ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಸ್ಟುವರ್ಟ್‌ ಬಿನ್ನಿ ನಿವೃತ್ತಿ

ಬೆಂಗಳೂರು ಆ 30 : ಭಾರತ ತಂಡದ ಅನುಭವಿ ಆಟಗಾರ ಸ್ಟುವರ್ಟ್‌ ಬಿನ್ನಿ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಷಪ್ಟನೆ ನೀಡಿರುವ ಅವರು ನಾನು ಪ್ರಥಮ ದರ್ಜೆ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಭಾರತ ತಂಡದ ಮಾಜಿ ಆಟಗಾರ ರೋಜರ್‌ ಬಿನ್ನಿ ಅವರ ಪುತ್ರರಾದ ಸ್ಟುವರ್ಟ್ ಬಿನ್ನಿ ಅವರು 2014ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.  ಬಿನ್ನಿ 2014ಜುಲೈ 9ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ದ 2015 ನವೆಂಬರ್‌ 14 ರಂದು ಕೊನೆಯ ಟೆಸ್ಷ್ ಆಡಿದ್ದರು. ಹಾಗೆ ನ್ಯೂಜಿಲೆಂಡ್‌ ವಿರುದ್ದ 2014 ಜನವರಿ 28ರಂದು ಅಂತರರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದರು. ಕೊನೆಯ ಏಕದಿನ 2015 ಅಕ್ಟೋಬರ್‌ 11ರಂದು ದಕ್ಷಿಣ ಆಫ್ರಿಕಾ ವಿರುದ್ದ ಆಡಿದ್ದರು. 17 ಜುಲೈ 2015 ರಲ್ಲಿ ಜಿಂಬಾಬ್ವೆ ವಿರುದ್ದ ಮೊದಲ ಅಂತರರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಿದ ಅವರು ಕೊನೆಯ ಟಿ20 ಪಂದ್ಯವನ್ನು ಆಗಸ್ಟ್ 27ರಂದು ವೆಸ್ಟ್‌ ಇಂಡೀಸ್‌ ವಿರುದ್ದ ಆಡಿದ್ದರು.

ಸ್ಟುವರ್ಟ್‌ ಬಿನ್ನಿ ಭಾರತ ಪರ 6ಟೆಸ್ಟ್‌ 14ಏಕದಿನ ಮತ್ತು 3ಟಿ 20 ಪಂದ್ಯಗಳನ್ನು ಆಡಿದ್ದಾರೆ.

Exit mobile version