ರಾಜ್ಯದ ಸೌಹಾರ್ದತೆ ಹಾಳಾದರೇನು? ಬಿಜೆಪಿಯ ‘ಅಜೆಂಡಾ’ ಫಲಿಸುತ್ತದೆ : ಕಾಂಗ್ರೆಸ್‌ ವಾಗ್ದಾಳಿ

Bengaluru: ರಾಜ್ಯದ ಸೌಹಾರ್ದತೆ ಹಾಳಾದರೇನು? ಬಿಜೆಪಿಯ(state Congress tweeted against bjp) ‘ಅಜೆಂಡಾ’ ಫಲಿಸುತ್ತದೆ. ಚುನಾವಣೆಯ ಲಾಭ ಖಚಿತವಾಗುತ್ತದೆ.

ರಾಜ್ಯ ಬಿಜೆಪಿಗರಿಗೆ ದ್ವೇಷವೇ ಮಾಡೆಲ್. ದ್ವೇಷಕಾರಲು ಹೆಸರಾದವರನ್ನು ರಾಜ್ಯಕ್ಕೆ ಕರೆಸಿ ದ್ವೇಷ ಬಿತ್ತಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌(Congress) ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಕಾಂಗ್ರೆಸ್‌, ಶಾಂತಿ ಸೌಹಾರ್ದತೆಗೆ ಹೆಸರಾದ ಕರ್ನಾಟಕಕ್ಕೆ ಗಲಭೆ ಪೀಡಿತ,

ಕಾನೂನು ಸುವ್ಯವಸ್ಥೆಯ ಗಂಧ-ಗಾಳಿಯಿಲ್ಲದ ಮಾಡೆಲ್ ಬೇಕೆಂದು ಬಿಜೆಪಿಗರು ಬಯಸುತ್ತಾರೆ. ತಮ್ಮ ವಿರೋಧಿಗಳ ವಿರುದ್ಧ ಬುಲ್ಡೋಜರ್ ನುಗ್ಗಿಸಿ ವಿಕೃತಿ ಮೆರೆಯುವುದು, ದ್ವೇಷ ಕಾರುವುದು ಬಿಜೆಪಿಗೆ ಬೇಕಿರುವ ಮಾಡೆಲ್.

ಕಾನೂನು ಪಾಲಿಸುವುದು ಕರ್ನಾಟಕದ ಮಾಡೆಲ್. ರಾಜ್ಯದಲ್ಲಿ ಕೋಮುಗಲಭೆಗಳನ್ನು ತಡೆಯುವ ಹೊಣೆಹೊತ್ತ ಮುಖ್ಯಮಂತ್ರಿಗಳು ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಸಹಜ’ ಎಂದು ಗಲಭೆಗೆ ಕಾರಣರಾದ ಪುಂಡರ ಪರ ಮಾತನಾಡುತ್ತಾರೆ. ಪರಿಣಾಮ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಆರೋಪಿಸಿದೆ.

ಇನ್ನೊಂದು ಟ್ವೀಟ್‌ನಲ್ಲಿ, ಬಾಂಬ್ ಸ್ಪೋಟದ ಆರೋಪಿಯೊಬ್ಬರು ಹೀಗೆ ದ್ವೇಷ ಭಾಷಣ ಮಾಡುವಾಗ ರಾಜ್ಯದ ಬಿಜೆಪಿ ನಾಯಕರು ಚಪ್ಪಾಳೆ ತಟ್ಟಿ ತಮಾಷೆ ನೋಡುತ್ತಾರೆ. ತಮ್ಮ ‘ಮತಬುಟ್ಟಿ’ಯನ್ನು ಭದ್ರಪಡಿಸಿಕೊಳ್ಳುತ್ತಾರೆ.

40% ಗೆ ಒಂದು ತಲೆ ತೆಗೆದ ಕಮಿಷನ್ ಗಿರಾಕಿ ಕೆ.ಎಸ್.ಈಶ್ವರಪ್ಪ(state Congress tweeted against bjp) ಅವರು ಬಾಯಿ ತೆರೆದರೆ ಉದುರುವುದು ಅಶ್ಲೀಲದ & ದ್ವೇಷದ ನುಡಿಗಳೇ.

ಶಾಂತಿ ಇದ್ದರೆ ಬಿಜೆಪಿ ಬೇಳೆ ಬೇಯುವುದಿಲ್ಲ, ಏಕೆಂದರೆ ಬಿಜೆಪಿಗೆ ದ್ವೇಷ ಬಿಟ್ಟು ಅಭಿವೃದ್ಧಿಪರ ಯೋಚನೆಗಳಿಲ್ಲ. ರಸ್ತೆ ಗುಂಡಿಗಳಿಗೆ ಉರುಳಿದ ತಲೆಗಳು, ಕಮಿಷನ್ ಕಿರುಕುಳಕ್ಕೆ ಹೋದ ಜೀವಗಳ ಇವರಿಗೆ ಲೆಕ್ಕವಿಲ್ಲ.

ಇದನ್ನೂ ಓದಿ: https://vijayatimes.com/siddaramaiah-hit-back-bjp-leaders/

ಸಮಾಜದಲ್ಲಿನ ಲೋಪಗಳನ್ನು ಅರಿಯಲಾಗದ, ಅಭಿವೃದ್ಧಿಪರ, ಆಡಳಿತಾತ್ಮಕ ಚಿಂತನೆಗಳು ತಿಳಿಯದ ಬಿಜೆಪಿ ನಾಯಕರಿಗೆ ತಿಳಿದಿರುವುದು ದ್ವೇಷ ಬಿತ್ತುವುದೊಂದೇ ಎಂದು ಟೀಕಿಸಿದೆ. ಮತ್ತೊಂದು ಟ್ವೀಟ್‌ನಲ್ಲಿ,

ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದಿದ್ದ “ದ್ವೇಷದ ಕ್ವಾರಿಯ ಮಾಲೀಕ” ತೇಜಸ್ವಿ ಸೂರ್ಯಗೆ(Tejaswi surya) ತಿಳಿದಿದ್ದು ಎರಡೇ, ದ್ವೇಷ ಹಾಗೂ ದೋಸೆ.

ಪಂಪ್ ವೆಲ್ ಮೇಲ್ಸೇತುವೆಯನ್ನು ನಿಗದಿಯಂತೆ ಪೂರ್ಣಗೊಳಿಸಲಾಗದ ನಳಿನ್‌ಕುಮಾರ ಕಟೀಲ್‌(Nalin kumar kateel)

ಅವರು ಸೂರತ್ಕಲ್ ಟೋಲ್ ಗೇಟ್(Surathkal toll gate) ವಿಚಾರದಲ್ಲಿ ಕರಾವಳಿಗರ ಕಿವಿ ಮೇಲೆ ಹೂವಿಟ್ಟಂತೆ ಈಗ ಮತ್ತೊಂದು ಲವ್ ಜಿಹಾದ್(Love jihad) ಹೂವು ಇಡಲು ಹೊರಟಿದ್ದಾರೆ.

ಅಭಿವೃದ್ಧಿ ಆದ್ಯತೆಯಲ್ಲ ಎಂದು ಗಂಟಾಘೋಷವಾಗಿ ಹೇಳಿರುವ ಬಿಜೆಪಿಯನ್ನು ಜನ ಈಗಾಗಲೇ ತಿರಸ್ಕರಿಸಿಯಾಗಿದೆ ಎಂದಿದೆ.

Exit mobile version