`ವ್ಯಕ್ತಿ ಪೂಜೆ’ ನಡೆಸುವಂತೆ ಮಾಡಿದ ಸಿದ್ದರಾಮಯ್ಯನವರ ಹಠಕ್ಕೂ ಅಭಿನಂದನೆಗಳು : ಬಿಜೆಪಿ

Siddaramaiah

75 ನೇ ವರ್ಷದ ಹುಟ್ಟುಹಬ್ಬವನ್ನು(Birthday) ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೆ ಅಭಿನಂದನೆಗಳು. ನಕಲಿ ಗಾಂಧಿ ಕುಟುಂಬ ಹೊರತುಪಡಿಸಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸಿಗರಿಂದ(Congress) ಬೇರೊಬ್ಬ ವ್ಯಕ್ತಿಯ “ವ್ಯಕ್ತಿಪೂಜೆ” ನಡೆಸುವಂತೆ ಮಾಡಿದ ಸಿದ್ದರಾಮಯ್ಯ ಅವರ ಹಠಕ್ಕೂ ಅಭಿನಂದನೆಗಳು ಎಂದು ರಾಜ್ಯ ಬಿಜೆಪಿ(State BJP) ಟ್ವೀಟ್(Tweet) ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದೆ.


“ಜನ ವಿರೋಧಿ ಕಾಂಗ್ರೆಸ್” ಎಂಬ ಹ್ಯಾಶ್‍ಟ್ಯಾಗ್(Hashtag) ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಯ ವೈಭವೀಕರಣವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ. ದೇವರಾಜ ಅರಸು, ಬಂಗಾರಪ್ಪ ಅವರ ರಾಜಕೀಯ ಜೀವನದ ಅಂತ್ಯ ಹೇಗಾಯಿತು ಎಂಬುದನ್ನು ರಾಜ್ಯದ ಜನತೆ ಮರೆತಿಲ್ಲ. ಎಚ್ಚರಿಕೆಯ ಕರೆಗಂಟೆಯಿದು ಎಂದಿದೆ. ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡೆವು ಎಂಬ ಕಾರಣಕ್ಕೆ ನಾವು ಜನೋತ್ಸವ ಕಾರ್ಯಕ್ರಮವನ್ನೇ ರದ್ದು ಮಾಡಿದ್ದೇವೆ. ಆದರೆ, ಅಮೃತ ಮಹೋತ್ಸವಕ್ಕೆ ಆಗಮಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ಅಪಘಾತದಲ್ಲಿ ಮೃತಪಟ್ಟಾಗಲೂ ಕಾಂಗ್ರೆಸ್ ಕೇಕ್ ಕತ್ತರಿಸಿಕೊಂಡು ಸಂಭ್ರಮಿಸುತ್ತಿದೆ.

ಕಾರ್ಯಕರ್ತನ ಸಾವಿಗೂ ಇಲ್ಲಿ ಬೆಲೆಯಿಲ್ಲ. ನಾಡಿನಾದ್ಯಂತ ಕಂಡು ಕೇಳರಿಯದ ಮಳೆಯಾಗಿ ಅಪಾರ ಸಾವು-ನೋವುಗಳುಂಟಾಗಿದೆ. ಈ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷವೇ ಮುಂದೆ ನಿಂತು ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ರಾಜ್ಯದ ಜನತೆಯ ಕಣ್ಣೀರಿಗೆ ಮಾಡುತ್ತಿರುವ ಅವಮಾನ ಎಂದು ಟೀಕಿಸಿದೆ. ಕಳೆದೆರೆಡು ದಿನಗಳಲ್ಲಿ 11 ಸಾವು ಸಂಭವಿಸಿದೆ, ಕಾಂಗ್ರೆಸ್ ಕಾರ್ಯಕರ್ತ ಅಪಘಾತದಲ್ಲಿ ಮೃತ್ಯು. ಕಾಂಗ್ರೆಸ್ಸಿಗರೇ, ಸೂತಕದ ಮನೆಯಲ್ಲಿ ಸಂಭ್ರಮದ ವಾತಾವರಣ ಎಷ್ಟು ಸರಿ? ಎಂದು ಪ್ರಶ್ನಿಸಿದೆ.

Exit mobile version