜನಸ್ಪಂದನ ಸಮಾವೇಶವೇ ಸಾಕ್ಷಿಯಾಗಿದೆ. ಮಾನ್ಯ ಸಿದ್ದರಾಮಯ್ಯ ಅವರೇ, ಮೊದಲು ಕಾಂಗ್ರೆಸ್ ಪಕ್ಷದೊಳಗಿರುವ ಭೀತಿಯನ್ನು ನಿವಾರಿಸಿಕೊಳ್ಳಿ. ಡಿಕೆಶಿ, ಖರ್ಗೆ, ಪರಮೇಶ್ವರ್ ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ.

2013 ರಲ್ಲಿ ನೀವು ಮಾಡಿದ ಪಾಪಕ್ಕೆ 2023 ರಲ್ಲಿ ನಿಮ್ಮದೇ ಪಕ್ಷದ ನಾಯಕರು ಪ್ರಾಯಶ್ಚಿತ್ತದ ಭಾಗ್ಯ ಕಲ್ಪಿಸಲಿದ್ದಾರೆ ಎಂದು ವ್ಯಂಗ್ಯವಾಡಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷದ “ಭಾರತ್ ಜೋಡೋ ಯಾತ್ರೆ”ಯನ್ನು ಟೀಕಿಸಿದ್ದು, ಕಾಂಗ್ರೆಸ್ ಭೂಮಿಯ ಮೇಲಿನ ಸ್ವರ್ಗವಾದ ಕಾಶ್ಮೀರವನ್ನು ಒಡೆದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನಾಗಿ ಮಾಡಿತು.
ಕಾಂಗ್ರೆಸ್ನ ಚರಿತ್ರೆ – ಭಾರತ್ ತೋಡೋ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಪರಿವಾರ ಜೋಡೋ ಯಾತ್ರೆಯ ವಿಶೇಷತೆಗಳು. ದುಬಾರಿ ಬೆಲೆಯ ವಸ್ತ್ರ ಧರಿಸಿ, ಕೋಟಿಗಟ್ಟಲೆ ಮೌಲ್ಯದ ಕಂಟೇನರ್ಗಳಲ್ಲಿ ವಾಸ್ತವ್ಯ ಮಾಡುತ್ತಾ ಬೆಲೆಯೇರಿಕೆಯ ಬಗ್ಗೆ ಟೀಕೆ. ಕಾಂಗ್ರೆಸ್ಸಿಗರೇ, ನಿಜಕ್ಕೂ ನಿಮ್ಮ ಯಾತ್ರೆಯ ಉದ್ದೇಶವೇನು? ಎಂದು ಪ್ರಶ್ನಿಸಿದೆ.