ಭಾರತಕ್ಕೆ ಉಕ್ರೇನ್ ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನವಿ ; ನಮಗೆ ಭಾರತ ಸಹಾಯ ಮಾಡಲೇಬೇಕು!

india

ತ್ರಿವರ್ಣ ಧ್ವಜವನ್ನು(National Flag) ಹಿಡಿದು, ಉಕ್ರೇನ್(Ukraine) ಯುದ್ಧದ ಹತ್ತನೇ ದಿನದಂದು ಕೊನೆಯದಾಗಿ ಮನವಿಯನ್ನು ಮಾಡಲು ಸುಮಿ ಸ್ಟೇಟ್ ಯೂನಿವರ್ಸಿಟಿಯ(Sumy State University) ತೆರೆದ ಸ್ಥಳದಲ್ಲಿ ಹಲವಾರು ಭಾರತೀಯ ವಿದ್ಯಾರ್ಥಿಗಳು ಒಟ್ಟುಗೂಡಿ ಭಾರತಕ್ಕೆ ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಭಾರತಕ್ಕೆ ನಾವು 600 ಕಿಮೀ ದೂರದಲ್ಲಿರುವ ರಷ್ಯಾದ ಗಡಿಗೆ ಹೋಗುತ್ತಿದ್ದೇವೆ, ಏನಾದರೂ ಅನಾಹುತ ಸಂಭವಿಸಿದರೆ, ಭಾರತ ಸರ್ಕಾರ ಮತ್ತು ರಾಯಭಾರ ಕಚೇರಿ ನಮ್ಮ ಸಾವಿಗೆ ಜವಾಬ್ದಾರರು. ವಿದ್ಯಾರ್ಥಿಗಳ ಹೇಳಿಕೆಯ ನಂತರ ಯಾವುದೇ ಅನಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ವಿದ್ಯಾರ್ಥಿಗಳ ಮನವಿ ಬಳಿಕ ಹೇಳಿದ್ದಾರೆ.

ಈಗಾಗಲೇ ಭಾರತ ಸರ್ಕಾರವು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ವಿರಾಮ ಸೂಚಿಸಿತು. ಎರಡು ಸರ್ಕಾರಗಳನ್ನು ಅನೇಕ ಮಾರ್ಗಗಳ ಮೂಲಕ ಬಲವಾಗಿ ಒತ್ತಾಯಿಸಿತು. ನಮ್ಮ ದೇಶದ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಾರಿಡಾರ್ ಕಲ್ಪಿಸಲು ಕೋರಿದೆ. ಕಳೆದ ಹತ್ತು ದಿನಗಳಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಕಾಯುತ್ತಿದ್ದಾರೆ. ಆದರೆ ರಷ್ಯಾದ ಗಡಿಗೆ ಸಮೀಪವಿರುವ ಉಕ್ರೇನ್‌ನ ಪೂರ್ವ ನಗರವಾದ ಸುಮಿಯಲ್ಲಿ ತೀವ್ರವಾದ ಯುದ್ಧ ಸಂಭವಿಸುತ್ತಿರುವ ಕಾರಣ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.

ಕದನ ವಿರಾಮ ಮತ್ತು ಎರಡು ನಗರಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ಅನುಮತಿಸುವುದಾಗಿ ರಷ್ಯಾ ಸರ್ಕಾರ ಶನಿವಾರ ಘೋಷಿಸಿದ ಬೆನ್ನಲೇ, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಜಮಾಯಿಸಿ ನಮಗೆ ಸಹಾಯ ಮಾಡಿ ಎಂದು ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ವಿದ್ಯಾರ್ಥಿಯೊಬ್ಬರು, ನಾವು ಸುಮಿಯಿಂದ 600 ಕಿಮೀ ದೂರದಲ್ಲಿರುವ ಮಾರಿಯೋಪುಲ್ ಸೇರಿದಂತೆ ಎರಡು ನಗರಗಳಲ್ಲಿ ರಷ್ಯನ್ನರು ಮಾನವೀಯ ಕಾರಿಡಾರ್‌ಗಳನ್ನು ಘೋಷಿಸುವುದರ ಬಗ್ಗೆ ನಾವು ಕೇಳಿದ್ದೇವೆ! ದಯವಿಟ್ಟು ಭಾರತ ಸರ್ಕಾರ ನಮಗೆ ಈ ಕೂಡಲೇ ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Exit mobile version