ರೈಲಿನೊಳಗೆ ಹರಿತವಾದ ಆಯುಧಗಳಿಂದ ಪುಂಡಾಟ ಮೆರೆದ ವಿದ್ಯಾರ್ಥಿಗಳಿಗೆ ಪೊಲೀಸರು ಮಾಡಿದ್ದೇನು ಗೊತ್ತಾ?

ರೈಲಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ನಡುವೆ ಕಾಲೇಜಿನ ವಿದ್ಯಾರ್ಥಿಗಳು ಹರಿತವಾದ ಆಯುಧಗಳನ್ನು ಕೈಯಲ್ಲಿಡಿದು ಮನಬಂದಂತೆ ಸ್ಟಂಟ್‌ಗಳನ್ನು ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ರೀತಿ ವರ್ತಿಸಿದ ಮೂವರು ಕಾಲೇಜು ವಿದ್ಯಾರ್ಥಿಗಳನ್ನು (Students Use Sharp tools for video) ಕಂಡು ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

https://youtu.be/0-un8Pck_lU

ಕೆಲವು ದಿನಗಳ ಹಿಂದೆ ಹರಿತವಾದ ಆಯುಧಗಳನ್ನು ಬಳಸಿ ಮೂವರು ವಿದ್ಯಾರ್ಥಿಗಳು (Students Use Sharp tools for video) ಪುಂಡಾಟ ಮೆರೆದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

https://vijayatimes.com/ed-raids-at-35-locations/

ಮೂವರನ್ನು ಗುಮ್ಮಿಡಿಪೂಂಡಿ ಮೂಲದ ಅನ್ಬರಸು ಮತ್ತು ರವಿಚಂದ್ರನ್ ಮತ್ತು ಪೊನ್ನೇರಿಯ ಅರುಲ್ ಎಂದು ಗುರುತಿಸಲಾಗಿದೆ. ಅವರೆಲ್ಲರೂ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳ ಬಗ್ಗೆ ಅಧಿಕಾರಿಯೊಬ್ಬರು ಟ್ವೀಟ್‌ ಮಾಡಿದ್ದು, ಡಿಆರ್‌ಎಂ, ರೈಲುಗಳು ಅಥವಾ ರೈಲ್ವೆ ಆವರಣದಲ್ಲಿ ಇಂತಹ ದುರ್ವರ್ತನೆ ಮತ್ತು ಅಪಾಯಕಾರಿ ಸಾಹಸಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ,

ಎಂದು ನಿಮಗೆ ತಿಳಿಸಲು ಬಯಸುತ್ತೇವೆ. ಇಂತಹವರ ವಿರುದ್ಧ @rpfsrmas ಅಥವಾ @grpchennai ಗೆ ದೂರು ನೀಡಲು ಮುಂದೆ ಬನ್ನಿ. ನಮ್ಮ ಪ್ರಯಾಣಿಕರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ.

ಅಕ್ಟೋಬರ್ 9 ರಂದು ನಡೆದ ಈ ಘಟನೆಯು ಸಾರ್ವಜನಿಕರನ್ನು ಗಾಬರಿಗೊಳಿಸಿದೆ ಮತ್ತು ಇವರ ಪುಂಡಾಟದಿಂದ ರೈಲಿನ ಕೋಚ್‌ಗೆ ಮಚ್ಚಿನಿಂದ ಏಟು ಬಿದ್ದಿದೆ. ಇದು ಅಲ್ಲೇ ಕುಳಿತಿದ್ದ ಕೆಲ ಪ್ರಯಾಣಿಕರನ್ನು ಆತಂಕಕ್ಕೊಳಪಡಿಸಿದೆ.

ಅಪಾಯಕಾರಿ ಮತ್ತು ಕಾನೂನುಬಾಹಿರ ಸಾಹಸವನ್ನು ನಡೆಸಿದ ಯುವಕರು ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

https://twitter.com/DrmChennai/status/1579645279405756418?s=20&t=0tbvH9B90mulWqCfJec0lA

ಈ ಮೂವರು ವಿದ್ಯಾರ್ಥಿಗಳ ಪುಂಡಾಟವನ್ನು ಗಮನಿಸಿದ ಪೊಲೀಸರು ಕೂಡಲೇ ವಿಚಾರಣೆ ನಡೆಸಿ ಬಂಧಿಸಿದ್ದಾರೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚೆನ್ನೈನಲ್ಲಿ ಇಂತಹ ಘಟನೆಗಳ ಅನೇಕ ನಿದರ್ಶನಗಳಿವೆ ಮತ್ತು ಕಾಲೇಜು ವಿದ್ಯಾರ್ಥಿಗಳ ಈ ರೀತಿಯ ವರ್ತನೆಯ ರೈಲು ಮಾತ್ರವಲ್ಲ,

https://twitter.com/DrmChennai/status/1579645275911917568?s=20&t=oSqkGyngAsIr82NTT6V_ug

ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬಂದರೆ ಸ್ಥಳೀಯರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸುದ್ದಿಯನ್ನು ತಿಳಿಸಲು ಮುಂದೆ ಬರಬೇಕು ಮತ್ತು ಅಧಿಕಾರಿಗಳಿಂದ ಕ್ರಮಕ್ಕೆ ಒತ್ತಾಯಿಸಬೇಕು ಎಂದು ತಿಳಿಸಿದ್ದಾರೆ.
Exit mobile version