ಭಾರತದಲ್ಲಿ(India) ಮಂಕಿಪಾಕ್ಸ್(Monkeypox) ಸೋಂಕಿತರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ.
ಈ ವೈರಸ್(Virus) ಇದೀಗ ನಿಧಾನಕ್ಕೆ ಭಾರತದಲ್ಲಿ ಕಾಣಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದು ಅನೇಕರನ್ನು ಬಾಧಿಸುವ ಸಾಧ್ಯತೆ ಇದೆ. ಹೀಗಾಗಿ ಇದರ ಆರಂಭಿಕ ಲಕ್ಷಣಗಳೇನು? ಮತ್ತು ತಡೆಗಟ್ಟುವುದು ಹೇಗೆ? ಎಂಬುದರ ಮಹತ್ವದ ಮಾಹಿತಿ ಇಲ್ಲಿದೆ ಓದಿ.
ಮಂಕಿಪಾಕ್ಸ್ ಆರಂಭಿಕ ಲಕ್ಷಣಗಳು :
• ಬಾಯಲ್ಲಿ ಹುಣ್ಣುಗಳು ಕಂಡು ಬರುವುದು.
• ಕೈಕಾಲುಗಳಲ್ಲಿ ನೋವು ಕಂಡು ಬರುವುದು.
• ವಿಪರೀತ ಸುಸ್ತು ಆಯಾಸ ಕಂಡು ಬರುವುದು.
• ಮೈಮೇಲೆ ಚಿಕ್ಕ ಚಿಕ್ಕ ಗುಳ್ಳೆಗಳು ಕಂಡು ಬರುವುದು, ನಂತರ ದೊಡ್ಡದಾಗಿ, ಕೀವು ತುಂಬಿಕೊಳ್ಳುತ್ತವೆ.
• ಈ ಗುಳ್ಳೆಗಳು ತುಂಬಾ ನೋವಿನಿಂದ ಕೂಡಿರುತ್ತವೆ.
ಮಂಕಿಪಾಕ್ಸ್ ತಡೆಗಟ್ಟು ವುದು ಹೇಗೆ? :
• ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಿ
• ವೈರಸ್ ತಗುಲಿರುವ ವ್ಯಕ್ತಿಗಳ ನೇರ ಸಂಪರ್ಕ ಮಾಡಬೇಡಿ.
• ಸಾಕು ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ.
• ಸಾಧ್ಯವಾದಷ್ಟು ಬೇರೆ ದೇಶ ಮತ್ತು ರಾಜ್ಯಗಳಿಗೆ ಹೋಗುವ ಪ್ರವಾಸವನ್ನು ಮುಂದೂಡಿ.
• ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
• ನೀರಿಗೆ ಓಟ್ಮೀಲ್ ಹಾಕಿ ಸ್ನಾನ ಮಾಡಿ.
• ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಿ (ವೈದ್ಯರು ಸೂಚಿಸಿರುವ ಮಾತ್ರೆಗಳನ್ನು ಮಾತ್ರ ತೆಗೆದುಕೊಳ್ಳಿ )
• ಓಟ್ ಮೀಲ್ ನೆನೆಸಿ ಅದನ್ನು ಮೈ ಮೇಲೆ ತಿಕ್ಕಿ ಸ್ನಾನ ಮಾಡಿ.
• Anti ಬ್ಯಾಕ್ಟಿರಿಯಾ ಸೋಪು ಬಳಸಿ.
• ಗುಳ್ಳೆಗಳ ಮೇಲೆ ತೆಳು ಬ್ಯಾಂಡೇಜ್ ಸುತ್ತಿ
• ಸಾಕಷ್ಟು ನೀರು ಕುಡಿಯಿರಿ.
• ಕಾಯಿಲೆ ಇರುವ ಪ್ರಾಣಿಗಳಿಂದ ದೂರವಿರಿ.
• ಮನೆ, ಆಫೀಸ್ ಟೇಬಲ್ ಇವುಗಳನ್ನು ಸ್ವಚ್ಛವಾಗಿಡಿ.
• ಬಿಸಿ ಆಹಾರವನ್ನು ಸೇವಿಸಿ.
• ಬೇಯಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಿ.
• ಸೂರ್ಯನ ಶಾಖವನ್ನು ಪಡೆದುಕೊಳ್ಳಿ.