ಗೆಲುವಿನ ಕಾಂತಾರ ; 60 ವರ್ಷ ಮೇಲ್ಪಟ್ಟ ದೈವನರ್ತಕರಿಗೆ 2000 ರೂ. ಮಾಸಾಶನ ಘೋಷಿಸಿದ ಸರ್ಕಾರ

Bengaluru : ನಮ್ಮ ಹೆಮ್ಮೆಯ ಕಾಂತಾರ (State Govt Responds to Kantara) ಸಿನಿಮಾ ಕರ್ನಾಟಕ ಗಡಿಯನ್ನು ದಾಟಿ ಹೊರ ರಾಜ್ಯ, ಹೊರದೇಶಗಳಲ್ಲಿಯೂ ಸದ್ದು ಮಾಡುತ್ತಿದೆ.

ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿಯಾದ ದೈವ, ಭೂತಾರಾಧನೆ ಬಗ್ಗೆ ಕಥೆ ಹೊಂದಿರುವ ಕಾಂತಾರ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿರುವ ನಡುವೆ ಕರಾವಳಿ ಭಾಗದಲ್ಲಿ ದೈವ ನರ್ತಕರಿಗೆ ಕರ್ನಾಟಕ ಸರ್ಕಾರ ದೀಪಾವಳಿ ಹಬ್ಬದ ಈ ಶುಭ ಸಮಯದಲ್ಲಿ ಒಂದು ಶುಭ ಸುದ್ದಿ ನೀಡಿದೆ.

ಕಾಂತಾರ ಸಿನಿಮಾವನ್ನು ನೋಡಿದ ಅನೇಕರು, ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಒಳ್ಳೆಯ ಯೋಜನೆಗಳನ್ನು ತರಬೇಕು, ಅವರಿಗಾಗಿ ಮಾಸಾಶನ ನೀಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದೀಗ, ದೈವ ನರ್ತನ ಮಾಡುವವರಿಗೆ ಮಾಸಾಶನ ನೀಡಲು ಸರ್ಕಾರ ತೀರ್ಮಾನಿಸಿದೆ.

https://fb.watch/ghX4znH5C1/ ಹೊಸ ಪಿಂಚಣಿ ಯೋಜನೆ ಬದಲು ಹಳೆ ಪಿಂಚಣಿ ಪದ್ಧತಿಗೆ ಒತ್ತಾಯ!

ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. 60 ವರ್ಷ ಮೇಲ್ಪಟ್ಟಿರುವ ದೈವನರ್ತನ ಮಾಡುವವರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಮಾಸಾಶನ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಈ ಕುರಿತು ಟ್ವೀಟ್ (State Govt Responds to Kantara) ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, “ಕರ್ನಾಟಕವು ಸಂಸ್ಕೃತಿ, ಆಚರಣೆಗಳ ನೆಲೆಬೀಡು.

ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಭೂತಾರಾಧನೆಯು ಸಹ ಒಂದು. ಭೂತಾರಾಧನೆಯಲ್ಲಿ ದೈವ ನರ್ತನ ಮಾಡುವ ಕಲಾವಿದರ ಹಿತದೃಷ್ಟಿಯನ್ನು ಗಮನಿಸಿ,

60 ವರ್ಷಕ್ಕೂ ಮೇಲ್ಪಟ್ಟ ದೈವನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಹೆಯಾನ 2 ಸಾವಿರ ಮಾಸಾಶನ ನೀಡಲು ನಿರ್ಧರಿಸಲಾಗಿದೆ” ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಈ ಯೋಜನೆಯ ಲಾಭವನ್ನು ಪಡೆಯಲು, ದೈವಾರಾಧನೆ ಮತ್ತು ಭೂತಾರಾಧನೆಯ ನರ್ತನದಲ್ಲಿ ತೊಡಗಿರುವ ಬಂಧುಗಳು ಅಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

ಇದನ್ನೂ ಓದಿ : https://vijayatimes.com/ashgabat-worlds-richest-city/


ಇದೇ ಸಂದರ್ಭದಲ್ಲಿ, ನಟ ಚೇತನ್ ಅಹಿಂಸ ಹೇಳಿಕೆಗೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್ “ಸಂಸ್ಕೃತಿ‌ ಇಲ್ಲದವರು ಸಂಸ್ಕೃತಿಯ ಬಗ್ಗೆ ಮಾತಾಡಬಾರದು, ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ.

ಯಾರೋ ಒಬ್ಬ ವ್ಯಕ್ತಿ ಏನೇನೋ ಹೇಳಿದ ಮಾತ್ರಕ್ಕೆ, ನಮ್ಮ ನೆಲದ ಸಂಸ್ಕೃತಿಯಿಂದ ಯಾರೂ ದೂರವಾಗಲು ಸಾಧ್ಯವಿಲ್ಲ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗವಾಗಿದೆ” ಎಂದು ಸಚಿವರು ಹೇಳಿದರು.
Exit mobile version