ಹೃದಯಾಘಾತಕ್ಕೆ ಬಾಲಕ ಬಲಿ: 9ನೇ ತರಗತಿ ವಿದ್ಯಾರ್ಥಿ ತರಗತಿಯಲ್ಲೇ ಕುಸಿದು ಬಿದ್ದು ಸಾವು

Lucknow: ನಗರದ ಸಿಟಿ ಮಾಂಟೆಸ್ಸರಿ ಶಾಲೆಯ ಅಲಿಗಂಜ್ (Student died by Heart Attack) ಕ್ಯಾಂಪಸ್‌ನ 9 ನೇ ತರಗತಿಯ ವಿದ್ಯಾರ್ಥಿಯು ತನ್ನ ರಸಾಯನಶಾಸ್ತ್ರ ತರಗತಿಯಲ್ಲಿ

ಕುಸಿದುಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆಯೊಂದು ಬುಧವಾರ ನಡೆದಿದೆ. ವಿದ್ಯಾರ್ಥಿ ಅತೀಫ್ ಸಿದ್ದಿಕಿ (Atif Siddique) ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಶಂಕಿಸಿದ್ದಾರೆ.

ಶಾಲೆಯ ಶಿಕ್ಷಕ ಖಾನ್ (Khan) ಪ್ರಕಾರ, ಬುಧವಾರ ಶಾಲೆಯ ತರಗತಿಯಲ್ಲಿ ಓದುತ್ತಿದ್ದಾಗ ಅತಿಫ್ ಸಿದ್ದಿಕ ನಿಂತ ಜಾಗದಲ್ಲಿ ತಕ್ಷಣ ಪ್ರಜ್ಞೆತಪ್ಪಿ ನೆಲಕ್ಕೆ ಬಿದ್ದನು. ಅವನ ಹೃದಯವನ್ನು ಪಂಪ್ ಮಾಡಿ ಮತ್ತು

ಬಾಯಿಯಿಂದ ಬಾಯಿಗೆ ಆಮ್ಲಜನಕವನ್ನು ಕೊಟ್ಟಿದ್ದೇನೆ ಆದರೆ ಅವನು ಪ್ರತಿಕ್ರಿಯಿಸಲಿಲ್ಲ. ನಂತರ ಶಾಲೆಯ ಶಿಕ್ಷಕರು ವಿದ್ಯಾರ್ಥಿಯ ಬಳಿಗೆ ಹೋಗಿ ಎದೆಯ ಭಾಗವನ್ನು ಒತ್ತಿ ಎಚ್ಚರಿಸಲು ಪ್ರಯತ್ನಿಸಿದರು

ಮತ್ತು ಬೇರೆ ಮಕ್ಕಳು ಸಹ ತಕ್ಷಣ ಕೈ ಕಾಲುಗಳನ್ನು ಒತ್ತಿ ನೀರು ಕುಡಿಸಲು ಪ್ರಯತ್ನಿಸಿದರು ಆದರೆ ಆ ಮಗುವಿಗೆ ಪ್ರಜ್ಞೆ ಬರಲೇ ಇಲ್ಲ.

ನಂತರ ನಾವು ಶಾಲೆಯ ನರ್ಸ್‌ಗೆ (Nurse) ಕರೆ ಮಾಡಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ಅಲ್ಲಿಂದ ಅವರನ್ನು ಕೆಜಿಎಂಯುಗೆ ದಾಖಲಿಸಲಾಯಿತು. ಇದು ನಮ್ಮೆಲ್ಲರನ್ನೂ ಬಹಳ

ದುಃಖ ಮತ್ತು ಆಘಾತಕ್ಕೆ ತಳ್ಳಿದೆ. ಅತೀಫ್ ಅವರನ್ನು ಅವರ ಶಿಕ್ಷಕ ಮತ್ತು ಶಾಲೆಯ ನರ್ಸ್ ಕಾರಿನಲ್ಲಿ ಹತ್ತಿರದ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ದರು ಎಂದು ಖಾನ್ ಹೇಳಿದ್ದಾರೆ.

ಅಷ್ಟರಲ್ಲಾಗಲೇ ಮಗುವಿನ ತಂದೆಗೂ ಮಾಹಿತಿ ನೀಡಲಾಗಿತ್ತು ಮತ್ತು ಅವರು ಕೂಡ ವೈದ್ಯಕೀಯ ಕೇಂದ್ರವನ್ನು ತಲುಪಿದ್ದರು ಈ ಸುದ್ದಿಯನ್ನು ಕುಟುಂಬಸ್ಥರಿಗೆ ತಿಳಿಸಿದಾಗ ಮನೆಯಲ್ಲಿ ಆತಂಕ

ಉಂಟಾಗಿತ್ತು .ಈ ಘಟನೆಗಳ ನಂತರ ಶಾಲಾ ಆಡಳಿತ ಮಂಡಳಿ ಕೂಡ ಆಘಾತಕ್ಕೊಳಗಾಗಿದೆ. ಎಂದು ಸಿಎಂಎಸ್ (CMS) ವಕ್ತಾರ ರಿಷಿ ಖಾನ್ (Rishi Khan) ತಿಳಿಸಿದ್ದಾರೆ. ಹಲವಾರು ಬಾರಿ

ಸಿಪಿಆರ್ (CPR) ನೀಡಿದರೂ ಮಗುವಿಗೆ ಪ್ರಜ್ಞೆ ಬರದಿದ್ದಾಗ, ಕೆಜಿಎಂಯುಗೆ ಕರೆದೊಯ್ಯಬೇಕೆಂದು ಖನ್ನಾ ಹೇಳಿದರು.

“ನಂತರ ಅವರನ್ನು ವೈದ್ಯಕೀಯ ಕೇಂದ್ರವು ಒದಗಿಸಿದ ಆಂಬ್ಯುಲೆನ್ಸ್‌ನಲ್ಲಿ (Ambulance) ಆಮ್ಲಜನಕ ಸಿಲಿಂಡರ್‌ನೊಂದಿಗೆ ಕೆಜಿಎಂಯುಗೆ (KGMU) ಸಾಗಿಸಲಾಯಿತು ಆದರೆ ಅಲ್ಲಿನ ವೈದ್ಯರು

ಆ ವಿದ್ಯಾರ್ಥಿ ಮರಣಹೊಂದಿದ್ದಾರೆ ಎಂದು ಘೋಷಿಸಿದರು. ಶಾಲಾ ಸಿಬ್ಬಂದಿಗಳು ಸೇರಿ ಮಗುವನ್ನು ಹತ್ತಿರದ ನರ್ಸಿಂಗ್ ಹೋಮ್ ಗೆ (Nursing Home) ಕರೆದುಕೊಂಡು ಹೋಗಿದ್ದಾರೆ ಆದರೆ ಅಲ್ಲಿನ ವೈದ್ಯರು

ಬಾಲಕ ಹೃದಯಾಘಾತದಿಂದ ಸಾವನಪ್ಪಿದ್ದಾನೆ (Student died by Heart Attack) ಎಂದು ದೃಢಪಡಿಸಿದ್ದಾರೆ.

ಈ ಸುದ್ದಿಯನ್ನು ಕುಟುಂಬಸ್ಥರಿಗೆ ತಿಳಿಸಿದಾಗ ಮನೆಯಲ್ಲಿ ಆತಂಕ ಉಂಟಾಗಿತ್ತು .ಈ ಘಟನೆಗಳ ನಂತರ ಶಾಲಾ ಆಡಳಿತ ಮಂಡಳಿ ಕೂಡ ಆಘಾತಕ್ಕೊಳಗಾಗಿದೆ.


ಪ್ರತಿ ಹಂತದಲ್ಲೂ ಮಕ್ಕಳ ಜೊತೆ ಕುಟುಂಬದೊಂದಿಗೆ ಇರುತೇವೆ ಎನ್ನುತ್ತಾರೆ ಶಾಲಾ ಆಡಳಿತ ಮಂಡಳಿ ಈ ಘಟನೆ ಹೃದಯ ವಿದ್ರಾವಕವಾಗಿದ್ದು ಯಾರು ಏನು ಹೇಳುವ ಸ್ಥಿತಿಯಲ್ಲಿಲ್ಲ

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಗು ಮೃತಪಟ್ಟಿತ್ತು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಮತ್ತು ಈ ಪ್ರಕರಣದ ಸಂಪೂರ್ಣ

ಸತ್ಯಾಸತ್ಯತೆ ಗೊತ್ತಾಗುತ್ತದೆ ಎಂದು ಕೆಜಿಎಂಯು ಹೃದ್ರೋಗ ವಿಭಾಗದ ಡಾ.ಅಕ್ಷಯ್ ಪ್ರಧಾನ್ (Dr. Akshay Pradhan) ಹೇಳಿದ್ದಾರೆ.

ಇದನ್ನು ಓದಿ: ಗೃಹಲಕ್ಷ್ಮೀ ಯೋಜನೆಯ 2ನೇ ಕಂತು ಬಿಡುಗಡೆ ಯಾವಾಗ..? ಇಲ್ಲಿದೆ ಮಾಹಿತಿ

ಭವ್ಯಶ್ರೀ ಆರ್.ಜೆ

Exit mobile version