Karnataka : ಹಿಜಾಬ್ ಮರುಸ್ಥಾಪನೆಯು ಜಾತ್ಯತೀತತೆಗೆ ವಿರುದ್ಧವಾಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ (Statement on Hijab ban) ಹಿಜಾಬ್‌ಗಳ ಮರುಸ್ಥಾಪನೆಗೆ ಮುಂದಾಗಬಾರದು ಎಂದು ನಟ ಹಾಗೂ
ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (Chethan Ahimsa) ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಹಿಜಾಬ್ ನಿಷೇಧವನ್ನು ಕಾಂಗ್ರೆಸ್ ಮರುಪರಿಶೀಲಿಸಲಿದೆ ಎಂದು ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.

ಆದರೆ ನಿಜವಾದ ಜಾತ್ಯತೀತತೆಗಾಗಿ, ಎಲ್ಲಾ ಧರ್ಮಗಳ/ಸಂಸ್ಕೃತಿಗಳ ಗುರುತುಗಳನ್ನು ನಿಷೇಧಿಸುವವರೆಗೆ ‘ಹಿಜಾಬ್ ನಿಷೇಧ’ (Hijab ban) (ಯೂನಿಫಾರ್ಮ್ಸ್) ವಿಸ್ತರಿಸಬೇಕು. ಈ ಗುರುತುಗಳಲ್ಲಿ ಕುಂಕುಮ/ಬಿಂದಿ/
ಇಷ್ಟಲಿಂಗ/ ಪೇಟ/ಬಳೆಗಳು/ಹೂಗಳು/ಜನಿವಾರ/ವಿಭೂತಿ/ಶಿಲುಬೆ/ಇತ್ಯಾದಿ ಸೇರಿವೆ. ಹಿಜಾಬ್ ಮರುಸ್ಥಾಪನೆಯು ಜಾತ್ಯತೀತತೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಇನ್ನೊಂದು ಬರಹದಲ್ಲಿ, 2023 ರ ಈ ಚುನಾವಣೆಯಲ್ಲಿ ಕರ್ನಾಟಕದ ಬಿಜೆಪಿಯು (BJP) ಕಾಂಗ್ರೆಸ್‌ನ ಅರ್ಧಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಿದೆ, ಆದರೆ ಮತಗಳ ಹಂಚಿಕೆಯು ವಿಭಿನ್ನ ಕಥೆಯನ್ನು ಹೇಳುತ್ತದೆ.
5 ವರ್ಷಗಳಲ್ಲಿ ಬಿಜೆಪಿಯ ಮತಗಳು 8 ಲಕ್ಷದಷ್ಟು ಹೆಚ್ಚಿವೆ — ಇದು 1989 ರಿಂದ ಮುಂದುವರಿದ (Statement on Hijab ban) ಮುನ್ನಡೆಯಾಗಿದೆ.
ಇದನ್ನೂ ಓದಿ : https://vijayatimes.com/retrieve-lost-aadhaar-card/
2023 ರಲ್ಲಿ, ಕರ್ನಾಟಕವು ಅಧಿಕಾರದ ವಿರುದ್ಧ ಮತ ಚಲಾಯಿಸಿತು; ಆದರೆ ಹಿಂದುತ್ವದ ವಿರುದ್ಧ ಮತ ಚಲಾಯಿಸಿಲ್ಲ. ಬಿಜೆಪಿಯ ಪೊಲಿಟಿಕಲ್ ಹಿಂದುತ್ವವನ್ನು (ಮತ್ತು ಕಾಂಗ್ರೆಸ್ ನ ಪೊಲಿಟಿಕಲ್ ಹಿಂದೂಇಸಮ್ ನ)
ಕಿತ್ತೊಗೆಯಲು, ನಮಗೆ ಸಮಾನತಾವಾದದ ಅಗತ್ಯವಿದೆ. ಇನ್ನು ಕಾಂಗ್ರೆಸ್ ಸರ್ಕಾರ ತಕ್ಷಣ ಮಾಡಬೇಕಾದ ಕೆಲವು ಕೆಲಸಗಳೆಂದರೆ,
ಚುನಾವಣೆಗೂ ಮುನ್ನ ಘೋಷಣೆ ಮಾಡಿರುವ ಎಲ್ಲಾ 5 ಯೋಜನೆಗಳನ್ನು ಜಾರಿಗೊಳಿಸಬೇಕು. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ವಿರೋಧಿ ಮತ್ತು ಮತಾಂತರ ವಿರೋಧಿ ಮಸೂದೆಗಳನ್ನು
ತೆಗೆದುಹಾಕಬೇಕು. ಅದೇ ರೀತಿ ಮುಸ್ಲಿಂ ಸಮುದಾಯದಿಂದ ಕಿತ್ತುಕೊಂಡಿರುವ ಶೇಕಡಾ 4ರಷ್ಟು ಮೀಸಲಾತಿಯನ್ನು ಮರುಸ್ಥಾಪಿಸಿ ಆ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು.

ಇನ್ನು ಜಾತಿ ಗಣತಿಯನ್ನು ಬಹಿರಂಗಗೊಳಿಸಬೇಕು. ಎಸ್ಟಿ ಆಂತರಿಕ ಮತ್ತು ಖಾಸಗಿ ವಲಯದ ಮೀಸಲಾತಿಗಳನ್ನು (ಜಾತಿ/ಪ್ರದೇಶ/ಇತ್ಯಾದಿ) ಜಾರಿಗೊಳಿಸಬೇಕು.
ಅದೇ ರೀತಿ 2020ರಲ್ಲಿ ಬಿ.ಎಸ್.ಯಡಿಯೂರಪ್ಪನವರ (BS Yeddyurappa) ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ರದ್ದು ಮಾಡಬೇಕು. ಆ ಮೂಲಕ ರೈತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.