ಚಲಿಸುತ್ತಿರುವ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳ ಹುಚ್ಚಾಟ ; ವಿಡಿಯೋ ವೈರಲ್

Chennai : ಇಂಡಿಯಾ ಟುಡೇ ನೀಡಿರುವ ವರದಿ ಅನುಸಾರ, ಚೆನೈನ ಕಸ್ತೂರಿಬಾಯಿ ಎಂಆರ್‌ಟಿಎಸ್‌ ರೈಲು ನಿಲ್ದಾಣದೊಳಗೆ ಚಲಿಸುತ್ತಿರುವ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳು ಸ್ಟಂಟ್(Students stunts video viral) ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.

ಚೈನ ನಗರದ ಶಾಲಾ ವಿದ್ಯಾರ್ಥಿಗಳ ಈ ಹುಚ್ಚು ಸಾಹಸವನ್ನು ಸ್ಥಳೀಯರು ಹಾಗೂ ನೆಟ್ಟಿಗರು ಖಂಡಿಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳನ್ನು ಚೆನ್ನೈನ 8ನೇ ತರಗತಿ ಶಾಲಾ ವಿದ್ಯಾರ್ಥಿಗಳು(Students stunts video viral) ಎಂದು ಗುರುತಿಸಲಾಗಿದೆ. ಕಸ್ತೂರಿಬಾಯಿ ಎಂಆರ್‌ಟಿಎಸ್‌ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದ್ದು,

https://vijayatimes.com/murderer-aftab-amin/

ಚಲಿಸುತ್ತಿರುವ ಸ್ಥಳೀಯ ರೈಲಿನ ಹಿಂದೆ ಶಾಲಾ ಮಕ್ಕಳು ಓಡಿ ಹೋಗಿ ಹತ್ತುವ ಮೂಲಕ ಹುಚ್ಚು ಸಾಹಸ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡಿದೆ. ಈ ಘಟನೆಯನ್ನು ಕಂಡ ಚೆನೈ ಪೊಲೀಸ್ ವರ್ಗವು,

https://youtu.be/vIhx_ZXOqj8 ನೀವು ಸಿಟಿಜನ್ ಜರ್ನಲಿಸ್ಟ್ ಆಗಬಹುದು

ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ವಿದ್ಯಾರ್ಥಿಗಳು ಇಂತಹ ಹುಚ್ಚು ಸಾಹಸ ಹಾಗೂ ಜೀವಕ್ಕೆ ಹಾನಿಯಾಗುವ ರೀತಿ ಮಾಡುವುದನ್ನು ತಡೆಯಲು ಸೂಕ್ತ ಎಚ್ಚರಿಕೆಗಳು ಮತ್ತು ಅನೇಕ ಜಾಗೃತಿ ಅಭಿಯಾನಗಳನ್ನು ಕೈಗೊಂಡಿದ್ದರೂ ಸಹ ಇಂಥ ಘಟನೆಗಳು ಸಂಭವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

https://youtu.be/RDiyJL0Ae94

ಚೆನ್ನೈ ಬೀಚ್ ಮತ್ತು ವೆಲಾಚೇರಿ ನಿಲ್ದಾಣಗಳ ನಡುವೆ ಇರುವ ಕಸ್ತೂರಿಬಾಯಿ ಮಾಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಎಂಆರ್‌ಟಿಎಸ್) ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಹುಡುಗಾಟ ಸ್ಥಳೀಯರಿಗೆ ಆತಂಕ ಸೃಷ್ಟಿಸಿದೆ. ರೈಲು ನಿಲ್ದಾಣಕ್ಕೆ ಆಗಮಿಸಿ,

ಕೆಲ ಕಾಲ ಫ್ಲಾಟ್ ಫಾರಂ ನಲ್ಲೇ ನಿಂತು ಬಳಿಕ ಹೊರಡಲು ಪ್ರಾರಂಭಿಸಿದ ರೈಲಿಗೆ ಶಾಲಾ ವಿದ್ಯಾರ್ಥಿಗಳು ರೈಲಿನ ಬಾಗಿಲಿನ ಕಂಬಿ ತುದಿಯನ್ನು ಹಿಡಿದಿಟ್ಟುಕೊಂಡು ಓಡಿ ಬಂದು ಹತ್ತುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಒಂದು ದೃಶ್ಯಾವಳಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ,

ಚೆನೈ ಪೊಲೀಸರು(Chennai Police) ಈ ಘಟನೆಯನ್ನು ತಮ್ಮ ಗಮನಕ್ಕೆ ತೆಗೆದುಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಯೊಬ್ಬ ರೈಲನ್ನು ಹಿಡಿದುಕೊಂಡು ಪ್ಲಾಟ್‌ಫಾರ್ಮ್‌ ಮೇಲೆ ಓಡುತ್ತಿದ್ದರೆ,

ಒಳಗೆ ನಿಂತಿದ್ದ ಮತ್ತೊಬ್ಬ ವಿದ್ಯಾರ್ಥಿ ಪ್ಲಾಟ್‌ಫಾರ್ಮ್‌ ಮೇಲೆ ಕಾಲಿನಲ್ಲಿ ಜಾರಿಕೊಂಡು ಸ್ಕಿಡ್‌ ಮಾಡುತ್ತಿರುವುದು ಕಂಡು ಬಂದಿದೆ.

Exit mobile version